ಮೂಡಲಗಿ: ಪಟ್ಟಣದ ಬಸವ ಮಂಟಪದಲ್ಲಿ ಜರುಗಿದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ತಾಲೂಕಾ ಮಟ್ಟದ ಕಾರ್ಯಕ್ರಮದಲ್ಲಿ ಪ್ರತಿ ವರ್ಷ ನೀಡುವ ಮೂಡಲಗಿ ಶೈಕ್ಷಣಿಕ ವಲಯಕ್ಕೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿನಿಯರಿಗೆ ನೀಡುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದಿ. ರಾವಜೇಪ್ಪ ಬಾಲಪ್ಪ ಸೋನವಾಲಕರ ಇವರ ಸ್ಮರಣಾರ್ಥ ಇವರ ಮೊಮ್ಮಗ ಡಾ. ಪ್ರದೀಪ ಸುಭಾಸ ಸೋನವಾಲಕರ ಇವರು ನೀಡುವ ೧ ಲಕ್ಷ ರೂ.ಗಳ ಪ್ರೋತ್ಸಾಹಕ ಬಹುಮಾನ ವಿತರಣಾ ಕಾರ್ಯಕ್ರಮ ಜರುಗಿತು.
ಮೂಡಲಗಿ ವಲಯದ ಕೌಜಲಗಿಯ ಕರ್ನಾಟಕ ಪಬ್ಲಿಕ್ ಶಾಲೆಯ ಕುಮಾರಿ ಮಹಾಲಕ್ಷ್ಮೀ ಪ್ರದೀಪಕುಮಾರ ತಳವಾರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೬೨೫ ಕ್ಕೆ ೬೨೫ ಅಂಕಗಳನ್ನು ಪಡೆದುಕೊಂಡು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಳು. ವಿದ್ಯಾರ್ಥಿನಿಯ ಈ ಗಮನಾರ್ಹ ಸಾಧನೆಯು ಮೂಡಲಗಿ ಶೈಕ್ಷಣಿಕ ವಲಯದಲ್ಲಿಯೇ ದಾಖಲೆಯ ಸಾಧನೆಯಾಗಿದೆ. ಇಂತಹ ಪ್ರತಿಭೆಗಳು ನಮ್ಮಲ್ಲಿ ಇನ್ನೂ ಹೆಚ್ಚಗಲೆಂದು ಚೆಕ್ ಮೂಲಕ ೧. ಲಕ್ಷ ರೂ, ಹಾಗೂ ಸ್ಮರಣೀಕೆ ನೀಡಿ ಗೌರವಿಸಿ, ಪ್ರತಿಷ್ಠಾನದ ಸುಭಾಸ ಸೋನವಾಲಕರ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಯುವ ಧುರಿಣ ಸರ್ವೋತ್ತಮ ಜಾರಕಿಹೊಳಿ, ಶಾಸಕರ ಆಪ್ತ ಕಾರ್ಯದರ್ಶಿ ನಾಗಪ್ಪ ಶೇಖರಗೋಳ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ತಹಶೀಲ್ದಾರ ಡಿ.ಜಿ ಮಹಾಂತ, ತಾಪಂ ಇಒ ಎಫ್.ಜಿ ಚಿನ್ನನ್ನವರ, ಬಿಇಒ ಅಜಿತ ಮನ್ನಿಕೇರಿ, ಸಿಡಿಪಿಒ ಯಲ್ಲಪ್ಪ ಗದಾಡಿ, ಪಿ.ಎಸ್.ಐ ಹಾಲಪ್ಪ ಬಾಲದಂಡಿ, ಹಾಗೂ ಸದಸ್ಯರು, ಮಾಜಿ ಸದಸ್ಯರು, ನಗರದ ಗಣ್ಯರು ಹಾಗೂ ವಿವಿಧ ಶಾಲೆಗಳ ಶಿಕ್ಷಕ ಸಮೂಹ, ಸಂಘ ಸಂಸ್ಥೆಗಳು ಪಾಲಕರು ವಿದ್ಯಾರ್ಥಿಗಳು ಹಾಜರಿದ್ದರು.
Check Also
ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ
Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …