ಶನಿವಾರ , ಡಿಸೆಂಬರ್ 21 2024
kn
Breaking News

ಸಂಘಟನೆ, ಸುರಕ್ಷೆ, ಸಂಸ್ಕಾರ, ಈ ಮೂರು ಕಾರ್ಯಗಳ ಜಾರಿಗಾಗಿ ಪಣ ತೊಟ್ಟಿರುವ ಭಜರಂಗದಳದ ಯುವ ಕಾರ್ಯಕರ್ತರ ಶ್ರಮ ಶ್ಲಾಘನೀಯ : ಈರಣ್ಣ ಕಡಾಡಿ

Spread the love

ಮೂಡಲಗಿ: ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಧ್ಯೇಯ ವ್ಯಾಖ್ಯೆವಾಗಿರುವಂತಹ ಸಂಘಟನೆ, ಸುರಕ್ಷೆ, ಸಂಸ್ಕಾರ, ಈ ಮೂರು ಕಾರ್ಯಗಳ ಜಾರಿಗಾಗಿ ಪಣ ತೊಟ್ಟಿರುವ ಭಜರಂಗದಳದ ಯುವ ಕಾರ್ಯಕರ್ತರ ಶ್ರಮ ಶ್ಲಾಘನೀಯವಾದದ್ದು ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ ಹೇಳಿದರು.
ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಡಿ. 27 ರಂದು ಶ್ರೀ ಮಾರುತಿ ದೇವರ ಮಂದಿರದಲ್ಲಿ ಮೂಡಲಗಿ ಮತ್ತು ಗೋಕಾಕ ತಾಲೂಕಿನ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ತಿನ ಹನುಮ ಮಾಲಾಧಾರಿಗಳು ಮಾಲೆಗಳನ್ನ್ ವಿಸರ್ಜಣೆ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಮಾಜದ ಸಂಘಟನೆಯೊಂದಿಗೆ ಹಿಂದೂ ಸಮಾಜದ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಯುವುದು ಇಂದಿನ ಅಗತ್ಯವಾಗಿದ್ದು, ಪ್ರೀತಿಯ ಹೆಸರಿನಲ್ಲಿ ಮತಾಂತರದ ಷಡ್ಯಂತರ ಮಾಡುತ್ತಿರುವ ಲವ್ ಜಿಹಾದ್‍ನಂತಹ ಸಮಾಜ ವಿದ್ರೋಹಿ ಚಟುವಟಿಕೆಗಳನ್ನು ಸಂಘಟಿತವಾಗಿ ಎದುರಿಸಬೇಕಾಗಿದೆ. ಗೋಹತ್ಯೆ ನಿಷೇದ ಕಾನೂನು ಜಾರಿಯಾದರು ಕೂಡ ಕಳ್ಳ ಮಾರ್ಗದಲ್ಲಿ ನಡೆಯಬಹುದಾದ ಗೋಹತ್ಯೆಯನ್ನು ತಡೆಯುವ ಮೂಲಕ ಗೋ ಮಾತೆಯನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಸಮಾಜ ಬಂಧುಗಳಿಗೆ ರಕ್ಷಣೆ ಒದಗಿಸುವುದರ ಜೊತೆಗೆ ಅನಿಷ್ಠ ಪದ್ಧತಿಗಳಿಗೆ ಬಲಿಯಾಗುವ ಹಿಂದೂ ಭಾಂದವರ ಕುಟುಂಬಕ್ಕೆ ಸಂಸ್ಕಾರ ನೀಡುವುದರ ಮುಖಾಂತರ ಭಜರಂಗದಳದ ಧ್ಯೇಯವಾಗಿರುವ ಸಂಘಟನೆ, ಸುರಕ್ಷೆ, ಸಂಸ್ಕಾರ ಈ ಎಲ್ಲವನ್ನು ಜಾರಿಗೊಳಿಸುವ ಸಂಕಲ್ಪವನ್ನು ಹನುಮ ಮಾಲಾಧಾರಿಗಳು ಮಾಡಬೇಕೆಂದು ಕರೆ ನೀಡಿದರು.
ಕೋಟ್ಯಾನು ಕೋಟಿ ಹಿಂದೂಗಳ ಸಂಕಲ್ಪಗಳಾಗಿರುವ ರಾಮ ಮಂದಿರ ನಿರ್ಮಾಣ ಕಾರ್ಯ ದೇಶದ ಆತ್ಮಗೌರವದ ಸಂಕೇತವಾಗಿದೆ, ಭವ್ಯ ಶ್ರೀರಾಮ ಮಂದಿರವನ್ನು ಹಿಂದೂ ಭಾಂದವರೆಲ್ಲ ಕೂಡಿಕೊಂಡು ನಿರ್ಮಿಸುವ ಮೂಲಕ ನಮ್ಮ ಮೇಲೆ ನಡೆದ ಮತಾಂದ ಆಕ್ರಮಣಗಳ ಕುರುಹುಗಳನ್ನು ಅಳಿಸಿ ಹಾಕಿ, ಹಿಂದೂ ಸಮಾಜ ಜಾಗೃತಗೊಂಡು ಒಗ್ಗಟಿನಿಂದ ರಾಮರಾಜ್ಯ ನಿರ್ಮಿಸುವ ಸಂಕಲ್ಪ ಪೂರ್ಣಗೊಳಿಸಬೇಕಾಗಿದೆ ಎಂದರು. ವಿಶ್ವ ಹಿಂದೂ ಪರಿಷತ್, ಆರ್.ಎಸ್.ಎಸ್ ನೇತೃತ್ವದಲ್ಲಿ ನಡೆಯುತ್ತಿರುವ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಹಿಂದೂ ಸಮಾಜ ಸಹಾಯ ಸಹಕಾರ ನೀಡಬೇಕೆಂದು ವಿನಂತಿಸಿದರು.
ಗೋಕಾಕದ ಶ್ರೀ ಬ್ರಹ್ಮನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ನಾರಾಯಣ ಮಠಾಧಿಕಾರಿ, ಭಜರಂಗದಳದ ಪ್ರಮುಖರಾದ ಸದಾಶಿವ ಗುದಗಗೋಳ, ಲಕ್ಷ್ಮಣ ಮಿಸಾಳೆ, ಅಮಿಶ ಕಾಳೆ, ಶಿವು ಗೋಟುರ, ಸಿದ್ದಪ್ಪ ತಿಗಡಿ, ಪುರಷೋತ್ತಮ ವಡ್ಡರ, ಸಹದೇವ ಖಾನಾಪೂರ, ಬಸವಂತ ದಾಸನಾಳ, ಬಸವರಾಜ ಕಡಾಡಿ, ಶೀಥಲ ಅಥಣಿ, ಚಂದ್ರಶೇಖರ ಮದನ್ನವರ, ಗುರುನಾಥ ಮಧಬಾಂವಿ, ಸಿದ್ದು ಬಡಿಗೇರ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page