ಗುರುವಾರ , ಡಿಸೆಂಬರ್ 26 2024
kn
Breaking News

ಉಪ ಚುನಾವಣೆಯಲ್ಲಿ ದೊಡ್ಡ ಮೊತ್ತದ ಹಣ: ವಿಧಾನ ಪರಿಷತ್ ಸದಸ್ಯ ವಿಶ್ವನಾಥ ಹೇಳಿಕೆ ತನಿಖೆಗೆ ಸಿಬಿಐ ಮತ್ತು ಚುನಾವಣಾಧಿಕಾರಿಗಳಿಗೆ ದೂರು : ಭೀಮಪ್ಪ ಗಡಾಡ

Spread the love

ಮೂಡಲಗಿ: ಉಪ ಚುನಾವಣೆಯ ಖರ್ಚಿಗಾಗಿ ಪಕ್ಷ ನನಗೆ ಕಳುಹಿಸಿದ್ದ ದೊಡ್ಡ ಪ್ರಮಾಣದ ಮೊತ್ತದ ಹಣವನ್ನು ಯೋಗೇಶ್ವರ ಮತ್ತು ಮುಖ್ಯ ಮಂತ್ರಿಗಳ ಆಪ್ತ ಸಂತೋಷ ಅವರೇ ಲಪಟಾಯಿಸಿದರು ಎಂದು ಬಿಜೆಪಿ ಪಕ್ಷದ ವಿದಾನ ಪರಿಷತ್ ಸದಸ್ಯರಾದ ಎಚ್. ವಿಶ್ವನಾಥವರು ಇತ್ತೀಚೆಗೆ ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆಯ ಕುರಿತು ಸಮಗ್ರ ತನಿಖೆ ನೆಡಸುವ ಸಲುವಾಗಿ ಮುಖ್ಯ ಚುನಾವಣಾಧಿಕಾರಿಗಳ ಹಾಗೂ ಕೇಂದ್ರಿಯ ತನಿಖಾದಳ (ಸಿಬಿಐ)ಗೆ ದೂರು ಸಲ್ಲಿಸಲಾಗಿದೆ ಎಂದು ಉತ್ತರ ಕರ್ನಾಟಕ ಹೋರಾಟ ಸಮೀತಿ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಹೇಳಿದ್ದಾರೆ.
ಅವರು ಗುರುವಾರದಂದು ಪತ್ರಿಕಾ ಪ್ರಕಟನೆಯೊಂದನ್ನು ಹೊರಡಿಸಿರುವ ಅವರು ಬೇರೆ ಯಾರೋ ಜನಸಾಮಾನ್ಯರು ಇಂಥಹ ಹೇಳಕೆಗಳನ್ನು ನೀಡಿದ್ದರೆ ರಾಜ್ಯದ ಜನರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲಾ. ಆದರೆ ರಾಜ್ಯದ ಅಭಿವೃದ್ಧಿಗಾಗಿ ಹಾಗೂ ಆಡಳಿತದ ಸುದಾರಣೆಗಾಗಿ ಶಾಸನಸಭೆಗಳಲ್ಲಿ ರಚಿಸಲಾಗುತ್ತಿರುವ ಶಾಸನಗಳು ಕೆಳಮನೆಯಲ್ಲಿ ಅಂಗೀಕಾರಗೊಂಡ ನಂತರ ಇವುಗಳಿಗೆ ಅಂತಿಮ ಅನುಮೋದನೆ ನೀಡುವ ಮೇಲ್ಮನೆಯ ಅಂದರೆ ವಿದಾನ ಪರಿಷತ್ತಿನ ಆಡಳಿತರೂಢ ಪಕ್ಷದ ಸದಸ್ಯರಾದ ವಿಶ್ವನಾಥ ಇವರು ನೀಡಿರುವ ಹೇಳಿಕೆಯು ರಾಜ್ಯದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿರುವದು ಎಂಬುದಕ್ಕೆ ಸಾಕ್ಷಿಯಾಗಿರುವದು ಎಂದರೆ ತಪ್ಪಾಗಲಾರದು. ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 123(1) ಹಾಗೂ ಭಾರತೀಯ ದಂಡ ಸಂಹಿತೆ ಕಲಂ 171 (ಬಿ)( ಇ) ಇವುಗಳ ಪ್ರಕಾರ ಯಾವುದೇ ಚುನಾವಣೆಯ ಸಮಯದಲ್ಲಿ ಮತದಾರರಗೆ ಹಣದ ಆಮಿಷ ಒಡ್ಡುವದು ಹಾಗೂ ಹಣ ನೀಡುವುದಾಗಲಿ ಅಕ್ಷಮ್ಯ ಅಪರಾಧ ಎಂದು ಹೇಳಲಾಗಿದೆ. ಅಲ್ಲದೇ ಒಂದು ವೇಳೆ ಹಣ ಹಂಚಿದ್ದು ಸಾಬೀತಾದರೆ ಅಂಥವರು ಶಿಕ್ಷಾರ್ಹರು ಎಂದು ಕೂಡಾ ಈ ಕಾನೂನಿನಲ್ಲಿ ಹೇಳಲಾಗಿದೆ. ಪರಿಸ್ಥಿತಿ ಹೀಗಿರುವಾಗ ವಿಶ್ವನಾಥ ಇವರ ಹೇಳಿಕೆಗಳನ್ನು ನೋಡಿದರೆ ಈಗ ಸಧ್ಯ ರಾಜ್ಯದಲ್ಲಿ ಆಡಳಿತ ನಡೆದುತ್ತಿರುವ ಬಿಜೆಪಿ ಸರಕಾರವು ಉಪ ಚುನಾವಣೆಯ ಸಮಯದಲ್ಲಿ ಅಧಿಕಾರದ ದುರುಪಯೋಗ ಹಾಗೂ ಹಣ ಹಂಚಿಕೆಯಿಂದಲೇ ಅಧಿಕಾರಕ್ಕೆ ಬಂದಿರುವದು ಎಂಬುದು ಸ್ಪಷ್ಟವಾಗುತ್ತದೆ.
ಯಡಿಯೂರಪ್ಪನವರು ಉಪ ಚುನಾವಣೆಯ ಸಮಯದಲ್ಲಿ ಚುನಾವಣೆ ವೆಚ್ಚಕ್ಕಾಗಿ ವಿಶ್ವನಾಥ ಇವರಿಗೆ ಕಳುಹಿಸಿದ್ದರು ಎನ್ನಲಾದ ದೊಡ್ಡ ಮೊತ್ತದ ಹಣವೆಷ್ಟು? ಹಾಗೂ ಯಡಿಯೂರಪ್ಪನವರಿಗೆ ಈ ಹಣ ಎಲ್ಲಿಂದ ಬಂದಿತು? ಎಂಬುದರ ಬಗ್ಗೆಯೂ ಕೂಡಾ ಸಂಪೂರ್ಣ ತನಿಖೆ ಮಾಡುವದು ಅವಶ್ಯವಿರುವದು ಎಂದು ಈ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮುಖ್ಯ ಚುನಾವಣಾಧಿಕಾರಿಗಳು ಹಾಗೂ ಕೇಂದ್ರಿಯ ತನಿಖಾದಳದ ಅಧಿಕಾರಿಗಳು ದೂರಿನಲ್ಲಿ ಕಾಣಿಸಲಾದ ಪ್ರತಿಯೊಂದು ಅಂಶಗಳನ್ನು ಗಂಬೀರವಾಗಿ ಪರಗಣಿಸಿ ಉಪ ಚುನಾವಣೆಯಲ್ಲಿ ಹಣ ಹಂಚಿಕೆ ಮಾಡಲಾಗಿದೆ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಿ ಈ ಹಗರಣದಲ್ಲಿ ಭಾಗಿಯಾದವರ ಮೇಲೆ ಕಾನೂನು ರೀತಿ ಕ್ರಮ ಕೈಗೊಂಡು ಕಾನೂನಿನ ಘನತೆ ಗೌರವಗಳನ್ನು ಹೆಚ್ಚಿಸುವಂತೆ ಈ ದೂರಿನಲ್ಲಿ ವಿನಂತಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page