ಶನಿವಾರ , ಡಿಸೆಂಬರ್ 21 2024
kn
Breaking News

ಕೋವಿಡ್-19 ಎಸ್.ಒ.ಪಿಯ ಪ್ರಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ SSLC ಪ್ರಥಮ ಪರೀಕ್ಷೆ ಯಶಸ್ವಿ : ತಹಶಿಲ್ದಾರ ಡಿ.ಜೆ ಮಹಾತ

Spread the love

ಮೂಡಲಗಿ : ಕೋವಿಡ್-19 ಎಸ್.ಒ.ಪಿಯ ಪ್ರಕಾರ ಅಗತ್ಯ ಮುನ್ನಚ್ಚರಿಕೆ ಕ್ರಮಗಳೊಂದಿಗೆ ಪ್ರಥಮ ಪರೀಕ್ಷೆಯು ಯಶಸ್ವಿಯಾಗಿದೆ. ವಿದ್ಯಾರ್ಥಿಗಳು ಶಾಂತ ರೀತಿಯಲ್ಲಿ ಮಂದಹಾಸದೊಂದಿಗೆ ಸಾಮಾಜಿಕ ಅಂತರದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿರುವದು ಸಂತಸ ತಂದಿದೆ ಎಂದು ಮೂಡಲಗಿ ತಹಶೀಲ್ದಾರ ಡಿ.ಜೆ ಮಾಹತ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸೋಮವಾರ ಜರುಗಿದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪ್ರಥಮ ಪರೀಕ್ಷೆಯ ಹಿನ್ನೆಲೆ ವಿವಿಧ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಾ ಕ್ರಮಗಳ ಕುರಿತು ಮಾತನಾಡಿ, ಪರೀಕ್ಷೆಗಳು ಪ್ರತಿಯೊಬ್ಬರಿಗೂ ಪುನರಾವಲೋಕನ ಮಾಡಿಕೊಳ್ಳಲು ಅತ್ಯುತ್ತಮ ಸಾಧನವಾಗಿದೆ. ಕೊರೋನಾ ಭೀತಿಯಿಂದಾಗಿ ಸರಕಾರ, ಇಲಾಖೆ, ಶಿಕ್ಷಣ ತಜ್ಷರ ಅಭಿಪ್ರಾಯ, ಪಾಲಕ ಪೋಷಕರ ಮಾರ್ಗದರ್ಶನದಂತೆ ಈ ವರ್ಷದ ಪರೀಕ್ಷೆಗಳು ವಿಷಯಗಳು, ಅಂಕಗಳು ಹಾಗೂ ಸಮಯದಲ್ಲಿ ಬದಲಾವಣೆ ಮಾಡಿ ಮಾಡುತ್ತಿದ್ದಾರೆ. ಮೂಡಲಗಿ ವಲಯ ಶೈಕ್ಷಣಿಕವಾಗಿ ಅನೇಕ ರಂಗಗಳಲ್ಲಿ ಸಾಧನೆ ಮಾಡಿದೆ. ಪರೀಕ್ಷೆಯ ವಿಷಯದಲ್ಲಿ ಜಾಗರೂಕತೆಯಿಂದ ನಿರ್ವಹಿಸಿರುವದು ಹರ್ಷದಾಯಕವಾಗಿದೆ.
ಆಶಾ ಕಾರ್ಯಕರ್ತೆಯರು ಸ್ಕ್ಯಾನ್ ಸ್ಯಾನಿಟೈಜ್ ಮಾಡಿ ಮಾಸ್ಕ ನೀಡಿ, ಆರೋಗ್ಯ ಸಿಬ್ಬಂದಿ ಆರೋಗ್ಯ ಪರಿಶೀಲಿಸಿ ಪರೀಕ್ಷಾ ಕೊಠಡಿಗಳಿಗೆ ಕಳುಹಿದ್ದಾರೆ. ಪರೀಕ್ಷಾ ಕೇಂದ್ರಗಳು ಸಾರ್ವಜನಿಕರು ಜನರಹಿತರಾಗಿ ಕಲಂ 144 ನಿಷೇದಾಜ್ಷೆಯಂತೆ ಸಹಕಾರ ನೀಡಿರುತ್ತಾರೆ. ಸ್ಥಳೀಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರು ವಲಯದ 6923 ಪರೀಕ್ಷಾರ್ಥಿಗಳಿಗೆ ಬಿಸ್ಕಟ್, ಮಾಸ್ಕ ಉಚಿತವಾಗಿ ನೀಡಿರುವದು ಅವರ ಶಿಕ್ಷಣ ಪ್ರೇಮ ಮೆಚ್ಚುವಂತಹದು. ಸಾರಿಗೆ ಸಂಸ್ಥೆಯವರ ಬಸ್ ವ್ಯವಸ್ಥೆ, ಸ್ಥಳೀಯ ಆಡಳಿತಗಳಿಂದ ಸ್ಯಾನಿಟೈಜ್, ಪೋಲಿಸ್, ಸ್ಕೌಟ್ ಮತ್ತು ಗೈಡ್ಸ್, ದೈಹಿಕ ಶಿಕ್ಷಕರು ಅಚ್ಚುಕಟ್ಟಾಗಿ ಪರೀಕ್ಷಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿರುವದು ನೀಜಕ್ಕೂ ಹರ್ಷದಾಯಕವಾಗಿದೆ ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಪದನಿಮಿತ್ಯ ಸಹ ನಿರ್ದೇಶಕ ರಾಜೀವ ನಾಯ್ಕ ಗುರ್ಲಾಪೂರ ಮೂಡಲಗಿ ಪರೀಕ್ಷಾ ಕೇಂದ್ರಗಳಿಗೆ ಭೆಟಿ ನೀಡಿ, ಪ್ರತಿ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಪ್ರತಿಶತವಾಗಿದೆ. ವಿದ್ಯಾರ್ಥಿಗಳು ಕೇಂದ್ರಗಳಲ್ಲಿ ಉತ್ಸುಕರಾಗಿ ಸುಲಲಿತವಾಗಿ ಪರೀಕ್ಷೆಯನ್ನು ಯಶಸ್ವಿಗೋಳಿಸಿದ್ದಾರೆ ಅಭಿಪ್ರಾಯ ತಿಳಿಸಿದರು.
ಬಿಇಒ ಎ.ಸಿ ಮನ್ನಿಕೇರಿ ಮಾಹಿತಿ ನೀಡಿ, ವಲಯ ವ್ಯಾಪ್ತಿಯಲ್ಲಿ 6923 ವಿದ್ಯಾರ್ಥಿಗಳ ಪೈಕಿ 3707 ಗಂಡು, 3212 ಹೆಣ್ಣು ಹಾಜರಾಗಿ ನಾಲ್ವರು ಗೈರಾಗಿದ್ದಾರೆ. ವಲಯ ವ್ಯಾಪ್ತಿಯಲ್ಲಿ 35 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಮಂಡಳಿಯ ನಿಯಮಾನುಸಾರ ಪರೀಕ್ಷೆ ಜರುಗಿದೆ. ವಿಶೇಷವಾಗಿ ಮೂಡಲಗಿ ವಲಯ ವ್ಯಾಪ್ತಿಯಲ್ಲಿ ಸ್ಥಳೀಯ ಶಾಸಕರು ನೀಡಿದ ಮಾದರಿ ಒಎಮ್‍ಆರ್ ಗಳಿಂದಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳಿಗೆ ಉತ್ತರ ಬರೆಯಲು ಸಹಾಯಕವಾಗಿದೆ ಎಂದರು.
ಪರೀಕ್ಷಾ ಸಂದರ್ಭದಲ್ಲಿ ಚಿಕ್ಕೋಡಿ ಮದ್ಯಾಹ್ನ ಉಪಹಾರ ಯೋಜನೆ ನಿರ್ದೇಶಕ ದೀಪಕ ಕುಲಕರ್ಣಿ, ಸಿ.ಪಿಐ ವೆಂಕಟೇಶ ಮುರನಾಳ, ಶ್ರೀಶೈಲ್ ಬ್ಯಾಕೋಡ, ನಾಗನೂರ ಪರೀಕ್ಷಾ ಕೇಂದ್ರದ ಅಧಿಕ್ಷಕ ಕರೇಪ್ಪ ಮಾರಾಪೂರ, ಪಿಎಸ್‍ಐಗಳಾದ ಹಾಲಪ್ಪ ಬಾಲದಂಡಿ, ಹನಮಂತ ನೇರಳಿ, ಎಚ್.ಎಚ್ ಕರನಿಂಗ ಹಾಗೂ ಪರೀಕ್ಷಾ ಸಿಬ್ಬಂದಿಗಳು ಹಾಜರಿದ್ದರು.


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page