ಮೂಡಲಗಿ: ಗ್ರಾಮೀಣ ಭಾಗದ ಸರ್ವತೋಮುಖ ಅಭವೃದ್ದಿಯಾಗಬೇಕಾದರೆ ಯುವಕ ಸಂಘಗಳ ನಿಸ್ವಾರ್ಥ ಸೇವೆಯ ಅಗತ್ಯವಿದ್ದು ಮಾಹಾತ್ಮ ಗಾಂಧೀಜಿಯವರು ಕಂಡಂತ ಕನಸು ಹಳ್ಳಿಗಳ ಅಭಿವೃದ್ದಿಯಾದರೆ ಮಾತ್ರ ದೇಶದ ಅಭಿವೃದ್ದಿಯಾಗಲು ಸಾದ್ಯ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಹೇಳಿದರು.
ಅವರು ಗುರುವಾರ ಪಟ್ಟಣದ ಮಹರ್ಷಿ ವಾಲ್ಮೀಕಿ ಯುವಕ ಸಂಘದ ಕಾರ್ಯಾಲಯದಲ್ಲಿ ಭಾರತ ಸರಕಾರ ನೇಹರು ಯುವ ಕೇಂದ್ರದ ವತಿಯಿಂದ ತಾಲೂಕಾ ಮಟ್ಟದ ಯುವ ಮಂಡಳಗಳ ಅಭಿವೃದ್ದಿ ಅಭಯಾನ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ,ಗ್ರಾಮೀಣ ಭಾಗದಲ್ಲಿ ನಿಷ್ಕ್ರೀಯಗೊಂಡಂತಹ ಯುವಕ ಸಂಘಗಳನ್ನು ಪುನಷ್ಚೇತನಗೊಳಿಸಲು ಐದು ತಂಡಗಳನ್ನು ರಚಿಸಿ ಅವರ ಮುಖಾಂತರ ಹೊಸ ಯುವಕ ಸಂಘಗಳನ್ನು ರಚನೆ ಮಾಡಿ ನೆಹರು ಯುವ ಕೇಂದ್ರದಲ್ಲಿ ಸಂಯೋಜನೆ ಮಾಡಿಕೊಂಡು ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ ನಿಸ್ವಾರ್ಥ ಸೇವೆ ಮಾಡುವುದರೊಂದಿಗೆ ಗ್ರಾಮೀಣ ಭಾಗದಲ್ಲಿ ನಶಿಸಿಹೋಗುತ್ತಿರುವ ಜನಪದ ಕಲೆಗಳು ಹಾಗೂ ಅಪ್ಪಟ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಪಣ ತೊಡಬೇಕೆಂದು ಹೇಳಿದರು.
ಶ್ರೀ ಮಹರ್ಷಿ ವಾಲ್ಮೀಕಿ ಯುವಕ ಸಂಘದ ಅಧ್ಯಕ್ಷ ಯಲ್ಲಾಲಿಂಗ ವಾಳದ ಮಾತನಾಡಿ, ಪ್ರತಿ ಗ್ರಾಮಗಳಲ್ಲಿ ತರಳಿ ಯುವ ಸಂಘಗಳನ್ನು ರಚಿಸಿ ಜನರ ಸೇವೆ ಮಾಡಲು ಅವಕಾಶ ಮಾಡಿಕೊಡುತ್ತಿರುವ ನೆಹರು ಯುವ ಕೇಂದ್ರದ ಹಾಗೂ ಯುವ ಸಂಘಟಣೆಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಯುವ ಮುಖಂಡ ಸಿದ್ದು ಗಡ್ಡೆಕಾರ, ಗಾರ್ಡನ ಅಭೀವೃದ್ದಿ ಸಂಘದ ಕಾರ್ಯದರ್ಶಿ ಸುಭಾಸ ಗೋಡ್ಯಾಗೋಳ, ಶ್ರೀ ವಾಲ್ಮೀಕಿ ಯುವಕ ಸಂಘದ ಉಪಾಧ್ಯಕ್ಷ ಪ್ರಶಾಂತ ದಳವಾಯಿ, ಹಳ್ಳಿಗಳ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಸುರೇಶ ಮಠಪತಿ,ನಂಜುಂಡಿ ಸರ್ವಿ, ಈರಣ್ಣ ವಾಳದ ಹಾಗೂ ಮತ್ತಿತರರು ಇದ್ದರು.
Check Also
ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ
Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …