ಹಳ್ಳೂರ: ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ ಅವರು ಸಮಾಜಕ್ಕೆ ಶಿಕ್ಷಣ, ಸಂಘಟನೆ, ಹೋರಾಟ, ಶೈಕ್ಷಣಿಕ ಬೆಳವಣಿಗೆಗೆ ಮಹತ್ವ ನೀಡಿದ ಅವರು ನೀಡಿರುವ ಕೋಡುಗೆ ಅಪಾರ ಅನೇಕ ಮಹಾ ಗ್ರಂಥಗಳನ್ನು ರಚಿಸಿದ್ದಾರೆ. ಇವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೋಳ್ಳಬೇಕು ಹಾಗೂ ಅವರ ತತ್ವ ಆಚಾರ ವಿಚಾರವನ್ನು ಪ್ರತಿಯೊಬ್ಬರು ಪ್ರೇರಿಪಿಸಿಕೊಳ್ಳಬೇಕೆಂದು ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಗಳ ಮೇಲ್ವಿಚಾರಣೆ ಮತ್ತು ಬಲವರ್ಧನ ಸಮಿತಿಯ ಬೆಳಗಾವಿ ಜಿಲ್ಲಾಧ್ಯಕ್ಷ ಮಾರುತಿ ನಾ. ಮಾವರಕರ ಹೇಳಿದರು.
ಡಾ.ಬಾಬಾಸಾಹೇಬ ಅಂಬೇಡ್ಕರ ರವರ 130ನೇ ಜನ್ಮ ದಿನಾಚಾರಣೆಯನ್ನು ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಗಳ ಮೇಲ್ವಿಚಾರಣೆ ಮತ್ತು ಬಲವರ್ಧನ ಸಮಿತಿ ಕರ್ನಾಟಕ, ಜಿಲ್ಲಾ ಸಮಿತಿ ಬೆಳಗಾವಿ, ತಾಲೂಕಾ ಸಮಿತಿ ಮೂಡಲಗಿ, ಗ್ರಾಮದ ಸಮಿತಿಯ ಕಾರ್ಯಲಯದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ಸಂವಿಧಾನದ ಬಗ್ಗೆ ನಾವೆಲ್ಲರೂ ಪರಿಪಾಲಿಸಬೇಕು ಅದರ ಜೋತೆಗೆ ಕಾನೂನುವನ್ನು ಗೌರವಿಸಬೇಕು. ದೇಶದ ಅಭಿವೃದ್ದಿಗೆ ನಾವೆಲ್ಲರೂ ಸಮಾನತೆಯಲ್ಲಿ ಏಕತೆಯನ್ನು ಕಾಣಬೇಕು. ಪರಸ್ಪರ ಸಹಕಾರ, ಸಹಬಾಳ್ವೆ, ಒಗ್ಗಟಿನಿಂದ ಎಲ್ಲರೂ ಕೈ ಜೋಡಿಸಿಬೇಕು. ಒಗ್ಗಟಾದರೆ ಮಾತ್ರ ನಾವು ಏನಾದರೂ ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಒಗ್ಗಟ್ಟಾದರೆ ನಾವು ಸದಾ ಎದ್ದು ನಿಲ್ಲುತ್ತೇವೆ. ವಿಭಜನೆಗೊಂಡರೆ ಕುಸಿದು ಬೀಳುತ್ತೇವೆ ಎಂದು ಸಂದೇಶ ಸಾರಿದಾರೆ ಅವರ ಚಿಂತನೆಗಳು, ವಿಚಾರಗಳು ನಾವೆಲ್ಲರೂ ಅಥೈಸಿಕೋಳ್ಳಬೇಕೆಂದು ಜಿಲ್ಲಾಧ್ಯಕ್ಷ ಮಾರುತಿ ನಾ. ಮಾವರಕರ ಹೇಳಿದರು.
ಮುಖಂಡ ಹಣಮಂತ ತೇರದಾಳ ಡಾ.ಬಿ.ಆರ್.ಅಂಬೇಡ್ಕರ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಭಾರತದ ಘನ ಸಂವಿಧಾನವನ್ನು ರಚಿಸಿದ ಸಂವಿಧಾನ ಶಿಲ್ಪಿ, ಶೋಷಿತರ ಶಾಶ್ವತ ಧ್ವನಿ, ಮಹಾನ್ ಮಾನವತಾವಾದಿ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಹಾಗೂ ಸೋದರತೆಯ ತತ್ವಗಳ ಸಾಕಾರಕ್ಕಾಗಿ ಸತತವಾಗಿ ಹೋರಾಡಿದ ಡಾ.ಬಿ.ಆರ್.ಅಂಬೇಡ್ಕರ ಅವರ ಕಾರ್ಯ ನಿಜಕ್ಕೂ ಶ್ರೇಷ್ಠವೆಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪಿಕೆಪಿಎಸ್ ಅಧ್ಯಕ್ಷ ಸುರೇಶ ಕತ್ತಿ, ಬಲವರ್ಧನ ಸಮಿತಿಯ ಸಂಘಟಿಕ ದೇವೆಂದ್ರ ಹೋಟಕರ, ಮುಖಂಡರಾದ ಸುರೇಶ ಡಬ್ಬನ್ನವರ, ಶಿವದುಂಡು ಕೋಂಗಾಲಿ, ಮಹಾದೇವ ಹೋಸಟ್ಟಿ, ಭೀಮಶಿ ಡಬ್ಬನ್ನವರ, ಭೀಮಪ್ಪ ಕುಲಿಗೋಡ, ಸಂಗಪ್ಪ ನಾಯ್ಕ, ಮಲ್ಲಪ್ಪ ಶೇಡಬಾಳ್ಕರ, ಪ್ರವೀಣ ಮಾವರಕರ, ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದರು.
ವಿವಿದೆಡೆ ಆಚರಣೆ: ಹಳ್ಳೂರ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಅಧ್ಯಕ್ಷ ಲಕ್ಷ್ಮಣ ಕತ್ತಿ ಡಾ.ಬಿ.ಆರ್.ಅಂಬೇಡ್ಕರ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಗ್ರಾಪಂ ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ದಲಿತ ಸಂಘಟಿಕರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ ಅವರ ಭಾವ ಚಿತ್ರದೊಂದಿಗೆ ಮೇರವಣಿಗೆ ಮಾಡಿ ಜಾಗೃತಿ ಮೂಡಿಸಿದರು.