ಭಾನುವಾರ , ಡಿಸೆಂಬರ್ 22 2024
kn
Breaking News

ಪತ್ರಿಕಾ ವಿತರಕರು,ಪತ್ರಕರ್ತರು, ಚಾಲಕರು ಮತ್ತು ನಿರ್ವಾಹಕರ ಸೇವಾ ಕಾರ್ಯ ಮೆಚ್ಚುವಂತಹದು: ಸಂಜಯ ಖೋತ

Spread the love

ಮೂಡಲಗಿ: ನಾಡಿನಾದ್ಯಂತ ಜನತೆ ಹಬ್ಬ ಆಚರಿಸುವ ಸಮಯದಲ್ಲಿ ಪತ್ರಿಕಾ ವಿತರಕರು,ಪತ್ರಕರ್ತರು,ಸಾರಿಗೆ ಸಿಬ್ಬಂದಿ ಮತ್ತು ಚಾಲಕ, ನಿರ್ವಾಹಕರು ತಮ್ಮ ಮನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ಸಾರ್ವಜನಿಕರ ಪ್ರಾಯಾಣಿಕರ ಸೇವೆಯಲ್ಲಿ ತೊಡಗುವ ಕಾರ್ಯ ಅಮೋಘವಾಗಿದೆ ಎಂದು ಎ.ಬಿ.ವಿ.ಪಿ. ಅಧ್ಯಕ್ಷ ಹಾಗೂ ಮೂಡಲಗಿ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಸಂಜಯ ಖೋತ ಹೇಳಿದರು,
ಅವರು ಸೋಮವಾರ ದೀಪಾವಳಿ ಹಬ್ಬದ ಪ್ರಯುಕ್ತ ಬಸ್ ನಿಲ್ದಾನದಲ್ಲಿ ಇಲ್ಲಿಯ ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ಹಾಗೂ ಕರುನಾಡು ಸೈನಿಕ ಕೇಂದ್ರದಿಂದ ಹಮ್ಮಿಕೊಂಡ ಪತ್ರಿಕಾ ವಿತರಕರಿಗೆ,ಪತ್ರಕರ್ತರಿಗೆ, ಸಾರಿಗೆ ಸಂಸ್ಥೆಯ ಸಿಬ್ಬಂದಿ, ಚಾಲಕ ಮತ್ತು ನಿರ್ವಾಹರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಸಿಹಿ ವಿತರಿಸಿ ಮಾತನಾಡಿ, ಮನೆಯಲ್ಲಿ ದೀಪಾವಳಿಯಂತಹ ದೊಡ್ಡ ಹಬ್ಬವಿದ್ದರೂ ಚಾಲಕ, ನಿರ್ವಾಹಕರು ಸಾರ್ವಜನಿಕರ ಸೇವೆಗೆ ನಿಷ್ಠೆಯಿಂದ ಹಾಜರಾಗುವದರ ಜೊತೆಗೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಮುಟ್ಟಿಸುವಲ್ಲಿ ಇವರ ಪಾತ್ರ ಬಹಳ ಪ್ರಮುಖವಾಗಿದೆ ಎಂದರು.
ಚಾಲಕ ಮತ್ತು ನಿರ್ವಾಹಕರಿಗೆ ಮಹಿಳೆಯರು ಆರತಿ ಮಾಡಿ ದೀಪಾವಳಿಯ ಶುಭಾಶಯ ಹೇಳಿದರು.
ಈ ಸಮಯದಲ್ಲಿ ಮಲ್ಲಿಕಾರ್ಜುನ ಕಾಳಪ್ಪಗೋಳ, ಬಸಗೌಡ ಹಳೆಗೌಡ್ರ,ಶಾನೂರ ದಳವಾಯಿ,ತರಬೇತಿ ಕೇಂದ್ರದ ಶಿಭಿರಾರ್ಥಿಗಳಿದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page