ಮೂಡಲಗಿ: ಇಲ್ಲಿಯ ಹೆಸ್ಕಾಂ ಕಚೇರಿಯ ಹಳ್ಳೂರ ಗ್ರಾಮ ಶಾಖಾಧಿಕಾರಿಗಳಾಗಿ ಬಿ ವಾಯ್ ಕುರಿ ಅಧಿಕಾರ ವಹಿಸಿಕೊಡರು.
ಈ ಮೊದಲು ಇವರು ನರಗುಂದನಲ್ಲಿ ಪಟ್ಟಣ ಶಾಖಾಧಿಕಾರಿಯಾಗಿ ಮೂರು ವರ್ಷ ಕಾರ್ಯ ನಿರ್ವಹಿಸಿ ವರ್ಗಾವಣೆಗೊಂಡು ಸಧ್ಯ ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ಹಳ್ಳೂರ ಗ್ರಾಮ ಶಾಖಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ನೂತನ ಶಾಖಾಧಿಕಾರಿಗೆ ಸಿಬ್ಬಂದಿ ವರ್ಗ ಸ್ವಾಗತಿಸಿದರು. ನಂತರ ಮಾತನಾಡಿದ ಅವರು, ಸಿಬ್ಬಂದಿ,ರೈತರು ಮತ್ತು ಗ್ರಾಹಕರನ್ನು ವಿಶ್ವಾಸಕ್ಕೆ ತಗೆದುಕೊಂಡು ಉತ್ತಮ ಸೇವೆ ಸಲ್ಲಿಸುವುದಾಗಿ ಹೇಳಿದರು.
