ಭಾನುವಾರ , ಡಿಸೆಂಬರ್ 22 2024
kn
Breaking News

ಹೊರ ಗುತ್ತಿಗೆ ನೌಕರರಿಂದ ನೇರ ವೇತನಕ್ಕೆ ಆಗ್ರಹಿಸಿ ಮನವಿ

Spread the love

ಮೂಡಲಗಿ: ಪುರಸಭೆಯ ವಿವಿಧ ವಿಭಾಗಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳು ನೇರ ವೇತನಕ್ಕೆ ಒಳಪಡಿಸಬೇಕು ಹಾಗೂ ವಿಶೇಷ ನಿಯಮಾವಳಿಯನುಸಾರ ಖಾಯಂಗೊಳಿಸುವಂತೆ ಆಗ್ರಹಿಸಿ ಗುರುವಾರ ಪುರಸಭೆ ಮುಖ್ಯಾಧಿಕಾರಿ ದೀಪಕ್ ಹರ್ದಿ ಹಾಗೂ ತಹಸೀಲ್ದಾರ ಡಿ ಜಿ ಮಹಾತ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ,ಪುರಸಭೆ, ಪಟ್ಠಣ ಪಂಚಾಯಿತಿ ಹೊರ ಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಮ್ ಬಿ ನಾಗಣ್ಣಗೌಡ ಅವರ ನಿರ್ದೇಶನದ ಮೇರೆಗೆ ಮೇ. ೧೯ರಂದೇ ರಾಜ್ಯದೆಲ್ಲಡೆ ಮನವಿ ನೀಡಲಾಗುತ್ತಿದ್ದು ಅದರಂತೆ ನಾವೂ ಕೂಡ ಮನವಿ ಸಲ್ಲಿಸುತ್ತಿದ್ದು ಹೊರ ಗುತ್ತಿಗೆಯಾಗಿ ಕೆಲಸ ನಿರ್ವಹಿಸುತ್ತಿರುವ ನೌಕರರು,ಕಾರ್ಮಿಕರೆಲ್ಲರಿಗೂ ಆಯಾ ಸ್ಥಳೀಯ ಸಂಸ್ಥೆಗಳು ನೇರ ವೇತನ ಪಾವತಿಸಬೇಕು ಹಾಗೂ ನಮ್ಮ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಮೇಶ ಆಲಗೂರ, ಪಾಂಡು ಮುತ್ತಗಿ, ಶಂಕರ ಹಂದಿಗುಂದ, ಲಕ್ಕಪ್ಪ ಗಾಜಿ, ಸಂತೋಷ ನಾಯಿಕ, ಯಶವಂತ ಶಿದ್ಲಿಂಗೆಪ್ಪಗೋಳ, ರವಿ ಕೆಳಗೇರಿ, ನಾಗಪ್ಪ ತಪ್ಸಿ, ಮಿಥುನ ಸಣ್ಣಕ್ಕಿ, ಶಿವಬೋಧ ಕೊಪ್ಪದ, ಶಿವಬೋಧ ಕಪ್ಪಲಗುದ್ದಿ, ಧರೆಪ್ಪ ಕಪ್ಪಲಗುದ್ದಿ, ಅಬ್ದುಲ್ ಪೀರಜಾದೆ, ಈರಪ್ಪ ಕಂಬಾರ, ಪ್ರಕಾಶ ಮಾರಿಹಾಳ, ಶಿವಪ್ಪ ಪೂಜೇರ ಮತ್ತಿತರು ಇದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page