ಮೂಡಲಗಿ: ಉಪನಿರ್ದೇಶಕರ ಕಾರ್ಯಾಲಯ ಚಿಕ್ಕೋಡಿ ಇವರ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಜಿಲ್ಲಾ ಮಟ್ಟದ ಫೋನ್ ಸಂವಾದ ಕಾರ್ಯಕ್ರಮವು ಏ. 10 ಶನಿವಾರದಂದು ಸಾಂಯಕಾಲ 3-00 ಗಂಟೆಯಿಂದ 5 ಘಂಟೆಯವರೆಗೆ ಜರುಗಲಿದೆ. ಮೂಡಲಗಿ ತಾಲೂಕಿನ ವಿದ್ಯಾರ್ಥಿಗಳಿಗೆ ಪಠ್ಯದಲ್ಲಿಯ ಕ್ಲಿಷ್ಠಾಂಶಗಳು ಹಾಗೂ ಪರೀಕ್ಷೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಇಒ ಅಜಿತ ಮನ್ನಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ನೂರಿತ ವಿಷಯ ಸಂಪನ್ಮೂಲ ಶಿಕ್ಷಕರನ್ನು ನಿಯಮಿಸಿದ್ದು, ವಿದ್ಯಾರ್ಥಿಗಳು ಈ ಮೊಬೈಲ ಸಂಖ್ಯೆಗಳಿಗೆ ಸಂಪರ್ಕಿಸಬೇಕು. ಕನ್ನಡ ವಿಷಯಕ್ಕೆ ಸಿದ್ದು ವಾಲಿಮರದ ಮೊ. 9902169050, ಇಂಗ್ಲೀಷ ವಿಷಯಕ್ಕೆ ಎಮ್ ಎಮ್ ಬಂಬಲವಾಡ ಮೊ. 9742804010, ಹಿಂದಿ ವಿಷಯಕ್ಕೆ ಮೋಹನ ತುಪ್ಪದ ಮೊ. 8747026839, ಗಣಿತ ವಿಷಯಕ್ಕೆ ಎನ್.ಡಿ ನಿಡೋಣಿ, 9632196111, ವಿಜ್ಞಾನ ವಿಷಯಕ್ಕೆ ಎಸ್.ಸಿ ಅರಗಿ ಮೊ. 8971354617, ಸಮಾಜ ವಿಜ್ಞಾನ ವಿಷಯಕ್ಕೆ ವೈ.ಎನ್ ಲಕ್ಕಿಕೊಪ್ಪ ಮೊ. 9008073709 ಸಂಪರ್ಕಿಸಲು ತಿಳಿಸಿದ್ದಾರೆ.
