ಗುರುವಾರ , ಡಿಸೆಂಬರ್ 26 2024
kn
Breaking News

ಸಮಗ್ರ ಶಿಕ್ಷಣದ ಒಂದು ಭಾಗ ಕ್ರೀಡೆ – ಅಜೀತ್ ಮನ್ನಿಕೇರಿ

Spread the love

ಮೂಡಲಗಿ : ಕ್ರೀಡಾ ಚಟುವಟಿಕೆಗಳು ಸಮಗ್ರ ಶಿಕ್ಷಣದ ಒಂದು ಭಾಗ ಕ್ರೀಡೆಯಿಂದ ಆರೋಗ್ಯ ಸುಧಾರಿಸುತ್ತದೆ ಓದಿನಲ್ಲಿ ಆಸಕ್ತಿ ಮೂಡಿಸಲು ಕ್ರೀಡಾ ಚಟುವಟಿಕೆಗಳು ಸಹಕಾರಿ. ಉತ್ತಮ ಕಲಿಕೆಗೆ ಮಕ್ಕಳು ಆರೋಗ್ಯವಂತರಾಗಿರಬೇಕು ವಿಧ್ಯಾರ್ಥಿಗಳು ಓಧಿಗಷ್ಟೇ ಸೀಮತವಾದರೆ ಮಾನಸಿಕ ಒತ್ತಡ ಹೆಚ್ಚುತ್ತದೆ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿದಾಗ ಒತ್ತಡ ನಿವಾರಣೆಯಾಗುತ್ತದೆ. ಅಲ್ಲದೇ ಮಕ್ಕಳಲ್ಲಿ ಸ್ಪರ್ದಾ ಮನೋಬಾವನೆ ಮೂಡುತ್ತದೆ ಆದ್ದರಿಂದ ಶಿಕ್ಷಕರು ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳಸಬೇಕೆಂದು ಮೂಡಲಗಿಯ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ್ ಮನ್ನಿಕೇರಿ ಹೇಳಿದರು.
ಅವರು ಉಪನಿರ್ದೇಶಕರ ಕಾರ್ಯಾಲಯ ಪದವಿ ಪೂರ್ವ ಶಿಕ್ಷಣ ಇಲಾಖೆ ಚಿಕ್ಕೋಡಿ ಮತ್ತು ಮೂಡಲಗಿಯ ಆರ್.ಡಿ.ಎಸ್. ಪಿಯು ಕಾಲೇಜು ಸಂಯುಕ್ತಾಶ್ರದಲ್ಲಿ ಆಯೋಜಿಸಿದ ಮೂಡಲಗಿ ತಾಲೂಕಾ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟವನ್ನು ಉದ್ಟಾಟಿಸಿ ಮಾತನಾಡಿ ಕ್ರೀಡಾ ಚಟುವಟಿಕೆಗಳಿಂದ ಮಕ್ಕಳ ಪ್ರತಿಭೆ ಅನಾವರಣಗೊಳ್ಳುವುದು ಜ್ಞಾನದ ಜೊತೆಗೆ ಮಕ್ಕಳ ಪ್ರತಿಭಾವಂತಿಕೆಯನ್ನು ಕ್ರೀಡಾ ಚಟುವಟಿಕೆಗಳು ಪ್ರೋತ್ಸಾಹ ನೀಡುತ್ತೇವೆ ಪಠ್ಯ ವಿಷಯದ ಜೊತೆಗೆ ಪಠ್ಯೇತರ ವಿಷಯಗಳಲ್ಲಿ ಕ್ರೀಡೆ ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಗೆ ಸಹಾಯಕಾರಿಯಾಗುವುದಲ್ಲದೇ ಕ್ರೀಡೆಯಿಂದಲೇ ಜಗತ್ತಿನಲ್ಲಿ ಪ್ರಖ್ಯಾತಿಯನ್ನು ಗಳಿಸಿದ ಅನೇಕ ಸಾಧಕರನ್ನು ನಾವೂ ಇಲ್ಲಿ ಸ್ಮರಿಸಬಹುದು ಅಂತಹ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಇಂದಿನ ಶಿಕ್ಷಣದ ಒಂದು ಭಾಗವಾಗಿದ್ದು ವಿದ್ಯಾರ್ಥಿಗಳು ಇಂತಹ ವೇದಿಕೆಗಳನ್ನು ಸರಿಯಾಗಿ ಬಳಸಿಕೊಳ್ಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಪಾರ್ಶಿ ವಹಿಸಿಕೊಂಡು ಮಾತನಾಡಿ ಕ್ರೀಡೆ ಮನಸ್ಸಿನ ಬಾವನೆಗಳನ್ನು ಒತ್ತಡಗಳಿಂದ ನಿಯಂತ್ರಿಸಿ ವ್ಯಕ್ತಿತ್ವ ರೂಪಿಸುವ ಒಂದು ಉತ್ತಮ ಮಾರ್ಗ ನಮ್ಮ ಗ್ರಾಮೀಣ ಕ್ರೀಡೆಗಳನ್ನು ಅಂತರಾಷ್ಟ್ರೀಯ ಮಟ್ಟದವರಿಗೊ ವಿಸ್ತರಿಸುವ ಇಂತಹ ವೇದಿಕೆಗಳನ್ನು ಮಕ್ಕಳು ಸರಿಯಾಗಿ ಬಳಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಎಎಸ್‍ಆಯ್ ಚಂದ್ರಶೇಖರ ಗಸ್ತಿ, ಮೂಡಲಗಿ ಪುರಸಭೆ ಸದಸ್ಯರಾದ ಪಿ.ವಾಯ್.ಮನ್ಯಾಳ, ಕಾಶೀಮ ಅಲಿ ಬ್ಯಾಂಕಿನ ಅಧ್ಯಕ್ಷರಾದ ಅನ್ವರ ನದಾಫ, ಕಮಲದಿನ್ನಿ ಗ್ರಾಮಪಂಚಾಯತ ಸದಸ್ಯರಾದ ಈರಪ್ಪ ಜಿನಗನ್ನವರ, ಶ್ರೀಮಹಾಲಕ್ಷ್ಮೀ ಅರ್ಬನ್ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಸಿ.ಎಸ್. ಭಗನಾಳ, ಕ್ರೀಡಾ ಸಂಯೋಜಕ ಎಸ್. ಎಮ್ ಹುದ್ದಾರ ಮೂಡಲಗಿ ವಲಯದ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳ ದೈಹಿಕ ಶಿಕ್ಷಕರು ಹಾಗೂ ಮೂಡಲಗಿ ತಾಲೂಕಿನ ಎಲ್ಲ ಕಾಲೇಜಿನ ಪ್ರಾಚಾರ್ಯರು ದೈಹಿಕ ಉಪನ್ಯಾಸಕರು, ಉಪನ್ಯಾಸಕರು,ಎಂಇಎಸ್ ಎಂಪಿಯಡ್ ಕಾಲೇಜಿನ ಪ್ರಾಚಾರ್ಯರು ಉಪನ್ಯಾಸಕರು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು
ಆರ್.ಡಿ.ಎಸ್. ಕಾಲೇಜು ಪ್ರಾಚಾರ್ಯ ಎಸ್.ಡಿ.ವಾಲಿ ಸ್ವಾಗತಿಸಿದರು. ಉಪನ್ಯಾಸಕ ಮಲ್ಲಪ್ಪಾ ಜ್ಯಾಡರ್ ನಿರೂಪಿಸಿ ವಂದಿಸಿದರು.
ಗುಂಪು ಆಟಗಳಲ್ಲಿ
ವ್ಹಾಲಿಬಾಲ್ : ಬಾಲಕರ ವಿಜೇತ ತಂಡ : ಆರ್.ಡಿ.ಎಸ್. ಪಿ.ಯು ಕಾಲೇಜ ಮೂಡಲಗಿ
ಬಾಲಕಿಯರ ವಿಜೇತ ತಂಡ : ಎಸ್.ಎಸ್.ಆರ್. ಪಿ.ಯು ಕಾಲೇಜ ಮೂಡಲಗಿ


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page