ಶನಿವಾರ , ಡಿಸೆಂಬರ್ 21 2024
kn
Breaking News

ರಾಷ್ಷ್ರ ಮಟ್ಟದ ಮಲ್ಲಕಂಬ ಕ್ರೀಡಾಕೂಟಕ್ಕೆ  ಶಿವಪ್ರಸಾದ ಕಡಾಡಿ ಆಯ್ಕೆ

Spread the love

ಮೂಡಲಗಿ: ಪಟ್ಟಣದ ಸೆಂಟ್ ಮೇರಿ ಆಂಗ್ಲ ಮಾದ್ಯಮ ಶಾಲೆಯ ೩ ನೇ ತರಗತಿಯ ವಿದ್ಯಾರ್ಥಿ ಶಿವಪ್ರಸಾದ ಕಡಾಡಿ ಗದಗ ಜಿಲ್ಲೆಯ ನೀಲಗುಂದದಲ್ಲಿ ಜರುಗಿದ ೨೦ ನೇಯ ರಾಜ್ಯ ಮಟ್ಟದ ಮಲ್ಲಕಂಬ ಕ್ರೀಡಾ ಕೂಟದಲ್ಲಿ ೧೨ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ೩ ನೇ ಸ್ಥಾನ ಪಡೆದು ಆಂದ್ರಪ್ರದೇಶದ ವಿಜಯವಾಡದಲ್ಲಿ ಜರುಗುವ ರಾಷ್ಷ್ರ ಮಟ್ಟದ ಮಲ್ಲಕಂಬ ಕ್ರೀಡಾಕೂಟಕ್ಕೆ  ಆಯ್ಕೆಯಾಗಿರುವದಾಗಿ ಸಂಸ್ಥೆಯ ಅಧ್ಯಕ್ಷ ಡ್ಯಾನಿಯಲ್ ಸರ್ವಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗೆ ಚೈತನ್ಯ ಆಶ್ರಮ ವಸತಿ ಶಾಲೆಯ ಮಲ್ಲಕಂಬ ಯೋಗ ಶಿಕ್ಷಕ ಮೆಹೆಬೂಬ ಬಂಡಿವಾಡ ತರಬೇತಿ ನೀಡಿದ್ದಾರೆ. ಬಿಇಒ ಅಜೀತ ಮನ್ನಿಕೇರಿ, ಪ್ರಧಾನಗುರು ಐ.ಎಚ್ ಶೇಖ ಮತ್ತು ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಿಕ್ಷಕ ಸಮೂಹ ವಿದ್ಯಾರ್ಥಿಯ ಯೋಗ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.


Spread the love

About KYMeesi

Check Also

ರೈತರ ನೀರಿನ ಸಮಸ್ಯೆ ನೀಗಿಸಲು ಶಾಶ್ವತ ಪರಿಹಾರ: ಶಾಸಕ ಪಿ.ರಾಜೀವ್

Spread the loveಹಳ್ಳೂರ: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವಿಭಾಗದ ವತಿಯಿಂದ ಮರಾಕುಡಿ ಗ್ರಾಮದ ಹಳ್ಳಕ್ಕೆ ಸರಣಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page