ಮೂಡಲಗಿ: ಕೊರೋನಾ ಸೋಂಕಿತರಿಲ್ಲದೆ, ಸುಮಾರು ದಿನಗಳಿಂದ ಸದ್ದಿಲ್ಲದೆ ಶಾಂತವಾಗಿದ್ದ ಮೂಡಲಗಿ ಪಟ್ಟಣವು ಇಂದು ಅಸ್ತವ್ಯಸ್ತವಾಗುವ ಸನ್ನಿವೇಶ ಎದುರಾಗಿದೆ. ಏಕೆಂದರೆ ಮೂಡಲಗಿ ಪಟ್ಟಣದ ತಳವಾರ ಓಣಿಯಲ್ಲಿ ಒಂದು ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆಯೆಂದು ಮೂಡಲಗಿ ತಾಲೂಕಿನ ತಹಶಿಲ್ದಾರ ಮಹಾತರವರು ನಮ್ಮ ಪತ್ರಿಕೆಗೆ ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ 38 ವರ್ಷದ ಮಹಿಳೆಯಲ್ಲಿ ಇಂದು ಕೋರೊನಾ ಸೋಂಕು ಇರೋದು ದೃಡವಾಗಿದೆ.
ನಿನ್ನೆ ಪಟ್ಟಣದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ಮಹಿಳೆಗೆ ರೋಗ ಲಕ್ಷಣಗಳು ಕಂಡುಬಂದಿದ್ದರಿಂದ, ಆಸ್ಪತ್ರೆಯ ವೈಧ್ಯರು ಬೆಳಗಾವಿಯ ಆಸ್ಪತ್ರೆಗೆ ಹೋಗಿ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ತಿಳಿಸಿದ್ದಾರೆ. ಸದ್ಯ ಆ ಮಹಿಳೆಗೆ ಇಂದು ಕೊರೋನಾ ಸೋಂಕು ಇರುವುದನ್ನ ಮೂಡಲಗಿಯ ತಹಶಿಲ್ದಾರ ನಮ್ಮ ಪತ್ರಿಕೆಗೆ ಸ್ಪಷ್ಟ ಪಡಿಸಿ, ಪ್ರಾಥಮಿಕ ಸಂಪರ್ಕದಲ್ಲಿ ಇರುವವರನ್ನ ಪತ್ತೆ ಹಚ್ಚಿ, ಅವರನ್ನು ಕ್ವಾರೆಂಟೈನ್ ಅಲ್ಲಿ ಇರಿಸುವುದಾಗಿ ತಿಳಿಸಿದ್ದಾರೆ.
ನಗರದ ತಳವಾರ ಓಣಿಯನ್ನು ಇಂದು ಮುಂಜಾನೆ ಪೋಲಿಸ ಅಧಿಕಾರಿಗಳು ಸೀಲ್-ಡೌನ್ ಮಾಡಿದ್ದಾರೆ.
ಇನ್ನು ಸೊಂಕಿತೆ ತೆರಳಿದ್ದ ನಗರದ ಖಾಸಗಿ ಆಸ್ಪತ್ರೆ, ಕುಟುಂಬದ ಸದಸ್ಯರು ಕೆಲಸ ಮಾಡುತ್ತಿರುವ ನಗರದಲ್ಲಿನ ಪೆಟ್ರೋಲ್ ಪಂಪಗಳು ಸಿಲ್-ಡೌನ್ ಆಗುವ ಸಾದ್ಯತೆಗಳು ಇವೆ ಎಂದು ವಿಶ್ವಾಸನೀಯ ಮೂಲಗಳಿಂದ ತಿಳಿದು ಬಂದಿದೆ.