ಮೂಡಲಗಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಇಲ್ಲಿಯ ಶ್ರೀ ಮಂಜುನಾಥ ವಿವಿದೋದ್ಧೇಶಗಳ ಸಹಕಾರಿ ಸಂಘದವರು ದಿನಪತ್ರಿಕೆಗಳನ್ನು ಸುರಕ್ಷಿತವಾಗಿ ಹಂಚುವ ಬಡ ಪತ್ರಿಕಾ ವಿತರಕರಿಗೆ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಿಸಿ ಮಾನವೀಯತೆಯನ್ನು ಬಿಂಬಿಸಿದ್ದಾರೆ.
ಸ್ಥಳೀಯ ಪಿಎಸ್‌ಐ ಮಲ್ಲಿಕಾರ್ಜುನ ಸಿಂಧೂರ ಸಂಘದ ಪರವಾಗಿ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಅವರು ‘ಸುದ್ದಿ ಪತ್ರಿಕೆಗಳನ್ನು ನಸುಕಿನಲ್ಲಿ ಮನೆಗಳಿಗೆ ಮುಟ್ಟಿಸುವ ಪತ್ರಿಕೆ ವಿತರಿಸುವವ ಕೆಲಸವು ಅನನ್ಯವಾಗಿದೆ. ಅವರನ್ನು ಗುರುತಿಸಿ ಆಹಾರ ಧಾನ್ಯಗಳ ಕಿಟ್‌ಗಳನ್ನು ನೀಡುವ ಮಂಜುನಾಥ ಸಂಸ್ಥೆಯ ಕಾರ್ಯವು ಶ್ಲಾಘನೀಯವಾಗಿದೆ’ ಎಂದರು.
SUBSCRIBE YOUTUBE CHANNELಬಾಲಶೇಖರ ಬಂದಿ ಮಾತನಾಡಿ ದಿನಪತ್ರಿಕೆಗಳನ್ನು ಹಂಚುವ ಹುಡುಗರು ಕಡು ಬಡವರಾಗಿದ್ದು, ಲಾಕ್‌ಡೌನ್ ಕಷ್ಟದ ಸಂದರ್ಭದಲ್ಲಿ ಮಂಜುನಾಥ ಸಂಸ್ಥೆಯವರು ಸಹಾಯ ಮಾಡುತ್ತಿರುವುದು ಉತ್ತಮ ಕೆಲಸವಾಗಿದೆ ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪ್ರಶಾಂತ ನಿಡಗುಂದಿ ಮಾತನಾಡಿ ಕೊರೊನಾ ಹೊರಾಟ ಸಂದರ್ಭದಲ್ಲಿ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಸಂಸ್ಥೆಯು ಸದಾ ಸಿದ್ಧವಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಸಂಗಪ್ಪ ನಿಡಗುಂದಿ, ಉಪಾಧ್ಯಕ್ಷ ರುದ್ರಪ್ಪ ಬಳಿಗಾರ, ನಿರ್ದೇಶಕ ಶಿವಬಸು ಸುಣಧೋಳಿ, ಹನಮಂತ ಸನದಿ, ಶಿವಬೋಧ ಉದಗುಟ್ಟಿ, ಪಾಂಡು ಮಹೇಂದ್ರಕರ, ಲಕ್ಷ್ಮೀ ಶಿವಾಪುರ, ಶೈಲಾಜಿ ನಾರಾಯಣಕರ, ಕಾರ್ಯದರ್ಶಿ ಬಸವರಾಜ ಕುದರಿ ಇದ್ದರು.
ವರದಿ:ಕೆ.ವಾಯ್ ಮೀಶಿ