ಶನಿವಾರ , ಡಿಸೆಂಬರ್ 21 2024
kn
Breaking News

ಸಮಕಾಲೀನ ಬದುಕಿಗೆ ಸ್ಪಂದಿಸಿದ ಕವಿ ‘ಚಂಪಾ’ : ಸಾಹಿತಿ ಶಿವಾನಂದ ಬೆಳಕೂಡ

Spread the love

ಮೂಡಲಗಿ: ‘ಚಂದ್ರಶೇಖರ ಪಾಟೀಲ ಅವರು ಸಮಕಾಲೀನ ಬದುಕಿಗೆ ಸ್ಪಂದಿಸಿದ ಸಂವೇದನಾಶೀಲ ಬರಹಗಾರರಾಗಿದ್ದರು’ ಎಂದು ಸಾಹಿತಿ ಶಿವಾನಂದ ಬೆಳಕೂಡ ಹೇಳಿದರು.
ಇಲ್ಲಿಯ ಜ್ಞಾನದೀಪ್ತಿ ಸಾಹಿತ್ಯ ಪ್ರತಿಷ್ಠಾನ ಹಾಗೂ ಮೂಡಲಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಳದಿಂಗಳ ಸಾಹಿತ್ಯ ಚಿಂತನ-ಮAಥನ ಕಾರ್ಯಕ್ರಮದ ‘ಪ್ರೊ. ಚಂದ್ರಶೇಖರ ಪಾಟೀಲ ಅವರ ಬಂಡಾಯ ಮನೋಧರ್ಮ’ ಕುರಿತು ಮಾತನಾಡಿದ ಅವರು ಹೋರಾಟದ ಹಾದಿಯಲ್ಲಿ ಬೆಳೆದ ಕನ್ನಡ ಸಾಹಿತಿಗಳಲ್ಲಿ ವಿರಳ ಸಾಹಿತಿಯಾಗಿದ್ದರು ಎಂದರು.
ಅವರ ಕಾವ್ಯದ ಭಾಷೆಯಲ್ಲಿ ಉತ್ತರ ಕರ್ನಾಟಕದ ಕೆಚ್ಚು, ಜಾನಪದ ಸೊಗಡು, ಭಾಷೆಯ ಬಳಕೆ ಹೀಗೆ ಚಂಪಾ ಅವರ ಕಾವ್ಯಗಳು ವಿಭಿನ್ನವಾಗಿ ಗುರುತಿಸಿಕೊಂಡಿದ್ದವು. ತಮಗೆ ಅನಿಸಿದ್ದನ್ನು ಯಾರಿಗೂ ಅಂಜದೆ, ಅಳಕದೆ ಯಾರ ಮುಲಾಜಿಗೂ ನಿಲ್ಲದೆ ಹೇಳುವಂತ ಎದೆಗಾರಿಕೆ ಇತ್ತು. ನವಿರದಾದ ಬಂಡಾಯದ ಧ್ವನಿಯಲ್ಲಿ ಎಲ್ಲರನ್ನು ಎಚ್ಚರಿಸುವ ತಾಕತ್ತು ಅವರ ಕಾವ್ಯಗಿತ್ತು ಎಂದರು.
ಚಂಪಾ ಅವರು ಕವಿ, ನಾಟಕಕಾರ, ವಿಮರ್ಶಕ, ಸಂಘಟನೆ, ಜನಪರ ಹೋರಾಟ, ಪತ್ರಿಕಾ ಸಂಪಾದನ ಹಾಗೂ ಆಡಳಿತಗಾರರಾಗಿ ಕಾರ್ಯನಿರ್ವಹಿಸಿ ಕನ್ನಡಿಗರ ಮನದಲ್ಲಿ ಅಚ್ಚಳಿಯದ ಮಹಾನ ಪ್ರತಿಭೆಯಾಗಿದ್ದರು. ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಖುಷಿ ಕಂಡುಕೊಳ್ಳುವ ಹೃದಯವಂತ ಪ್ರಾಧ್ಯಾಕರಾಗಿದ್ದರು ಎಂದು ತಮ್ಮ ವಿದ್ಯಾರ್ಥಿ ದಿನಗಳ ಒಡನಾಟವನ್ನು ನೆನಪಿಸಿಕೊಂಡರು.
ಮೂಡಲಗಿ ತಾಲ್ಲೂಕು ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಮಾತನಾಡಿ ಕನ್ನಡ ಸಾಹಿತ್ಯವು ಪ್ರಾಚೀನದಿಂದ ಹಿಡಿದು ಆಧುನಿಕವಾಗಿ ವಿಶ್ವಮಾನ್ಯವಾಗಿ ಬೆಳೆದಿದೆ. ರನ್ನ, ಪಂಪರಿAದ ಕುವೆಂಪು ಸಮಕಾಲೀನ ಸಾಹಿತಿಗಳು ಕನ್ನಡ ಭಾಷೆಯನ್ನು ಬೆಳೆಸಿದ್ದಾರೆ. ಪ್ರತಿಯೊಬ್ಬರು ಸಾಹಿತ್ಯವನ್ನು ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ವಿ.ಎಸ್. ಹಂಚಿನಾಳ ಅವರು ಮಾತನಾಡಿ ಚಂದ್ರಶೇಖರ ಪಾಟೀಲ ಅವರು ಅಪಾರ ವಿದ್ಯಾರ್ಥಿ ಸಮೂಹವನ್ನು ಹೊಂದಿದ್ದರು. ವಿದ್ಯಾರ್ಥಿಗಳ ಬೆಳವಣಿಗೆಯನ್ನು ಸದಾ ಪ್ರೋತ್ಸಾಹಿಸುತ್ತಿದ್ದರು ಎಂದರು.
ಜ್ಞಾನದೀಪ್ತಿಯ ಕಾರ್ಯದರ್ಶಿ ಎ.ಎಚ್. ವಂಟಗೂಡಿ ಸ್ವಾಗತಿಸಿ, ವಂದಿಸಿದರು, ಸುರೇಶ ಲಂಕೆಪ್ಪನ್ನವರ ನಿರೂಪಿಸಿದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page