ಶನಿವಾರ , ಡಿಸೆಂಬರ್ 21 2024
kn
Breaking News

ಖಾಸಗಿ ನರ್ಸರಿ ಶಾಲೆಗಳಿಗೆ ಅಂಗನವಾಡಿ ಕೇಂದ್ರಗಳು ಪೈಪೋಟಿ ನಿಡಬೇಕು-ಮನ್ನಿಕೇರಿ

Spread the love

.
ಮೂಡಲಗಿ : ಖಾಸಗಿ ನರ್ಸರಿ ಶಾಲೆಗಳಿಗೆ ಪೈಪೋಟಿ ನೀಡಲು ಅಂಗನವಾಡಿ ಕೇಂದ್ರಗಳು ಸಹ ಸಕಲ ರೀತಿಯಲ್ಲಿ ಸಜ್ಜಾಗಬೇಕು ಎಂದು ಮೂಡಲಗಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು.
ಸ್ಥಳೀಯ ಲಕ್ಷ್ಮೀನಗರದ 397ರ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ಉದ್ಯಾನವನ ಉದ್ಘಾಟಿಸಿ ಮಾತನಾಡಿ, ಶಾಸಕರ, ಪುರಸಭೆ ಸದಸ್ಯರ, ಪಟ್ಟಣದ ದಾನಿಗಳ ಸಹಕಾರದೊಂದಿಗೆ ಪ್ರತಿಯೊಂದು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳನ್ನು ಆಕರ್ಷಿಸಸಲು ಉದ್ಯಾನವನ ಹಾಗೂ ಆಟಿಕೆ ಪರಿಕರಗಳ, ಗೋಡೆಯ ಮೇಲೆ ಬಣ್ಣದಿಂದ ಬೀಡಿಸಿದ ಚಿತ್ರಗಳನ್ನು ಮಾಡಿದಲ್ಲಿ ಸರಕಾರಿ ವಿಭಾಗವನ್ನು ಗೆಲ್ಲಿಸಲಿಕ್ಕೆ ಸಾಧ್ಯ ಎಂದರು.
ಅಂಗನವಾಡಿ ಕೇಂದ್ರಗಳನ್ನು ದತ್ತು ಪಡೆದಿರುವ ಪರಿಸರ ಸ್ನೇಹಿ ಈರಪ್ಪ ಢವಳೇಶ್ವರ ಮಾತನಾಡಿ, ಪಟ್ಟಣದ 7ಅಂಗನವಾಡಿ ಕೇಂದ್ರಗಳನ್ನು ದತ್ತು ಪಡೆದಿದ್ದು, ಇದು ಮೊದಲನೇ ಕೇಂದ್ರವಾಗಿದ್ದು, ಉಳಿದ ಕೇಂದ್ರಗಳಲ್ಲಿಯೂ ಸಹ ದಾನಿಗಳ ನೇರವಿನಿಂದ ಅಭಿವೃದ್ದಿ ಪಡಿಸಲಾಗುವುದು ಎಂದರು.
ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ ಉದ್ಘಾಟಿಸಿದರು.
ಅಂಗನವಾಡಿ ಮೇಲ್ವಿಚಾರಕಿ ಕೆ.ಎಸ್. ಕನಶೆಟ್ಟಿ ಮಾತನಾಡಿದರು.
ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಮುಖ್ಯಾಧಿಕಾರಿ ದೀಪಕ ಹರ್ದಿ,ಅಭಿಯಂತರ ತಿರುಪತಿ ಲಮಾಣಿ, ಸಿಪಿಐ ವೆಂಕಟೇಶ ಮುರನಾಳ, ಪಿಎಸ್‍ಐ ಹಾಲಪ್ಪ ಬಾಲ್ದಂಡಿ, ಹಣಮಂತ ಪ್ಯಾಟಿಗೌಡರ, ಕೆ.ಆರ್.ಕೋತ್ತಲ, ಶಿವಬಸು ಸುಣಧೋಳಿ, ಹಣಮಂತ ಸತರಡ್ಡಿ, ಆನಂದ ಟಪಾಲ್ದಾರ, ಎಲ್.ಸಿ.ಗಾಡವಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಗುರು ಗಂಗಣ್ಣವರ ಸ್ವಾಗತಿಸಿ ನಿರೂಪಿಸಿದರು. ಶೋಭಾ ಗೋಕಾಕ ವಂದಿಸಿದರು.


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page