ಶುಕ್ರವಾರ , ನವೆಂಬರ್ 15 2024
kn
Breaking News

ಕುರುಹಿನಶೆಟ್ಟಿ ಸೊಸೈಟಿಗೆ ೩.೨೨ಕೋಟಿ ಲಾಭ – ಬಸಪ್ಪ ಮುಗಳಖೋಡ

Spread the love

ಮೂಡಲಗಿ: ಪಟ್ಟಣದ ಪ್ರತಿಷ್ಠಿತ ಕುರುಹಿನಶೆಟ್ಟಿ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯು ಮಾರ್ಚ ಅಂತ್ಯಕ್ಕೆ ೩.೨೨ ಕೋಟಿ ರೂ. ಲಾಭ ಗಳಿಸಿ ಸಂಘವು ಪ್ರಗತಿ ಪಥದತ್ತ ಸಾಗಿದೆ ಎಂದು ಬ್ಯಾಂಕ್ ಚೇರಮನ್ ಬಸಪ್ಪ ಮುಗಳಖೋಡ ಹೇಳಿದರು.

ಸೊಸೈಟಿ ಸಭಾಭವನದಲ್ಲಿ ೨೭ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ಪ್ರಧಾನ ಕಚೇರಿಯ ಆಧುನಿಕ ಮಾದರಿಯ ಸುಸಜ್ಜಿತ ಕಟ್ಟಡ ಹೊಂದಿ ೧೩ ಶಾಖೆಗಳನ್ನು ಹೊಂದಿ ಎಲ್ಲಾ ಶಾಖೆಗಳು ಲಾಭ ಹೊಂದಿ ಪ್ರಗತಿ ಪಥದಲ್ಲಿ ಸಾಗಿವೆ. ವ್ಯಾಪರ‍್ಥರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ವಿವಿಧ ರೀತಿಯ ಜನರಿಗೆ ಸಾಲ ಸೌಲಭ್ಯ ಒದಗಿಸಿ ಆರ್ಥಿಕವಾಗಿ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಸಮಾಜಮುಖಿ ಕಾರ್ಯ ಮಾಡಲಾಗುತ್ತಿದೆ. ಸಂಘದ ಪ್ರಗತಿಗೆ ಶ್ರಮಿಸಿದ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ಶೇರುದಾರರಿಗೆ ಅಭಿನಂದಿಸಿ, ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಪ್ರತಿಭಾ ಪುರಸ್ಕಾರ, ಕೃಷಿ ಚಟುವಟಿಕೆಗಳಿಗೆ ಮತ್ತು ಸಾಮಾಜಿಕ ಕಾರ್ಯಗಳಿಗೆ ಸೊಸೈಟಿಯು ಉತ್ತೇಜನವನ್ನು ನೀಡುತ್ತಲಿದೆ ಎಂದರು.

ಪ್ರಧಾನ ವ್ಯವಸ್ಥಾಪಕ ರಮೇಶ ವಂಟಗೂಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘವು ಮಾರ್ಚ ಅಂತ್ಯಕ್ಕೆ ೩.೮ ಕೋಟಿ ಶೇರು ಬಂಡವಾಳ ಹೊಂದಿ, ೧೭.೧೯ ಕೋಟಿ ನಿಧಿಗಳನ್ನು ಹೊಂದಿ ಸಾರ್ವಜನಿಕ ವಲಯದಿಂದ ೧೪೭.೨೯ ಕೋಟಿ ಠೇವು ಸಂಗ್ರಹಿಸಿ ೫೩.೩೦ ಗುಂತಾವಣಿ ಹಾಗೂ ೧೦೩.೪೪ ಕೋಟಿ ವಿವಿಧ ಸಾಲ ವಿತರಿಸಿ ೧೭೫.೫೫ ದುಡಿಯುವ ಬಂಡವಾಳ ಹೊಂದಿ ಒಟ್ಟು ೭೧೫.೮೩ ಕೋಟಿ ವಾರ್ಷಿಕ ವಹಿವಾಟನ್ನು ಹೊಂದಿದೆ ಎಂದರು.

ಸ್ಥಳೀಯ ಸಿದ್ಧ ಸಂಸ್ಥಾನ ಮಠದ ಶ್ರೀ ದತ್ತಾತ್ರೇಯಬೋದ ಸ್ವಾಮೀಜಿ ಹಾಗೂ ನೀಲಕಂಠ ಮಠದ ಶ್ರೀ ಶಿವಾನಂದ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.

ಪಶು ವೈದ್ಯಾಧಿಕಾರಿ ಎಮ್ ಎಸ್ ವಿಭೂತಿ, ರಾಮದುರ್ಗ ಶಾಖೆಯ ಶಂಕ್ರಯ್ಯ ಹಿರೇಮಠ, ನಿವೃತ್ತ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಎಸ್ ಎಮ್ ರಂಜನಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಅಗಲಿದ ಹಿರಿಯ ಸಚಿವ ಉಮೇಶ ಕತ್ತಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹಿರಿಯರನ್ನು, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ೬೨೫ ಅಂಕ ಪಡೆದ ರ‍್ಯಾಂಕ್ ವಿಜೇತೆ ಲಕ್ಷ್ಮೀ ತಳವಾರ, ಕೆ ಎ ಎಸ್ ನಲ್ಲಿ ೫ನೇ ರ‍್ಯಾಂಕ್ ಅಭ್ಯರ್ಥಿ ಮಲ್ಲಿಕಾರ್ಜುನ ಕೊಣ್ಣೂರ ಹಾಗೂ ವಿವಿಧ ಸಾಧಕರನ್ನು ಸತ್ಕರಿಸಿ ಗೌರವಿಸಲಾಯಿತು.
ಶಿವಾನಂದ ಮುರಗೋಡ ಅಡಾವೆ ಪತ್ರಿಕೆಯನ್ನು ಲಾಭ ಹಾನಿ ಪ್ರಕಾಶ ಬೆಳಕೂಡ, ಲಾಭ ವಿಭಾಗಣಿ ಶಿವಬಸು ಮುಗಳಖೋಡ, ವಿಠ್ಠಲ ತಳವಾರ ಅಂದಾಜು ಲಾಭ ಹಾನಿಯ ವರದಿ ವಾಚಿಸಿದರು.
ಕರಾಸಪಸಂ ಮಹಾಮಂಡಳ ನಿರ್ದೇಶಕ ಡಾ. ಸಂಜಯ ಹೊಸಮಠ, ಲೆಕ್ಕ ಪರಿಶೋಧಕ ಎಸ್ ಬಿ ಗದಾಡಿ, ಸಂಘದ ಉಪಾಧ್ಯಕ್ಷ ಲಕ್ಕಪ್ಪ ಪೂಜೇರಿ, ತಮ್ಮಣ್ಣ ಕೆಂಚರಡ್ಡಿ, ವರ್ಧಮಾನ ಬೋಳಿ, ನಿರ್ದೇಶಕರಾದ ಸುಭಾಸ ಬೆಳಕೂಡ, ಇಸ್ಮಾಯಿಲ ಕಳ್ಳಿಮನಿ, ಗೊಡಚೆಪ್ಪ ಮುರಗೋಡ, ಬಸವರಾಜ ಬೆಳಕೂಡ, ವಿವಿಧ ಶಾಖಾ ಆಡಳಿತ ಮಂಡಳಿ ಅಧ್ಯಕ್ಷರು,ಉಪಾಧ್ಯಕ್ಷರು,ಗಣ್ಯರು, ಸಿಬ್ಬಂದಿಗಳು ಇದ್ದರು.
ಶಿಕ್ಷಕ ಚಂದ್ರಕಾoತ ಕೊಡತೆ ನಿರೂಪಿಸಿ, ಪ್ರಮೋದ ಯಲಬುರ್ಗಿಮಠ ವಂದಿಸಿದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page