ಮೂಡಲಗಿ ಅ11: 2021 ರ ಪ್ರಕಾರ ಪುರಸಭೆಯವರು ಕಾಯಿ ಪಲ್ಲೆ ಮಾರುಕಟ್ಟೆಯಲ್ಲಿನ ಹಳೆ ಕಾಂಪ್ಲೆಕ್ಸ್ ಮಾಹಿತಿ ಪೂರೈಸಿದ್ದು,ನೀಡಿರುವ ಮಾಹಿತಿ ಪ್ರಕಾರ ಕೆಲವರು ಹಳೆ ಮತ್ತು ಹೊಸ ಕಾಂಪ್ಲೆಕ್ಸ್ ಪುರಸಭೆಯಿಂದ ಪಡೆದು ಬೇರೆಯವರಿಗೆ ಪುರಸಭೆ ಹೆಸರಿನಲ್ಲಿ ಹೆಚ್ಚಿನ ಬಾಡಿಗೆ ರೂಪದಲ್ಲಿ ಕೊಡುತ್ತಿರುವುದು ಸತ್ಯವಾದ ಸಂಗತಿಯಾಗಿದೆ,ಆದಕಾರಣ ಬಳಕೆದಾರರಿಗೆ ಹೆಚ್ಚಿನ ಹೊರೆಯಾಗುತ್ತಿದ್ದು, ಪುರಸಭೆಯವರು ಕೂಲಂಕುಷವಾಗಿ ವಿಚಾರಿಸಿ ದುರುಪಯೋಗ ಮಾಡುತ್ತಿರುವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಜೊತೆಗೆ ಮೂಡಲಗಿ ನಗರದ ಮುಖ್ಯರಸ್ತೆಯಾದ ವೀರಭದ್ರೇಶ್ವರ ದೇವಸ್ಥಾನದಿಂದ ಮಾರ್ಕೆಟ್ ರಸ್ತೆಯನ್ನೊಳಗೊಂಡು ಶಿವಬೋಧರಂಗ ಕೆಳಗಿನ ಮಠದ ವರೆಗೆ ಮತ್ತು ದನಗಳ ಪೇಟೆಯಿಂದ ಗುರ್ಲಾಪೂರ ರಸ್ತೆಯ ನಾಗಲಿಂಗ ನಗರದವರೆಗೆ ಪಾದಚಾರಿ ಮಾರ್ಗವನ್ನು ಸರಿಪಡಿಸುವ ಕುರಿತು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಾದ ಎಮ್.ಎಸ್.ನಂದಗಾಂವಮಠ ರವರು ಪುರಸಭೆಯ ಅಧಿಕಾರಿಗಳಾದ ಎಮ್.ಎಸ್.ಬಿರಾದಾರ ಪಾಟೀಲ್ ಹಾಗೂ ಚಿದಾನಂದ ಮುಗಳಖೋಡ ರವರಿಗೆ ಲಿಖಿತ ರೂಪದಲ್ಲಿ ಅರ್ಜಿಯನ್ನು ಸಲ್ಲಿಸುವ ಮೂಲಕ ವಿನಂತಿಸಿದರು.
ಈ ಸಂಧರ್ಭದಲ್ಲಿ ಕಿಸಾನ್ ಕಾಂಗ್ರೆಸ್ ಬೆಳಗಾವಿಯ ಉಪಾಧ್ಯಕ್ಷರಾದ ಇಜಾಜ್.ಎಮ್.ಕೊಟ್ಟಲಗಿ, ಮದಾರಸಾಬ ಜಕಾತಿ,ಗಿರೀಶ ಕರಡಿ,ಮಲೀಕಜಾನ ಕಳ್ಳಿಮನಿ,ಹೊಳೆಪ್ಪ ಶಿವಾಪುರ,ಶಬ್ಬೀರ ಕರಿಪಳ್ಳಿ,ಅಬ್ಧುಲ್ ಪೈಲವಾನ,ಮುಜಾಹಿದ ಶೇಖ,ಚುಟುಕುಸಾಬ ಜಾತಗಾರ ಮಂಟೂರ ಸೇರಿ ಅನೇಕರು ಉಪಸ್ಥಿತರಿದ್ದರು.
ವರದಿ: ಚಂದ್ರಶೇಖರ.