ಮೂಡಲಗಿ: ಸಮೀಪದ ವೆಂಕಟಾಪೂರ ಗ್ರಾಮದಲ್ಲಿ ಪವಾಡ ಪುರುಷ ಬೆಡಿದ ಭಕ್ತರಿಗೆ ಬೇಡಿದ ವರ ನೀಡುವ ವರದಾತ ಬಾಳು ಮಾಮಾ ರವರ ಶ್ರಾವಣ ಮಾಸದ ನಿಮಿತ್ಯ ಪ್ರತಿವರ್ಷದಂತೆ ಈ ವರ್ಷ ಕೂಡ ಅಧೂರಿಯಾಗಿ ಜಾತ್ರಾ ಮಹೋತ್ಸವ ಜರುಗಿತು.
ಬಾಳುಮಾಮ ದೇವಸ್ಥಾನ ದಿಂದ ಬಾಳುಮಾಮ ಕುದುರೆ ಗೆ ಗುರುಶಿದ್ದ ಪೂಜಾರಿ ,ಕೆಂಚಪ್ಪ ಪೂಜಾರಿ, ಕಳೆಪ್ಪ ಪೂಜಾರಿ ನಾಗಪ್ಪ ಪೂಜಾರಿ ಸೆರಿಕೋಂಡು ಪೂಜೆ ಸಲ್ಲಿಸುವ ಮೂಲಕ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.
ವೆಂಕಟಾಪೂರ ಗ್ರಾಮದ ಎಲ್ಲಾ ಮುತೈದಿಯರಿಂದ ಪೂರ್ಣ ಕುಂಬ ಮೇಳ ಮತ್ತು ಆರತಿಯೊಂದಿಗೆ ಸಕಲ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸುಮಾರು 5 ಘಂಟೆಗಳ ಭವ್ಯ ಮೆರವಣಿಗೆ ಜರುಗಿತು.
ನಂತರ ಬಾಳುಮಾಮ ದೇವಸ್ಥಾನ ಮುಂದೆ ಕುದುರೆ ಕುಣಿತ ಭಕ್ತರು ಹುಬ್ಬೇರಿಸಿ ನೊಡುವಂತಿತ್ತು.
ಜಾತ್ರೆಯಲ್ಲಿ ವೆಂಕಟಾಪೂರ ಗ್ರಾಮದ ಸುತ್ತಮುತ್ತಲಿನ ಗ್ರಾಮದ ಸರ್ವ ಧರ್ಮ ಭಕ್ತರು ಭಾಗಿಯಾಗಿದ್ದರು ಪ್ರಸಾದವನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕಲ್ಲಪ್ಪ ಗೌಡ ಪಾಟೀಲ ,ಮಲಿಕಾರ್ಜುನ ಯರಗುದ್ರಿ ,ರಂಗಪ್ಪ ಅರಳಿಮಟ್ಟಿ,ಹಣಮಂತ ಕೋಳಿಗುಡ್ಡ , ಹಣಮಂತ ಹೊಸಮನಿ ,ಶಾಸಪ್ಪಗೌಡಾ ಪಾಟೀಲ ವಿಠ್ಠಲ ಹೊಸಮನಿ,ನಿಂಗನಗೌಡ ಪಾಟೀಲ ತುಕರಾಮ ಹಳ್ಳೂರ,ಕುಷ್ಟನಪ್ಪ ಪೂಜಾರಿ, ಯಲ್ಲಪ್ಪ ಪೂಜಾರಿ, ಹಣಮಂತ ಮಳವಾಡ ,ಕರೇಪ್ಪ ಹಾಡಿಮನಿ ಸೇರಿದಂತೆ ಗ್ರಾಮದ ಸಮಸ್ತ ಗ್ರಾಮಸ್ಥರು ಭಾಗಿಯಾಗಿದ್ದರು.