ಮೂಡಲಗಿ: ಮನುಷ್ಯನ ಮಾನಸಿ, ದೈಹಿಕ ಹಾಗೂ ವಿಚಾರವಂತರಾಗಿಸಲು ಅತ್ಯಂತ ಉಪಯುಕ್ತವಾಗಿರುವ ಸಿದ್ಧ ಸಮಾಧಿ ಯೋಗ ಶಿಬಿರವನ್ನು ನಗರದ ಆರಾಧ್ಯ ದೈವ ಶ್ರೀ ಶಿವಬೋಧ ರಂಗ ಮಠದಲ್ಲಿ ಬೆಂಗಳೂರಿನ ಋಷಿ ಸಂಸ್ಕøತಿ ವಿದ್ಯಾ ಕೇಂದ್ರ ಶಾಖೆ ಮೂಡಲಗಿ ಇವರ ಆಶ್ರಯದಲ್ಲಿ ಏ. 18 ರವಿವಾರ ಸಾಂಯಕಾಲ 6-00 ಗಂಟೆಗೆ ಪರಿಚಯ ಕಾರ್ಯಕ್ರಮ, ಏ. 19 ರಿಂದ ತರಗತಿಗಳು ಪ್ರಾರಂಭವಾಗುವದು. ಯೋಗ ಗುರುಜೀ ಅರುಣ ತಿಕೋಟಿಕರ ಗುರುಜೀ ಆಗಮಿಸಲಿದ್ದಾರೆ ಎಂದು ಸಂಘಟಕರಾದ ಪುಲಕೇಶಿ ಸೋನವಾಲಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾನಸಿಕ ಒತ್ತಡ, ದ್ವೇಷ, ಅಸಂತೃಪ್ತಿ, ರಕ್ತದೊತ್ತಡ, ಸಕ್ಕರೆ ಖಾಯಿಲೆ, ಗ್ಯಾಸ್ಟ್ರಿಕ್, ಹೃದಯ ರೋಗ, ಸಂಧಿವಾತ ಅನೇಕ ವರ್ಷಗಳಿಂದ ಇರುವಂತಹ ಖಾಯಿಲೆಗಳಿಗೆ ಸೂಕ್ತ ಪರಿಹಾರ ಸಿಗುತ್ತದೆ. ಸನಾತನ ಸಂಸ್ಕøತಿ ಧ್ಯಾನ, ಪ್ರಾಣಾಯಾಮ, ಆಹಾರ ಪದ್ದತಿಗಳ ಕುರಿತು ವೈಜ್ಞಾನಿಕವಾಗಿ ತಿಳಿಸುವರು. ಹೆಚ್ಚಿನ ಮಾಹಿತಿಗಾಗಿ- 9448637916, 9481292416, 9448636215, 9481005075, 8660773486 ಸಂಪರ್ಕಿಸಲು ಕೋರಿದ್ದಾರೆ.
