ಶನಿವಾರ , ನವೆಂಬರ್ 16 2024
kn
Breaking News

ಭವಿಷ್ಯತ್ತಿನ ಕ್ರೀಡಾಪಟುಗಳ ಜೀವನ ರೂಪಿಸುವಲ್ಲಿ ನಿರ್ಣಾಯಕರು ಮಹತ್ತರ ಪಾತ್ರವಹಿಸಬೇಕು : ಬಿಇಒ ಮನ್ನಿಕೇರಿ

Spread the love

ಮೂಡಲಗಿ: ಪ್ರಾಮಾಣಿಕವಾಗಿ ಪಾರದರ್ಶಕತೆಯಿಂದ ನಿರ್ಣಾಯಕರು ನಿರ್ಣಯ ಕೈಗೊಳ್ಳುವ ಮೂಲಕ ಭವಿಷ್ಯತ್ತಿನ ಕ್ರೀಡಾಪಟುಗಳ ಜೀವನ ರೂಪಿಸುವಲ್ಲಿ ಮಹತ್ತರ ಪಾತ್ರವಹಿಸಬೇಕು ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು.
ಅವರು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜರುಗಿದ ಸಮೂಹ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಮಾನಸಿಕವಾಗಿ ಸದೃಢರಾಗಬೇಕಾದರೆ ಶಾರೀರಿಕ ಸದೃಢತೆ ಅವಶ್ಯಕವಾಗಿದೆ. ಕ್ರೀಡೆಗಳು ಹಾಗೂ ದೈನಂದಿನ ದೈಹಿಕ ಕಸರತ್ತುಗಳಿಂದಾಗಿ ಸದೃಢ ಕಾಯದಂತಹ ಶರೀರ ನಮ್ಮದಾಗುತ್ತದೆ. ಕ್ರೀಡೆಗಳಲ್ಲಿ ಸೋಲು ಗೆಲವು ಸಹಜ, ಇವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶೈಕ್ಷಣಿಕ ಕಾರ್ಯಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ನಿರ್ಣಾಯಕರು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಮುಂದಿನ ಹಂತದ ಕ್ರೀಡಾಕೂಟಗಳಲ್ಲಿ ಯಶಸ್ವಿಯಾಗುವ ವಿದ್ಯಾರ್ಥಿಗಳನ್ನು ಗುರ್ತಿಸುವ ಜವಾಬ್ದಾರಿಯಾಗಿದೆ. ಸೂಕ್ತ ಮುಂಜಾಗೃತ ಕ್ರಮಗಳನ್ನು ಕೈಗೊಂಡು ಕ್ರೀಡೆಗಳು ಯಶಸ್ವಿಯಾಗಿ ಜರುಗಲು ಸಹಕರಿಸಬೇಕು ಎಂದು ಹೇಳಿದರು.
ಸಿಆರ್‌ಪಿ ಸಮೀರಹ್ಮದ ದಬಾಡಿ ಪ್ರಾಸ್ತವಿಕವಾಗಿ ಮಾತನಾಡಿ, ಕ್ರೀಡೆಗಳ ನಿಯಮಾವಳಿಗಳು, ವಿದ್ಯಾರ್ಥಿಗಳು ನಿರ್ಣಾಯಕರು ಕೈಗೊಳ್ಳಬಹುದಾದ ಕ್ರಮಗಳ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಎ.ಪಿ ಪರಸನ್ನವರ, ಎನ್.ಎಮ್ ಬಾಗವಾನ, ಟಿ.ಜಿ ಘಂಟಿ, ಎಲ್.ಎ ಮೇಕಲಮರಡಿ, ಎಸ್.ಪಿ ಸದಲಗಿ, ಬಿ.ಎಮ್ ಬೊರಗಲ, ಎಮ್ ಮಂಜುನಾಥ, ಎಸ್.ಎಚ್ ಯಡ್ರಾವಿ, ಸಿ.ಎಸ್ ಮೊಹಿತೆ, ಎಸ್.ಎಸ್ ಕಿತ್ತೂರ, ಜಿ.ಬಿ ನಾಯಕ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ ಶಿಕ್ಷಕರು ಮೂಡಲಗಿ ಸಮೂಹ ವ್ಯಾಪ್ತಿಯ ವಿದ್ಯಾರ್ಥಿಗಳಿದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page