ಮೂಡಲಗಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್ ಷಡಾಕ್ಷರಿಯವರು ರವಿವಾರ ದಿ. ಏ ೧೦ ರಂದು ಮದ್ಯಾಹ್ನ ೦೨:೩೦ ಕ್ಕೆ ಪಟ್ಟಣದ ತಹಶೀಲ್ದಾರ ಕಛೇರಿಗೆ ಗೌರವ ಸ್ವೀಕರಿಸುವ ಸಲುವಾಗಿ ಆಗಮಿಸುವರು. ನೂತನ ತಾಲೂಕಿಗೆ ಪ್ರಥಮ ಬಾರಿಗೆ ಆಗಮಿಸುತ್ತಿದ್ದು, ನೌಕರರ ಸಂಘಟನೆಯ ಪದಾಧಿಕಾರಿಗಳು ವಿವಿಧ ಇಲಾಖೆಗಳ ನೌಕರ ಬಂಧುಗಳು ಆಗಮಿಸಬೇಕೆಂದು ತಾಲೂಕಾ ಘಟಕದ ಅಧ್ಯಕ್ಷ ಆನಂದ ಹಂಚ್ಯಾಗೋಳ ಮತ್ತು ಕಾರ್ಯದರ್ಶಿ ಕೆ.ಆರ್ ಅಜ್ಜಪ್ಪನವರ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
