ಮೂಡಲಗಿ: ನಗರದಲ್ಲಿ ಮಾ. 15 ಸೋಮವಾರದಂದು ಮುಂಜಾನೆ 10-30 ಕ್ಕೆ ಬಿಎಸ್.ಎನ್.ಎಲ್ ಆಫೀಸ್ ಹತ್ತಿರ, ಕುರಣಗಿ ಬಿಲ್ಡಿಂಗ್‍ನಲ್ಲಿ ಶ್ರೀ ಶಿವಬೋಧರಂಗ ಚಿಕ್ಕ ಮಕ್ಕಳ ಆಸ್ಪತ್ರೆಯ ಉದ್ಘಾಟಣೆ ಸಮಾರಂಭ ಜರುಗುವದಾಗಿ ಆಸ್ಪತ್ರೆಯ ಚಿಕ್ಕ ಮಕ್ಕಳ ತಜ್ಞ ಡಾ. ಮನೋಹರ. ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾರಂಭದ ದಿವ್ಯ ಸಾನಿಧ್ಯವನ್ನು ಸ್ಥಳೀಯ ಸಿದ್ಧ ಸಂಸ್ಥಾನ ಮಠದ ಪೀಠಾಧಿಪಗಳಾದ ಶ್ರೀ ದತ್ತಾತ್ರೇಯಬೋಧ ಸ್ವಾಮಿಗಳು ವಹಿಸುವರು. ಸಾನಿಧ್ಯವನ್ನು ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪೂರದ ಶಿವಯೋಗಿಶ್ವರ ಹಿರೇಮಠದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿಗಳು, ಉದ್ಘಾಟಕರಾಗಿ ಅರಭಾಂವಿ ಶಾಸಕರು, ಕೆ.ಎಮ್.ಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ, ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷರು ಯಮಕನಮರಡಿ ಶಾಸಕರಾದ ಸತೀಶ ಜಾರಕಿಹೊಳಿ,ಮುಖ್ಯ ಅತಿಥಿಗಳಾಗಿ ನಿವೃತ್ತ ತಾಲೂಕಾ ವೈದ್ಯಾಧಿಕಾರಿ ಡಾ. ಆರ್ ಎಸ್ ಬೆಣಚಿಣಮರಡಿ, ತಾಲೂಕಾ ವೈದ್ಯಾಧಿಕಾರಿ ಡಾ. ಎಮ್ ಎಸ್ ಕೊಪ್ಪದ, ಅತಿಥಿಗಳಾಗಿ ಶಸ್ತ್ರಚಿಕಿತ್ಸಾ ತಜ್ಞ ಡಾ. ಎಮ್.ಎಮ್ ಮೇದಾರ, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ತಹಶೀಲ್ದಾರ ಡಿ.ಜೆ ಮಹಾತ, ಸಿಪಿಐ ವೆಂಕಟೇಶ ಮುರನಾಳ, ಬಿಇಒ ಅಜಿತ ಮನ್ನಿಕೇರಿ ಭಾಗವಹಿಸುವರು.
Sarvavani Latest Kannada News