ಮೂಡಲಗಿ: ಪರಸ್ಪರರು ಸಂಭ್ರಮದಿಂದ ರಮಜಾನ ಹಬ್ಬ ಆಚರಿಸುವುದರ ಜೊತೆಗೆ ಕಡು ಬಡವರನ್ನು ಗುರುತಿಸಿ ಅವರಿಗೆ ನೆರವು ಒದಗಿಸುವ ಕಾರ್ಯವನ್ನು ಅಂಜುಮನ್ ಎ ಇಸ್ಲಾಂ ಕಮೀಟಿಯು ಪ್ರತಿ ವರ್ಷ ಮಾಡುತ್ತಿದೆ ಎಂದು ಕಮಿಟಿ ಅಧ್ಯಕ್ಷ ಮಲೀಕ ಹುಣಶ್ಯಾಳ ಹೇಳಿದರು.
ರಮಜಾನ್ ಹಬ್ಬದ ಪ್ರಯುಕ್ತ 50 ಕಡು ಬಡವರಿಗೆ ರಮಜಾನ್ ಹಬ್ಬಕ್ಕಾಗಿಯೇ ತಯಾರಿಸಿದ ಅಗತ್ಯ ವಸ್ತುಗಳ ಕಿಟ್ ವಿತರಿಸಿ ಮಾತನಾಡಿದ ಅವರು, ಯಾವ ಬಡವರೂ ಹಬ್ಬದ ಖುಷಿಯಿಂದ ವಂಚಿತರಾಗಬಾರದೆಂದು ಈ ಕಾರ್ಯವನ್ನು ಮಾಡಲಾಗುತ್ತಿದೆ ಹಬ್ಬದ ಸಂದರ್ಭದಲ್ಲಿ ನೆರೆಹೊರೆಯವರು ಮೊದಲು ಸಂತೋಷದಿಂದ ಇರಬೇಕು ಆ ನಿಟ್ಟಿನಲ್ಲಿ ಕಮಿಟಿಯು ಉತ್ತಮ ಸಮಾಜ ಸೇವೆ ಸಲ್ಲಿಸುತ್ತಿದೆ ಪ್ರತಿಯೊಬ್ಬರೂ ನಿರ್ಗತಿಕರಿಗೆ ಸಹಾಯ ಮಾಡುವುದರ ಜೊತೆಗೆ ಪವಿತ್ರ ರಮಜಾನ್ ಹಬ್ಬವನ್ನು ಎಲ್ಲರೂ ಶಾಂತಿಯುತವಾಗಿ ಆಚರಿಸಬೇಕೆಂದರು.
ಈ ಸಂದರ್ಭದಲ್ಲಿ ಅಂಜುಮನ ಕಮಿಟಿಯ ಸದಸ್ಯರಾದ ಎಮ್ ಎಸ್ ಸೈಯ್ಯದ, ಬಿ ಎಮ್ ಕಲಾರಕೊಪ್ಪ, ಫೀರೋಜ ಮಕಾಂದಾರ, ಇಸಾಕ ಆಹ್ಮದ ನದಾಫ್ ಇದ್ದರು.