ಸೋಮವಾರ , ಡಿಸೆಂಬರ್ 23 2024
kn
Breaking News

ಶೈಕ್ಷಣಿಕ ಪ್ರಗತಿಗೆ ಸಮುದಾಯದ ಸಹಕಾರದ ಅಗತ್ಯವಿದೆ:ರಾಜಶೇಖರ ಆಡೂರು

Spread the love

ಕೊಪ್ಪಳ: ಶೈಕ್ಷಣಿಕ ಕ್ಷತ್ರದಲ್ಲಿ ಪ್ರಗತಿಯನ್ನು ಕಾಣಬೇಕಾದರೆ ಸಮುದಾಯದ ಸಹಕಾರದ ಅಗತ್ಯವಿದೆ ಎಂದು ನಗರಸಭೆಯ ಸದಸ್ಯರಾದ ರಾಜಶೇಖರ ಆಡೂರು ಹೇಳಿದರು.
ಅವರು ಸಿ.ಪಿ.ಎಸ್.ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸರಸ್ವತಿ ಪೂಜಾ ಹಾಗೂ ೮ನೇ ತರಗತಿ ವಿದ್ಯಾರ್ಥಿಗಳಿಗೆ ಬಿಳ್ಕೋಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ,ಶಿಕ್ಷಣ ಕ್ಷೇತ್ರದ ಬದಲಾವಣೆಯು ಕೇವಲ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ.ಶೈಕ್ಷಣಿಕ ಕ್ಷೇತ್ರದ ಮಹತ್ವದ ಬದಲಾವಣೆಯು ಆಗಬೇಕಾದರೆ ಅದಕ್ಕೆ ಸಮುದಾಯದ ಸಹಕಾರದ ಅಗತ್ಯವಿದೆ.ಶಿಕ್ಷಣ ಕ್ಷೇತ್ರವು ಸದಾ ಬದಲಾವಣೆಯಾಗುವ ಕ್ಷೇತ್ರವಾಗಿದೆ.ಶೈಕ್ಷಣಿಕ ಬದಲಾವಣೆಗೆ ತಕ್ಕಂತೆ ಶಿಕ್ಷಕರು ಕೂಡಾ ಬದಲಾಗಬೇಕು ಅಲ್ಲದೇ ಕೇವಲ ಶಿಕ್ಷಕರು ಬದಲಾದರೆ ಸಾಲದು ಆ ಸನ್ನಿವೇಶಕ್ಕೆ ತಕ್ಕಂತೆ ಪಾಲಕರು ಕೂಡಾ ಬದಲಾದರೆ ಮಾತ್ರ ಏನಾದರೂ ಬದಲಾವಣೆಯನ್ನು ಉಂಟು ಮಾಡಬಹುದಾಗಿದೆ.ಮಕ್ಕಳು ಉತ್ತಮ ರೀತಿಯಲ್ಲಿ ಶಿಕ್ಷಣವನ್ನು ಪಡೆಯಬೇಕಾದರೆ ಅವರಿಗೆ ಮೊದಲು ಅವರು ಕಲಿಯುವ ವಾತಾವರಣ ಕಲಿಕೆಗೆ ಅನುಕೂಲ ಆಗುವ ರೀತಿಯಲ್ಲಿ ಇರಬೇಕು ಅಂದಾಗ ಮಾತ್ರ ಮಕ್ಕಳು ಉತ್ತಮ ರೀತಿಯಲ್ಲಿ ಕಲಿಯಲು ಸಾಧ್ಯವಾಗುತ್ತದೆ.ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣ ಇಲಾಖೆಯ ಜೊತೆಜೊತೆಯಲ್ಲಿ ಸಂಘ-ಸAಸ್ಥೆಗಳು ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘಗಳು ಕೂಡಾ ಶಾಲೆಯ ಸಬಲೀಕರಕ್ಕಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.ಇಂತಹ ಉತ್ತಮ ಕಾರ್ಯಗಳು ಇನ್ನೂ ಹೆಚ್ಚು ಆಗಬೇಕು ಅಂದಾಗ ಮಾತ್ರ ಸರಕಾರಿ ಶಾಲೆಗಳು ಕೂಡಾ ಉತ್ತಮ ವಾತಾವರಣ ಹೊಂದಲು ಸಹಾಯಕವಾಗುತ್ತವೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಮಾಜ ಸೇವಕರಾದ ರಾಜು ನಾಯಕ ಮಾತನಾಡಿ,ಮಕ್ಕಳು ಶಾಲೆಯಲ್ಲಿ ಶಿಕ್ಷಕರು ಹೇಳಿ ಕೊಡುವ ವಿಷಯಗಳನ್ನು ಸರಿಯಾದ ರೀತಿಯಲ್ಲಿ ಆಲಿಸಿ ಅವುಗಳನ್ನು ಅಭ್ಯಾಸ ಮಾಡಿದರೆ ಖಂಡಿತವಾಗಿ ಅವರು ಹಾಕಿಕೊಂಡ ಗುರಿ ತಲುಪಲು ಸಾಧ್ಯವಾಗುತ್ತದೆ.ಶಾಲೆಗೆ ಬೇಕಾದ ಮೂಲಭೂತ ಯಾವುದಾರೂ ಸೌಲಭ್ಯವನ್ನು ಕೊಡಿಸುವುದಾಗಿ ಭರವಸೆ ನೀಡಿದರು.
ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ರಸ್ತೆಯ ಅಗಲಿಕರಣದ ಪರಿಣಾಮವಾಗಿ ನಮ್ಮ ಶಾಲೆಯ ಮೂಲ ಕಟ್ಟಡವು ನಾಶವಾದ ನಂತರ ಕಂದಾಯ ಕಟ್ಟಡದಲ್ಲಿ ಶಾಲೆಯನ್ನು ಪ್ರಾರಂಭ ಮಾಡಿ ೧೨ ವರ್ಷ ಕಳೆದಿದೆ.ಸತತ ೧೨ ವರ್ಷಗಳಿಂದ ಕಟ್ಟಡವನ್ನು ನಮ್ಮ ಶಾಲೆಯ ಹೆಸರಿನಲ್ಲಿ ಮಾಡಿ ಕೊಡುವಂತೆ ಅನೇಕ ಭಾರಿ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲಾ.ಇದರಿಂದ ಇಲಾಖೆಯಿಂದ ಯಾವುದೇ ಸೌಲಭ್ಯ ದೊರೆಯದ ಪರಿಣಾಮವಾಗಿ ಹಳೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೇ ಸೇರಿಕೊಂಡು ಶಾಲೆಯ ಅಭಿವೃದ್ದಿಗೆ ಶ್ರಮಿಸಬೇಕಿದೆ.ಆದ್ದರಿಂದ ಕೂಡಲೇ ಕಟ್ಟಡವನ್ನು ಶಾಲೆಯ ಹೆಸರಿನಲ್ಲಿ ನೊಂದಣಿ ಮಾಡಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದ ಕುರಿತು ಪ್ರಸ್ತಾವಿಕವಾಗಿ ವಿಕಲಚೇತನ ನೌಕರರ ಸಂಘದ ರಾಜ್ಯ ತಾಂತ್ರಿಕ ಗೌರವ ಸಲಹರಗಾರರಾದ ಕಾಶಿನಾಥ ಶಿರಿಗೇರಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಡಿ.ಗುಲಾಮ ಹುಸೇನ ಮಾತನಾಡುತ್ತಾ,ಶಾಲೆಯಲ್ಲಿ ಮಕ್ಕಳು ಪಠ್ಯ ವಿಷಯಗಳ ಜೊತೆಯಲ್ಲಿ ಮಾನವೀಯ ಮೌಲ್ಯಗಳನ್ನು ಕಲಿಯಬೇಕಿದೆ.ಪ್ರಸ್ತುತ ದಿನಮಾನಗಳಲ್ಲಿ ಮಾನವೀಯ ಮೌಲ್ಯಗಳು ಮರೆಯಾಗಿರುವುದು ವಿಷಾದನೀಯ ಸಂಗತಿಯಾಗಿದೆ.ಯಾವ ಮಕ್ಕಳಲ್ಲಿ ಶಿಸ್ತುನ್ನು ಮೈಗೂಡಿಸಿಕೊಂಡಿರುತ್ತಾರೆ ಅವರು ಸಮಾಜದಲ್ಲಿ ಉತ್ತಮ ಜೀವನ ನಡೆಸುವಂತವನಾಗುತ್ತಾನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ವಿರುಪಾಕ್ಷಪ್ಪ ಬಾಗೋಡಿ,ಶಿಕ್ಷಕರಾದ ಮೊಹಮ್ಮದ ಆಬೀದ ಹುಸೇನ ಅತ್ತಾರ,ಹಳೆಯ ವಿದ್ಯಾರ್ಥಿ ಸಂಘದ ಮುಖಂಡನಾದ ಮಾರುತಿ ಆಪ್ಟೆ ಮುಂತಾದವರು ಹಾಜರಿದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page