ಹಳ್ಳೂರ: ಪ್ರತಿಯೊಬ್ಬ ವ್ಯಕ್ತಿಯು ಮಹಾತ್ಮರ ಆಧ್ಯಾತ್ಮದ ಚಿಂತನೆ, ಶಾಂತಿ, ಉಪದ್ದೇಶ, ಅವರ ಜೀವನ ಸಾಧನೆಯನ್ನು ಎಲ್ಲರೂ ಅಳವಡಿಸಿಕೊಂಡು ಮಹಾತ್ಮರ, ಶರಣರ, ಗುರು ಹಿರಿಯರ ಮಾರ್ಗದರ್ಶನದಂತೆ ಎಲ್ಲರೂ ಪ್ರೇರಿಪಿಸಬೇಕೆಂದು ಕಲಿಯುಗದ ಕರುಣಾಕರ, ಸುಕ್ಷೇತ್ರ ಬಂಡಿಗಣಿಯ ಶ್ರೀ ಬಸವಗೋಪಾಲ ನೀಲಮಾಣಿಕ ಮಠದ ದಾಸೋಹ ರತ್ನ ಚಕ್ರವರ್ತಿ ಶ್ರೀ ಅನ್ನ ದಾನೇಶ್ವರ ಸ್ವಾಮಿಜಿಗಳು ಹೇಳಿದರು.
ಸ್ಥಳೀಯ ಶ್ರೀ ಮಾಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಮಂಗಳವಾರರಂದು ನಡೆದ 14ನೇ ಮಹಾಲಕ್ಷ್ಮೀ ಪಾರಮಾರ್ಥಿಕ ಸಪ್ತಾಹ ಕಾರ್ಯಕ್ರಮದ ನೇತೃತ್ವವನ್ನು ವಹಿಸಿ ಮಾತನಾಡಿದ ಅವರು ಇಂತಹ ಪಾರಮಾರ್ಥಿಕ ಸಪ್ತಾಹಗಳಲ್ಲಿ ಪಾಲ್ಗೋಂಡು ಪರಮಾತ್ಮನ ಕೃಪೆಯಿಂದ ಎಲ್ಲರಿಗೂ ಸುಖ, ಶಾಂತಿ, ಸಮೃದ್ದಿಯನ್ನು ನೀಡಲಿ. ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಜ್ಞಾನದ ಅಭಿವೃದ್ದಿಯಾಗಬೇಕು. ಜಾತಿ, ಧರ್ಮ, ಭಾಷೆಗಳು ಎಲ್ಲರೂ ಸಮನಾಗಿ ಹೊಂದಿಕೊಳ್ಳಬೇಕೆಂದು ಹೇಳಿದರು.
ತಿಳಿದವರು ಉಳಿಯುತಾರಣ್ಣಾ ತಿಳಿಯದ ಮೂಢರಿಗೆ ಕರಾಳ ಕತ್ತಲು ಒದಗುತದಣ್ಣಾ ಪುಂಡಾಟ ಮಾಡುವವರಿಗೆ ಅಂಜಬೇಡಿರಣ್ಣಾ, ಸದ್ಗುರುವಿನ ಧ್ಯಾನ ಮಾಡಿ ದುಷ್ಟರ ನಾಶ ಮಾಡಬೇಕಣ್ಣ ಎಂದು ಬಬಲಾದಿ ಸದಾಶಿವ ಶ್ರೀಗಳು ನುಡಿದಂತೆ ಕಾಲ ಬರತಾವು ಆದರೆ ತಾವು ಹೆಚ್ಚು ಭಕ್ತರು ಶ್ರದ್ದಾ ಭಕ್ತಾಯಿಂದ ಪೂಜಿಸಿ, ಪಾವನರಾಗಬೇಕೆಂದು ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಮಾತನಾಡಿ ಧರ್ಮದ ಪಾಲನೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದಂತಹ ಶ್ರದ್ದೇ, ಹಿತಾಸಕ್ತಿ, ಜ್ಞಾನವನ್ನು ರೂಡಿಸಿಕೊಂಡು ಇಂತಹ ಧಾರ್ಮಿಕ ಭಜನೆ, ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಲ್ಲರೂ ಪಾವನರಾಗಬೇಕೆಂದು ಹೇಳಿದರು. ಅನ್ಯಾಯವನ್ನು ಹೋಗಲಾಡಿಸಿ ನ್ಯಾಯವನ್ನು ದೊರಕಿಸಿಕೊಳ್ಳಲು ಪ್ರತಿಯೊಬ್ಬರು ಶ್ರದ್ದೇಯಿಂದ ದುಡಿಯಬೇಕೆಂದು ಹೇಳಿದರು.
ಮುಖಂಡ ಸರ್ವೋತ್ತಮ ಜಾರಕಿಹೋಳಿ ಮಾತನಾಡಿ ದೇವರು ಹುಟ್ಟುವಾಗಲೇ ಜ್ಞಾನ, ಬುದ್ದಿ ಶಕ್ತಿಯನ್ನು ನೀಡಿರುತ್ತಾನೆ ಹಾಗೇ ನಮ್ಮ ನಿಮ್ಮೆಲ್ಲರಿಗೆ ಒಳ್ಳೆಯ ಜ್ಞಾನ ಮಾರ್ಗದರ್ಶನ ನೀಡಲು ದಾಸೋಹ ರತ್ನ ಚಕ್ರವರ್ತಿ ಬಂಡಿಗಣೀ ಶ್ರೀಗಳ ವಾಕ್ಯಗಳು ಅಮೃತ ಎಂದು ಹೇಳಿದರು.
ಸೋಮವಾರರಂದು ಸಾಯಂಕಾಲ 7 ಗಂಟೆಯಿಂದ ಜಾಗರಣೆ, ಭಜನೆ ನಡೆಯಿತ್ತು. ಮಂಗಳವಾರ ಬೆಳಿಗ್ಗೆ 7 ಗಂಟೆಗೆ ಶ್ರೀ ಸತ್ಯ ನಾರಾಯಣ ಹಾಗೂ ಶ್ರೀ ವರಶಂಕರ ಪೂಜಾ, ಶ್ರೀ ಮಹಾಲಕ್ಷ್ಮೀ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತ್ತು. ಮುಖಂಡ ಲಕ್ಕಪ್ಪ ಪಾಟೀಲ, ಬಾವಲತ್ತಿಯ ಶ್ರೀ ವಿಜಯವೇದಾಂಗ ಶ್ರೀಗಳು ಪಾರಮಾರ್ಥಿಕ ಸಪ್ತಾಹವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಜನಪ್ರೀಯ ಶಾಸಕ ಬಾಲಚಂದ್ರ ಜಾರಕಿಹೋಳಿ ಅವರ ಸಹಾಯಕ ಅಬ್ದುಲ್ ಮಿರ್ಜಾ ನಾಯ್ಕ, ಮುಖಂಡರಾದ ಹಣಮಂತ ಕೊಂಗಾಲಿ, ಭೀಮಶಿ ಮಗದುಮ್ಮ, ಸುರೇಶ ಕತ್ತಿ, ಶ್ರೀಶೈಲ ಬಾಗೋಡಿ, ಲಕ್ಷ್ಮಣ ಛಬ್ಬಿ, ಅಡಿವೆಪ್ಪ ಪಾಲಬಾಂವಿ, ಮಲ್ಲಪ್ಪ ಕೊಂಗಾಲಿ, ಅರ್ಜುನ ಬಾಗೋಡಿ, ರಮೇಶ ಕೊಂಗಾಲಿ, ಸತ್ಯನಾರಾಯಣ ತಮದಡ್ಡಿ, ಪ್ರವೀಣ ಮಾವರಕರ, ಸಿದ್ದು ದುರದುಂಡಿ, ಮುತ್ತು ಕಲ್ಲೋಳ್ಳಿ, ಹಣಮಂತ ಪಾಲಬಾಂವಿ, ಚುನಾಯಿತ ಪಂಚಾಯತ ಸದಸ್ಯರು, ಸೇರಿದಂತೆ ಸದ್ಬಕ್ತರು, ಗ್ರಾಮಸ್ಥರು ಇದ್ದರು.
ಸ್ವಾತಂತ್ರ್ಯೋತ್ಸವ ದಿನದಂದು ಜರುಗಿದ ಈ ವಿಶೇಷ ಕಾರ್ಯಕ್ರಮದಲ್ಲಿ ಮನೆಮನೆಗಳ ಮನೆ ಮುಂದೆ ವಿವಿಧ ಬಣ್ಣಬಣ್ಣದ ರಂಗೋಲಿ, ಹೂ, ತಳಿರು ತೋರಣಗಳಿಂದ ಬೀದಿಗಳನ್ನು ಶೃಂಗರಿಸಲಾಯಿತು. ಕಾರ್ಯಕ್ರಮದಿಂದ ಹಬ್ಬದ ವಾತಾವರಣ ಕಂಡು ಬಂದಿತ್ತು. ಹಾಗೂ ಸಪ್ತಾಹ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಅನುಭವ ಹಂಚ್ಚಿಕೊಂಡರು. ಬಂಡಿಗಣೀಯ ಶ್ರೀ ಬಸವಗೋಪಾಲ ನೀಲಮಾಣಿಕ ಮಠದ ದಾಸೋಹ ರತ್ನ ಚಕ್ರವರ್ತಿ ಶ್ರೀ ಅನ್ನ ದಾನೇಶ್ವರ ಸ್ವಾಮಿಜಿಗಳಿಗೆ ಭಕ್ತರು, ಮುಖಂಡರು ಸತ್ಕರಿಸಿದರು. ಸೇರಿದ ಸಹಸ್ರ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತ್ತು. ನಂತರ ಅನ್ನ ಪ್ರಸಾದ ನಡೆಯಿತ್ತು. ಮುಖಂಡ ಹಣಮಂತ ಮನ್ನಾಪೂರ ನಿರೂಪಿಸಿದ್ದರು. ಯಲ್ಲಪ್ಪ ಯಲ್ಲಟ್ಟಿ ಸ್ವಾಗತಿಸಿ, ವಂದಿಸಿದರು.
ವರದಿ-> ಪೂಜಾ ಪ್ರವೀಣ ಮಾವರಕರ