ಭಾನುವಾರ , ಡಿಸೆಂಬರ್ 22 2024
kn
Breaking News

ಬಿಜೆಪಿ ಅಭ್ಯರ್ಥಿ ಮಂಗಳಾ ಸು. ಅಂಗಡಿ ಪರ ಮತಯಾಚಿಸಿದ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ

Spread the love

ಹಳ್ಳೂರ: ದೇಶದ ಅಭಿವೃದ್ದಿಪರ ಕಾರ್ಯ ಮಾಡುತ್ತಿರುವ ಮೋದಿಜಿಯವರ ಕೈ ಬಲಪಡಿಸಲು ಬಿಜೆಪಿ ಅಭ್ಯರ್ಥಿ ಮಂಗಳಾ ಸು. ಅಂಗಡಿ ಅವರನ್ನು ಗೆಲ್ಲಿಸಲು ಕಾರ್ಯಕರ್ತರು ಪ್ರವೃತ್ತರಾಗಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.

ಗ್ರಾಮದಲ್ಲಿ ನಡೆದ ಚುನಾವಣೆ ಪ್ರಚಾರ ನಿಮಿತ್ಯ ಹಳ್ಳ್ಳೂರ ಜಿಲ್ಲಾ ಪಂಚಾಯತ ವ್ಯಾಪ್ತಿಯ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮಂಗಳಾ ಸು. ಅಂಗಡಿ ಅವರ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಜಿಲ್ಲೆಯ ಸಮಗೃ ಅಭಿವೃದ್ದಿಗೆ ದಿ.ಸುರೇಶ ಅಂಗಡಿಯವರು ಶ್ರಮಿಸಿದ್ದಾರೆ. ಈ ಭಾಗದ ಜನರ ಜೀವನಾಡಿಯನ್ನು ಅರಿತು ಅಭಿವೃದ್ದಿ ಕೆಲಸ ಮಾಡುತ್ತಲೇ ದೇಹ ತ್ಯಾಗ ಮಾಡಿದ್ದು ಅವರ ಸಮಾಜ ಸೇವೆಗೆ ಹಿಡಿದ ಕನ್ನಡಿಯಾಗಿದೆ ಎಂದರು.
ಅಲ್ಲದೇ ಸರಳ ಸಜ್ಜನಿಕೆಯಿಂದ ಜನ ಮನ ಗೆದ್ದು ಸಂಸದರಾಗಿ ಕೇಂದ್ರದಲ್ಲಿ ಮಾಡಿದ ಸಾಧನೆಗಳು ಬಿಜೆಪಿ ಅಭ್ಯರ್ಥಿ ಮಂಗಳಾ ಸು. ಅಂಗಡಿ ಅವರ ಗೆಲುವಿಗೆ ಸಹಕಾರಿಯಾಗಲಿವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.

ಬಿಜೆಪಿ ಅಭ್ಯರ್ಥಿ ಮಂಗಳಾ ಸು. ಅಂಗಡಿ ಮಾತನಾಡಿ ಸರ್ವರಿಗೂ ಸಮ ಬಾಳು ಸರ್ವರಿಗೂ ಸಮ ಪಾಲೂ ಎಂಬ ತತ್ವದಡಿಯಲ್ಲಿ ಬಿಜೆಪಿ ಪಕ್ಷ ಎಲ್ಲ ಸಮಾಜದ ಬಾಂದವರಿಗೆ ಆಧ್ಯತೆ ನೀಡಿ ಸಮಗ್ರ ಅಭಿವೃದ್ದಿ ಸಹಕಾರ ನೀಡುತ್ತಿದೆ ಎಂದರು. ಅಲ್ಲದೇ ದಿ.ಸುರೇಶ ಅಂಗಡಿಯವರು ರೈಲ್ವೆ ಇಲಾಖೆಯಿಂದ ರಾಜ್ಯದಲ್ಲಿ ಅನೇಕ ಕೆಲಸ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಲೋಕಸಭಾ ಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ದಿಗೆ ಮತವನ್ನು ನೀಡಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೋಳಿ ಅವರ ಆಪ್ತ ಸಹಾಯಕ ನಾಗಪ್ಪಣ್ಣಾ ಶೇಖರಗೋಳ, ಜಿಪಂ ಸದಸ್ಯರಾದ ವಾಸಂತಿ ತೇರದಾಳ, ಗೋವಿಂದ ಕೋಪ್ಪದ, ತಾಪಂ ಸದಸ್ಯರಾದ ಸವಿತಾ ಡಬ್ಬನ್ನವರ, ಶಿವಬಸು ಜುಂಜರವಾಡ, ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಕತ್ತಿ, ಅರಬಾಂವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ ಪಾಟೀಲ, ಪರಪ್ಪ ಗಿರೆನ್ನವರ, ಮುಖಂಡರಾದ ಹಣಮಂತ ತೇರದಾಳ, ಭೀಮಶಿ ಮಗದುಮ್ಮ, ಪ್ರಕಾಶ ಮಾದರ, ಬಸಪ್ಪ ಸಂತಿ, ಸುರೇಶ ಕತ್ತಿ, ಶಿವನಗೌಡ ಪಾಟೀಲ, ಚೇತನ ರಡೇರಟ್ಟಿ, ಅಂಬರೀಶ ನಾಯ್ಕ, ಬಸಪ್ಪ ಹಡಪದ, ಶ್ರೀಶೈಲ ಬಾಗೋಡಿ, ಮಾವರಕರ, ಮಹಾಂತೇಶ ಕುಡಚ್ಚಿ, ಸಿದ್ದು ದುರದುಂಡಿ, ಶಿವನಪ್ಪ ಗುದಗನ್ನವರ, ಸೇರಿದಂತೆ ಗ್ರಾಮ ಪಂಚಾಯತ ಸದಸ್ಯರು, ಪಕ್ಷದ ಕಾರ್ಯಕರ್ತರು, ವಿವಿಧ ಮೋರ್ಚಾ ಪದಾಧಿಕಾರಿಗಳು ಪಾಲ್ಗೊಂಡಿದರು. ಬಸವರಾಜ ಮಾಳೇದ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕರ್ತರ ಸಭೆಯ ಮುನ್ನ ಗ್ರಾಮಕ್ಕೆ ಪ್ರಪ್ರಥಮವಾಗಿ ಆಗಮಿಸಿದ ಬಿಜೆಪಿ ಅಭ್ಯರ್ಥಿ ಮಂಗಳಾ ಸು. ಅಂಗಡಿ ಅವರು ವಿಶ್ವಗುರು ಬಸವೇಶ್ವರರ ಅಶ್ವಾರೂಢ ಮೂರ್ತಿಗೆ ಮಾಲಾರ್ಪಣೆ ಮಾಡಿದರು.


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page