ಭಾನುವಾರ , ಡಿಸೆಂಬರ್ 22 2024
kn
Breaking News

ಪ್ರತಿ ಮನೆಗೆ ಒಬ್ಬರಂತೆ ಯೋಧರಾಗಬೇಕು : ನಿವೃತ್ತ ಕರ್ನಲ್ ಪ್ರಭಾಕರ ದಳವಾಯಿ

Spread the love

ಮೂಡಲಗಿ:ಸದೃಡ ದೇಶ ನಿರ್ಮಾಣಕ್ಕೆ ಯೋಧರ ಪಾತ್ರ ಮುಖ್ಯವಾಗಿದೆ ಯುವಕರು ದುಶ್ಚಟಕ್ಕೆ ಒಳಗಾಗದೇ ದೇಶದ ರಕ್ಷಣೆಗೆ ಮುಂದಾಗಬೇಕು,ಪ್ರತಿ ಮನೆಗೆ ಒಬ್ಬರಂತೆ ಯೋಧರು ರಡಿಯಾಗಬೇಕು ಎಂದು ನಿವೃತ್ತ ಕರ್ನಲ್ ಪ್ರಭಾಕರ ದಳವಾಯಿ ಆಶಯ ವ್ಯಕ್ತಪಡಿಸಿದರು.
ಮಂಗಳವಾರ ಜು-೨೬ ರಂದು ಕಲ್ಲೋಳಿ ಪಟ್ಟಣದಲ್ಲಿ ಮೂಡಲಗಿ ತಾಲೂಕ ಮಾಜಿ ಸೈನಿಕರ ಸಂಘ ಆಯೋಜಿಸಿದ ಕಾರ್ಗಿಲ್ ವಿಜಯೋತ್ಸವವನ್ನು ಹುತಾತ್ಮ ಯೋಧ ಜೋತೆಪ್ಪ ಗುಂಡಪ್ಪಗೋಳ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಲಾಯಿತು ನಂತರ ಮಾತನಾಡಿದ ದಳವಾಯಿ ಅವರು ದೇಶ ರಕ್ಷಣೆಯಲ್ಲಿ ಯೋಧರ ಶ್ರಮ ಸ್ಮರಣೀಯ ಎಂದರಲ್ಲದೇ ಕೇಂದ್ರ ಸರ್ಕಾರ ಜಾರಿಗೆ ತಂದ ಅಗ್ನಿ ಪಥ ಯೋಜನೆ ಮಹತ್ವದ್ದು ಯುವಕರು ಸೇರ್ಪಡೆಯಾಗಬೇಕೆಂದರು.
ಸೇವಾ ಸಂಸ್ಥೆ ಅಧ್ಯಕ್ಷ ಬಸವರಾಜ ಕಡಾಡಿ ಅವರು ಹುತಾತ್ಮ ಯೋಧ ಜೋತೆಪ್ಪ ಗುಂಡಪ್ಪಗೋಳ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮೂಡಲಗಿ ತಾಲೂಕ ಮಾಜಿ ಸೈನಿಕರ ಸಂಘ ಅಧ್ಯಕ್ಷ ರಾಮಚಂದ್ರ ಮಾಳೆದವರ,ಪರಪ್ಪ ರಾಚನವರ,ಹಣಮಂತ ಕುರಬೇಟ,ಮಲ್ಲಪ್ಪ ಕಂಕಣವಾಡಿ,ರಾಜು ದಬಾಡಿ,ಈರಪ್ಪ ಮುತ್ನಾಳ,ಪದ್ಮವ್ವ ಪರಸನ್ನವರ,ಜಾಕೀರ ನದಾಫ,ಅನೀತಾ ಮೀರ್ಜಿ,ಮಾರತಿ ಸೂರನ್ನವರ,ಕೆಂಚಪ್ಪ ಡೂಗನ್ನವರ,ರಾಜಶೇಖರ ಮೇತ್ರಿ,ಸುರೇಶ ಗುಂಡಪ್ಪಗೊಳ ಸೇರಿದಂತೆ ಅನೇಕ ಯೋಧರು,ಮಾಜಿ ಸೈನಿಕರು ಉಪಸ್ಥಿತರಿದ್ದರು.
ಪುಂಡಲೀಕ ನದಾಫ ಸ್ವಾಗತಿಸಿದರು,ಅರವಿಂದ ಚೌಡಪ್ಪನವರ ಕಾರ್ಯಕ್ರಮ ನಿರೂಪಿಸಿದರು,ರಮೇಶ ಚೌಗಲಾ ವಂದಿಸಿದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page