ಗುರುವಾರ , ನವೆಂಬರ್ 21 2024
kn
Breaking News

ಅಜ್ಞಾನವೆಂಬ ಅಂಧಕಾರ ತೊಲಗಲು ವಿದ್ಯೆಯೆಂಬ ಸುಜ್ಞಾನದ ಮೂಲಕ ಶಿಕ್ಷಕರಿಂದ ಸಾಧ್ಯವಾಗಿದೆ : ತಹಶಿಲ್ದಾರ ಮಹಾತ

Spread the love

ಮೂಡಲಗಿ: ಅಜ್ಞಾನವೆಂಬ ಅಂಧಕಾರದಲ್ಲಿ ಮುಳುಗಿರುವವನ ಬಾಳಿನಲ್ಲಿ ಕತ್ತಲು ಹೊಡೆದೋಡಿಸಿ, ವಿದ್ಯೆಯೆಂಬ ಸುಜ್ಞಾನದ ಬೆಳಕನ್ನು ತರುವ ಶ್ರೇಷ್ಠ ವ್ಯಕ್ತಿತ್ವ ಶಿಕ್ಷಕ ವೃತ್ತಿಯಲ್ಲಿದೆ. ಸಮಾಜಿಕವಾಗಿ ಆರ್ಥಿಕವಾಗಿ ಬೌದ್ಧಿಕವಾಗಿ ಉನ್ನತ ಮಟ್ಟದಲ್ಲಿರಲು ಶಿಕ್ಷಕರು ಹಾಕಿ ಕೊಟ್ಟ ಭದ್ರ ಬುನಾಧಿಯಾಗಿದೆ ಎಂದು ಮೂಡಲಗಿ ತಹಶೀಲ್ದಾರ ಡಿ.ಜಿ. ಮಹಾತ್ ಹೇಳಿದರು.
ರವಿವಾರ ಪಟ್ಟಣದ ಕೆ.ಎಚ್ ಸೋನವಾಲಕರ ಕಲ್ಯಾಣ ಮಂಟಪ ಗುಡ್ಲಮಡ್ಡಿ ಈರಣ್ಣ ದೇವಸ್ಥಾನದಲ್ಲಿ ಜರುಗಿದ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗುರು ಎಂದಾಕ್ಷಣ ನಮ್ಮ ನೆನಪಿಗೆ ಬರುವುದು ವಿದ್ಯಾದಾನದ ಮೂಲಕ ವಿದ್ಯಾವಂತರನ್ನಾಗಿ ಮಾಡಿ ಸಮಾಜಕ್ಕೆ ಉತ್ತಮ ಪ್ರಜೆಗಳನ್ನಾಗಿ ಕೊಡುಗೆ ನೀಡಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಂತಹವರು.ಶಿಕ್ಷಕ ವೃತ್ತಿ ಬದುಕಿನ ಜೊತೆಯಲ್ಲಿ ಪ್ರವಾಹ ಕೋವಿಡ್-19 ಸಂದರ್ಭ ಹಾಗೂ ಸರಕಾರದ ವಿವಿಧ ಯೋಜನೆಗಳನ್ನು ತಳ ಹಂತದ ಮಟ್ಟಕ್ಕೆ ಮಾಹಿತಿ ಹಾಗೂ ಸಂವಹನ ಸಾಧಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ. ಶಿಕ್ಷಕರಿಂದ ಮಾತ್ರ ಮಗುವಿನ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುವದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದಾರವಾಢ ಕೃಷಿ ವಿಶ್ವ ವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಕೃಷಿಕ ಸೈನಿಕ ಶಿಕ್ಷಕ ವೃತ್ತಿಗಳು ಗೌರವಯುತವಾದ ಸ್ಥಾನವನ್ನು ಹೊಂದಿವೆ. ಪ್ರಬುದ್ಧ ಸಮಾಜ ನಿರ್ಮಾಣಗೋಳಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಮೂಲ್ಯವಾಗಿದೆ. ಕೆ.ಎಮ್.ಎಫ್ ಅಧ್ಯಕ್ಷರು ಅರಭಾಂವಿ ಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಸತತ ಪ್ರಯತ್ನ ಹಾಗೂ ಕೊಡುಗೆಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಜಿಲ್ಲೆ ರಾಜ್ಯ ರಾಷ್ಟ್ರೀಯ ಮಟ್ಟದಲ್ಲಿ ಮೂಡಲಗಿ ವಲಯ ಮಿಂಚುವಲ್ಲಿ ಸಹಾಯಕರಾಗಿದ್ದಾರೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್‍ರವರ ಜನ್ಮದಿನಾಚರಣೆಯನ್ನು ಶಿಕ್ಷಕರ ದಿನವನ್ನಾಗಿಸಿ ಕಲಿಸಿದ ಪ್ರತಿ ಗುರುವಿಗೂ ನಮನ ಸಲ್ಲಿಸಿ ಗುರುವಿನ ಸ್ಮರಣೆ ಮಾಡಿ ಕೃತಜ್ಞತೆ ತೋರಿಸುವದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣವಾಗುವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ. ಗುರಿ ಮುಂದೆ ಗುರು ಹಿಂದೆ ಇದರರ್ಥ ನಮ್ಮಯ ಪ್ರತಿಯೊಂದು ಗುರಿ ಜಯಿಸಬೇಕಾದರೆ ಗುರಿವಿನ ಮಾರ್ಗದರ್ಶನ ಅತ್ಯಾವಶ್ಯಕವಾಗಿದೆ ಎಂದರು.
ತಜ್ಞ ವೈಧ್ಯ ಡಾ.ಆರ್.ಎಸ್ ಬೆಣಚನಮರಡಿ, ಬಿ.ಬಿ ಹೊಸಮನಿ ಪ್ರತಿಷ್ಠಾನದ ಪರಮೇಶ್ವರ ಹೊಸಮನಿ ಮಾತನಾಡಿ, ಸಮಾಜದಲ್ಲಿ ಶಿಕ್ಷಕರ ಪಾತ್ರ ಅತ್ಯಾವಶ್ಯಕವಾಗಿದೆ. ಸಮಾಜವನ್ನು ತಿದ್ದಿ ನಡೆಸುವ ಮಹತ್ವದ ಕಾರ್ಯ ಶಿಕ್ಷಕರ ಮೇಲಿದೆ. ಸದೃಢ ಸಮಾಜ ನಿರ್ಮಾಣವಾಗಬೇಕಾದರೆ ನಿಷ್ಕಲ್ಮಶ ಶರೀರ, ಮನಸ್ಸು ಆಚಾರ ವಿಚಾರಗಳನ್ನು ಬೆಳೆಸುವ ಮೂಲಕ ಕಟ್ಟಬೇಕು. ಪರಸ್ಪರ ಹೊಮದಾನಿಕೆ ಮೂಲಕ ಮಕ್ಕಳ ಅಭಿವೃದ್ಧಿಯಾಧರಿಸಿ ಶ್ರಮವಹಿಸಿದಾಗ ಮಾತ್ರ ಶಿಕ್ಷಣಕ್ಕೆ ಅಮೂಲ್ಯ ಅರ್ಥ ಬರುವದಾಗಿ ತಿಳಿಸಿದರು.
ಸಾಹಿತಿ ಡಾ. ಮಹದೇವ ಜಿಡ್ಡಮನಿಯವರಿಂದ . ಡಾ. ಸರ್ವಪಲ್ಲಿ ರಾಧಾಕೃಷ್ಣನ್‍ರವರ ಜನ್ಮದಿನಾಚರಣೆಯ ಪ್ರಯುತ್ಕ ಶಿಕ್ಷಕರ ದಿನಾಚರಣೆಯ ಕುರಿತು ಉಪನ್ಯಾಸ ನೀಡಿದರು.
ಶಿಕ್ಷಕರ ದಿನಾಚರಣೆ ನಿಮಿತ್ಯವಾಗಿ ಉತ್ತಮ ಸ್ಕೌಟ ಗೈಡ್ಸ್ ಶಿಕ್ಷಕರು, ನಿವೃತ್ತ ಶಿಕ್ಷಕರು, ಬೋಧಕೇತರ ಸಿಬ್ಬಂದಿ, ವಸತಿ ಶಾಲೆಗಳಿಗೆ ಆಯ್ಕೆಯಾಗಿರುವ ಶಾಲೆಗಳು, ಭೂದಾನಿಗಳು, 50000 ಹೆಚ್ಚಿನ ದೇನಿಗೆ ಪಡೆದ ಶಾಲೆಗಳು, ಉತ್ತಮ ಸಿಆರ್‍ಪಿ, ದಿ. ವಾಯ್.ಎಲ್ ಸಣ್ಣಕ್ಕಿ ಮೆಮೋರಿಯಲ ಟ್ರಸ್ಟ, ಚೈತನ್ಯ ಗ್ರೂಪ್ಸ್, ಡೆಪೂಟಿ ಚನ್ನಬಸಪ್ಪ ಪ್ರತಿಷ್ಠಾನ ಕೆ.ಎಚ್ ಸೋನವಾಲಕರ ಚಾರಿಟೇಬಲ ಟ್ರಸ್ಟ, ಮಾತೃಭೂಮಿ ಪೌಂಡೇಶನ, ಬಿ.ಬಿ ಹೊಸಮನಿ ಪ್ರತಿಷ್ಠಾನ, ಅಂಜುಮನ ಇಸಲಾಮಿಕ ಕಮಿಟಿ, ಮಹಾಲಕ್ಷ್ಮೀ ವಿದ್ಯಾವರ್ಧಕ ಪ್ರತಿಷ್ಠಾನ, ಅನುದಾನಿತ ಪ್ರಾಥಮಿಕ ಪ್ರೌಢ ಸಂಘಗಳವತಿಯಿಂದ ಶಿಕ್ಷಕ ಸಮೂಹ ಹಾಗೂ ದಾನಿಗಳನ್ನು ಪ್ರಶಸ್ತಿ ಪತ್ರ ಹಾಗೂ ಪುಸ್ತಕಗಳನ್ನು ನೀಡುವ ಮೂಲಕ ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕರ ಆಪ್ತ ಸಹಾಯಕರಾದ ನಿಂಗಪ್ಪ ಕುರಬೇಟ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ತಾಪಂ ಇಒ ಸಂದೀಪ ಚೌಗಲಾ, ದೈಹಿಕ ಶಿಕ್ಷಣ ಪರಿವೀಕ್ಷಕ ಜುನೇದಿ ಪಟೇಲ, ವಿವಿಧ ಪ್ರತಿಷ್ಠಾನದ ಎಮ್ ಎಮ್ ಪಾಟೀಲ, ಮಲೀಕ ಹುಣಶ್ಯಾಳ, ಚೈತನ್ಯ ಗ್ರೂಪ್ಸ್, ಸರೋಜಿನಿ ಕುಲಕರ್ಣಿ ಹಾಗೂ ಪ್ರಾಥಮಿಕ ಪ್ರೌಢ ಶಾಲಾ ಶಿಕ್ಷಕ ಸಂಘಟನೆಗಳು ಮತ್ತು ಪತ್ತಿನ ಬ್ಯಾಂಕ ಪದಾಧಿಕಾರಿಗಳು ಸನ್ಮಾನಿತ ಶಿಕ್ಷಕರು ಹಾಜರಿದ್ದರು.
ಬಿಇಒ ಅಜಿತ ಮನ್ನಿಕೇರಿ ಸ್ವಾಗತಿಸಿದರು. ಟಿ. ಕರಿಬಸವರಾಜು ನಿರೂಪಿಸಿ, ಸತೀಶ ಬಿ.ಎಸ್ ವಂದಿಸಿದರು.

= ಶಿಕ್ಷಕರು ಈ ರಾಷ್ಟ್ರದ ಶಿಲ್ಪಿಗಳು ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ ನಿಮಿತ್ಯ ಇಲ್ಲಿಯ ಈರಣ್ಣ ದೇವಸ್ಥಾನದ ಕೆ.ಎಚ್.ಸೋನವಾಲಕರ ಕಲ್ಯಾಣ ಮಂಟಪದಲ್ಲಿ ರವಿವಾರದಂದು ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಂದೇಶ ನೀಡಿರುವ ಅವರು, ಶಿಕ್ಷಕರಿಂದ ಮಾತ್ರ ಈ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವೆಂದು ಹೇಳಿದರು.
ಕಳೆದ ಒಂದೂವರೆ ದಶಕದಿಂದ ಅರಭಾವಿ ಮತಕ್ಷೇತ್ರದಲ್ಲಿ ಶಿಕ್ಷಣದ ಸರ್ವತೋಮುಖ ಏಳ್ಗೆಗಾಗಿ ಪ್ರಥಮ ಪ್ರಾಶಸ್ತ್ಯ ನೀಡಲಾಗಿದೆ. ಶಿಕ್ಷಣದಿಂದ ಮಾತ್ರ ಸಮಾಜದ ಪರಿವರ್ತನೆ ಸಾಧ್ಯವಿದ್ದು, ಶಿಕ್ಷಕ ಸಮುದಾಯ ಈ ದಿಸೆಯಲ್ಲಿ ಮಕ್ಕಳಿಗೆ ಉತ್ತಮ ಸನ್ಮಾರ್ಗವನ್ನು ತೋರಿಸುವಂತೆ ತಿಳಿಸಿದರು.
ಕೋವಿಡ್ ಕಾರಣದಿಂದಾಗಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಅತೀ ಸರಳವಾಗಿ ಆಚರಿಸಲು ಸರ್ಕಾರ ನಿರ್ದೇಶನ ನೀಡಿದೆ. ಕಾರ್ಯ ನಿಮಿತ್ಯವಾಗಿ ಬೆಂಗಳೂರಿನಲ್ಲಿದ್ದು, ಸಮಸ್ತ ಶಿಕ್ಷಕ ಬಳಗಕ್ಕೆ ಶಿಕ್ಷಕರ ದಿನಾಚರಣೆಗೆ ಶುಭ ಕೋರಿದ ಅವರು, ಸೇವೆಯಿಂದ ನಿವೃತ್ತಗೊಂಡ ಶಿಕ್ಷಕರ ಜೀವನವು ಸುಖಕರದಿಂದ ಕೂಡಿರಲಿ ಎಂದು ಆಶಿಸಿದರು. ಡಾ. ರಾಧಾಕೃಷ್ಣನ್ ಭಾರತ ಕಂಡ ಅಗ್ರಗಣ್ಯ ಶಿಕ್ಷಕರಾಗಿ, ತತ್ವಜ್ಞಾನಿಯಾಗಿ ಅನನ್ಯ ಸೇವೆ ಸಲ್ಲಿಸಿದ್ದರು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗುಣಗಾನ ಮಾಡಿದರು.
~ಬಾಲಚಂದ್ರ ಜಾರಕಿಹೊಳಿ, ಶಾಸಕ.


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page