ಮೂಡಲಗಿ: ಪಟ್ಟಣದಲ್ಲಿ ನಾಲ್ಕು ವೈನ್ಸ್ ಶಾಪ ಸೇರಿ ಒಂದು ಎಮ್.ಎಸ್.ಆಯ್.ಎಲ್ ಪ್ರಾರಂಭಕ್ಕೆ ರವಿವಾರ ಸಂಜೆ ಸಕಲ ಸಿದ್ದತೆಯನ್ನು ಮಾಡಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಕಟ್ಟಿಗೆ ಕಟ್ಟಿ ಹಾಗೂ ಚೌಕ್-ಬಾಕ್ಷಗಳನ್ನು ಮತ್ತು ಬ್ಯಾರಿಕೆಡ್ ಹಾಕಿ ಪೂಜೆ ಸಲ್ಲಿಸಿ ಅಂಗಡಿ ತೆರೆಯಲು ಸಜ್ಜಾಗಿ ನಿಂತಿವೆ.
ಮೂಡಲಗಿ ಪಟ್ಟಣದಲ್ಲಿ ದುರ್ಗಾ ವೈನ್ಸ್, ಹೊನ್ನಮ್ಮಾ ವೈನ್ಸ್, ರಾಜೇಶ್ವರಿ ವೈನ್ಸ್, ಎಂಎಸ್‌ಐಎಲ್ ಹಾಗೂ ಚೇತನ ವೈನ್ಸ್ ಸಜ್ಜಾಗಿ ನಿಂತಿರುವ ದೃಶ್ಯ ಕಾಣಿಸಿತು.
ಕಳೆದ ಎರಡು ತಿಂಗಳುಗಳಿಂದ ಜಾತಕ ಪಕ್ಷಿಯಂತೆ ಎಣ್ಣೆಗಾಗಿ ಕಾಯುತ್ತಿರುವ ಮಧ್ಯಪ್ರಿಯರು ಲವಲವಿಕೆ, ಖುಷಿ ಖುಷಿಯಾಗಿ ಚರ್ಚೆ ಮಾಡುವದು ಹಾಗೂ ದೂರವಾಣಿಯ ಮೂಲಕ ತಮ್ಮ ಗೆಳೆಯರನ್ನು ಕೇಳುವ ಪ್ರಸಂಗಗಳು ನಡೆದಿವೆ.
Sarvavani Latest Kannada News