ಮೂಡಲಗಿ : ಸ್ಥಳೀಯ ಈರಣ್ಣ ನಗರದ ವಿದ್ಯುತ್ ಸರಬರಾಜು ನಿಗಮದ ಕಛೇರಿಯಲ್ಲಿ ಗಾಂಧೀ ವೃತ್ತದಿಂದ ಪರಿಸರಯುಕ್ತ ಮಣ್ಣಿನ ಗಣಪತಿ ಮೂರ್ತಿಯನ್ನು ಕೊವೀಡ್ ನಿಯಮಾನುಸಾರ ಶಾಖೆಯಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಸರಳತೆಯಿಂದ ಪೂಜಾ ಕಾರ್ಯಕ್ರಮ ಜರುಗಿತು.
ಶುಕ್ರವಾರ ಪಟ್ಟಣದಲ್ಲಿ ಜರುಗಿದ ಗಣೇಶ ಚತುರ್ಥಿಯ ನಿಮಿತ್ಯವಾಗಿ ವಿದ್ಯುತ್ ನಿಗಮ ಮಂಡಳಿಯ ಸಿಬ್ಬಂದಿ ವರ್ಗದವರು ವಿಘ್ನ ನಿವಾರಕ ಗೌರಿ ಗಣೇಶನನ್ನು ಪ್ರತಿಷ್ಠಾಪಿಸಿ ಪುಣಿತರಾದರು. ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಎಮ್.ಎಸ್.ನಾಗನ್ನವರ, ಎಸ್.ಎಸ್ ಮುರಗೋಡ, ಶಾಖಾಧಿಕಾರಿಗಳಾದ ಪಿ.ಆರ್ ಯಡಹಳ್ಳಿ, ಆರ್.ಪಿ ಪಿಡಾಯಿ, ಬಿ.ವಾಯ್ ಕುರಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
