ಮೂಡಲಗಿ: ಜಗತ್ತಿನಾದ್ಯಂತ ಹರಡುತ್ತಿರುವ ಮಹಾಮಾರಿ ಮಾರಕ ಕೊರೋನಾ ವೈರಸ್ ಸೊಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಅಂಗನವಾಡಿ,ಆಶಾ ಕಾರ್ಯಕರ್ತೆಯರಿಗೆ,ಪೌರ ಸೇವಾ ಸಿಬ್ಬಂದಿ ಮತ್ತು ಹಿರಿಯ ಪತ್ರಕರ್ತರಿಗೆ ಕೆ.ಇ.ಬಿ.ಪ್ಲಾಟ್ ಈರಣ್ಣ ನಗರದಲ್ಲಿ ಸರಳ ಸನ್ಮಾನ ಸಮಾರಂಭ ನಡೆಯಿತು.
ಗುರುವಾರದಂದು ಸಾಯಂಕಾಲ ಗಜಬರ ಗೋಕಾಕ ಮತ್ತು ಮಾರುತಿ ಹಡಪದ ಅವರು ಹಮ್ಮಿಕೊಂಡ ಸರಳ ಸನ್ಮಾನ ಕಾರ್ಯಕ್ರಮದಲ್ಲಿ ಪೌರ ಸೇವಾ ಸಿಬ್ಬಂದಿ ಹಿರಿಯ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ಮಾತನಾಡಿ, ಕೊರೋನಾ ಸಾಂಕ್ರಾಮಿಕ ಕಾಯಿಲೆಗೆ ಔಷದಿ ಇನ್ನೂ ಸಿಕ್ಕಿಲ್ಲ ಇದಕ್ಕೆ ಸಾಮಾಜಿಕ ಅಂತರವೇ ಮದ್ದು ಮತ್ತು ಮಾಸ್ಕ ಧರಿಸಿಕೊಂಡು ರೋಗ ನಿರೋದಕ ಶಕ್ತಿಯ ಆಹಾರ ಪದಾರ್ಥಗಳನ್ನು ಬಳಸುವುದೆ ಇದಕ್ಕೆ ಔಷದಿ ಆಗಿದೆ. ಕೊರೋನಾ ರೋಗ ಹರಡದಂತೆ ಆಶಾ,ಅಂಗನವಾಡಿ ಸಿಬ್ಬಂದಿ ಮಹತ್ವದ ಕಾರ್ಯ ನಿರ್ವಸಿದ್ದಾರೆ.ನಮ್ಮ ಸೇವೆ ಗುರುತಿಸಿ ಸನ್ಮಾನಿಸುತ್ತಿರುವುದು ನಮಗೆ ಇನ್ನೂ ಹೆಚ್ಚು ಸೇವೆ ಸಲ್ಲಿಸಲು ಪ್ರೋತ್ಸಾಹ ನೀಡಿದಂತಾಗಿದೆ. ನಮ್ಮ ತಾಲೂಕಿನಲ್ಲಿ ಇನ್ನೂ ಕೊರೋನಾ ವೈರಸ್ ಕಾಲಿಟ್ಟಿಲ್ಲ ಇಡುವುದೇ ಬೇಡ ಎಂದು ಶ್ರೀ ಶಿವಬೋಧ ಸ್ವಾಮಿಯಲ್ಲಿ ಬೇಡಿಕೊಳ್ಳುವುದಾಗಿ ಪಾರ್ಥಿಸಿದರು.
ಸರಳ ಸಮಾರಂಭದ ಅದ್ಯಕ್ಷತೆ ವಹಿಸಿದ್ದ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಮಾತನಾಡಿ,ಕೊರೋನಾ ವಾರಿಯರ್ಸಗೆ ಇನ್ನೂ ಹೆಚ್ಚು ಸತ್ಕಾರ ಸನ್ಮಾನಗಳು ನಡೆಯಬೇಕಾಗಿದೆ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸರಕಾರ ಹೆಚ್ಚಿನ ಭದ್ರತೆ ವಹಿಸಲಿ ಎಂದರು.
ಆಶಾ ಕಾರ್ಯಕರ್ತೆಯರಾದ ಶಕುಂತಲಾ ಗೋಲಶಟ್ಟಿ,ಸವಿತಾ ಗೋಟಡಕಿ,ಅಂಗನವಾಡಿ ಕಾರ್ಯಕರ್ತೆಯರಾದ ರೇಖಾ ಪೋಲಿಸ ಪಾಟೀಲ,ಆಯಾ ಶಾಂತವ್ವಾ ಬೆಳ್ಳೆವರಿ ಪೌರ ಕಾರ್ಮಿಕರಾದ ಪಾಂಡು ಮುತಗಿ,ನಾಗಪ್ಪ ತಪ್ಸಿ ಹಿರಿಯ ಪತ್ರಕರ್ತರಾದ ಯ.ಯ.ಸುಲ್ತಾನಪೂರ,ಸುರೇಶ ಪತ್ತಾರ,ಬೀಮಪ್ಪ ಗಡಾದ ಅವರನ್ನು ಸನ್ಮಾನಿಸಲಾಯಿತು.
ಸಂಜು ಕಮತೆ,ಶಂಕರೆಪ್ಪ ಹಡಪದ,ದಾವಲಸಾಬ ಗೋಕಾಕ,ಮಾಲನ್ ಹವಾಲ್ದಾರ,ಸುಮಿತ್ರಾ ಗೋಲಶಟ್ಟಿ,ಬಸವ್ವ ಹಡಪದ ಇನ್ನಿತರರು ಇದ್ದರು.