ಮೂಡಲಗಿ: ಅರುಣ ಅಣ್ಣಾಸಾಹೇಬ ರೊಟ್ಟಿ ಅವರು ಮ್ಯಾನೇಜ್‍ಮೆಂಟ್ ಸ್ಟಡೀಸ್ ವಿಷಯದಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಡಾ. ಬಸವರಾಜ ಎಸ್. ಕುಡಚಿಮಠ ಅವರ ಮಾರ್ಗದರ್ಶನದಲ್ಲಿ ಸಲ್ಲಿಸಿದ ಮಹಾಪ್ರಬಂಧವನ್ನು ಪರಿಗಣಿಸಿ ಪಿಎಚ್.ಡಿ. ಪದವಿಯನ್ನು ನೀಡಿರುವರು.
ಇತ್ತಿಚೆಗೆ ಜರುಗಿದ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಕುಲಪತಿ ಪ್ರೊ. ಕರಿಸಿದ್ದಪ್ಪ ಹಾಗೂ ಕೇಂದ್ರ ರಕ್ಷಣಾ ಸಚಿವಾಲಯದ ವೈಜ್ಞಾನಿಕ ಮಾಜಿ ಸಲಹೆಗಾರ ಡಾ. ವಿ.ಕೆ. ಅತ್ರೆ ಅವರು ಅರುಣ ರೊಟ್ಟಿ ಅವರಿಗೆ ಪಿಎಚ್.ಡಿ. ಪದವಿ ಪ್ರಧಾನ ಮಾಡಿರುವರು.
