ಮೂಡಲಗಿ: ಪಟ್ಟಣದ ಗುರ್ಲಾಪೂರ ರಸ್ತೆಯಲ್ಲಿರುವ ಅನ್ ಲಿಮಿಟೆಡ್ ಡಾಬಾದ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದ 7 ಜನರನ್ನು ಮೂಡಲಗಿ ಪೋಲಿಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಪಟ್ಟಣದ ಆದಮಸಾಬ ಮೀರಾಸಾಬ ಮುಲ್ಲಾ, ಸಿಕಂದರ ಬಾಪೂಸಾಬ ನದಾಫ, ಮೈಬೂಬಸಾಬ ಉಸ್ಮಾನಸಾಬ ನದಾಫ್, ಸಿಕಂದರ ಅಪ್ಪಸಾಬ ನದಾಫ, ಮೌಲಾಸಾಬ ಮೈಬೂಬಸಾಬ ಜಮಾದಾರ, ನಬೀಸಾಬ ಸುಲ್ತಾನಸಾಬ ನದಾಫ, ಮೀರಾಸಾಬ ಫಕ್ರುಸಾಬ ನದಾಫ ಎಂಬ ಅರೋಪಿಗಳಿಂದ 8700 ರೂ. ವಶಪಡಿಸಿಕೊಂಡಿದ್ದಾರೆ.
ದಾಳಿ ಸಂದರ್ಭದಲ್ಲಿ ಪಿಎಸ್‍ಐ ಮಲ್ಲಿಕಾರ್ಜುನ ಸಿಂಧೂರ, ಎಮ್.ಎಸ್.ಬಡಿಗೇರ, ಎಮ್.ವಾಯ್. ನದಾಫ ಆರ್.ಎಸ್.ಪೂಜೇರಿ, ಬಿ.ಆರ್ ಪಾಟೀಲ್, ಎಸ್.ವ್ಹಿ, ಪೂಜಾರಿ ಇದ್ದರು.
