ಶನಿವಾರ , ಡಿಸೆಂಬರ್ 21 2024
kn
Breaking News

ಸರ್ಕಾರದ ಆದೇಶವನ್ನು ನಾವೆಲ್ಲರು ಪಾಲಿಸಿದರೆ ಕೋವಿಡ್-೧೯ ಮುಕ್ತಿ ಹೊಂದಬಹುದು: ಬಸವರಾಜ ಹೆಗ್ಗನಾಯಕ

Spread the love

ಮೂಡಲಗಿ: ಕಾಯುವವರಿಗೆ ಒಳ್ಳೆಯ ಸಂಗತಿಗಳು ಬಂದೇ ಬರುತ್ತವೆ. ಆದರೆ ತಾಳ್ಮೆಯಿಂದ ಇದ್ದರೆ ಅತ್ಯುತ್ತಮ ದಿನಗಳು ಎದುರಾಗುವುದು ಖಚಿತವಾಗಿದೆ. ಸರ್ಕಾರದ ಆದೇಶವನ್ನು ನಾವು ಎಲ್ಲರೂ ಪಾಲಿಸಿದರೆ ಈ ಮಹಾಮಾರಿ ಕೊರೋನಾ ವೈರಸ್ ದಿಂದ ಮುಕ್ತಿ ದೊರೆತು ಒಳ್ಳೆಯ ದಿನಗಳು ಬರುತ್ತವೆ. ಜೀವ ಇದ್ದರೆ ಮುಂದಿನ ಜೀವನ ಮಾಡಲು ಸಾಧ್ಯವಾಗಿದೆ. ಎಲ್ಲ ನಾಗರಿಕರು ಕೊರೋನಾ ಹರಡದಂತೆ ಸರಕಾರದ ನಿಯಮಗಳನ್ನು ಪಾಲಿಸುವದು ಕಡ್ಡಾರಯವಾಗುದೆ ಎಂದು ಮೂಡಲಗಿ ಮತ್ತು ಗೋಕಾಕ ತಾಲೂಕಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಹೇಳಿದರು.

ಅವರು ಸಮೀಪದ ಹಳ್ಳೂರಿನ ಮಲ್ಲಯ್ಯನ ಗುಡಿಯಲ್ಲಿ ಗ್ರಾಮ ಪಂಚಾಯತ, ಆರೋಗ್ಯ, ಶಿಕ್ಷಣ ಇಲಾಖೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಕೊರೋನಾ ಕುರಿತು ಮುಂಜಾಗೃತ ಕ್ರಮಗಳ ಕುರಿತ ಕಾರ್ಯಾಗಾರದಲ್ಲಿ ಕೆಎಮ್‍ಎಫ್ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೋಳಿ ಅವರ ಮಾರ್ಗದರ್ಶನದಲ್ಲಿ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದ ಕೊರೊನಾ ಮುಂಜಾಗ್ರತಾ ಕಾರ್ಯಕ್ರಮವನ್ನು ಸ್ಯಾನಿಟೈಜರ್‍ದಿಂದ ಕೈ ತೊಳೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಪ್ರಧಾನ ಮಂತ್ರಿಯವರು ಅವರು ಇಡೀ ವಿಶ್ವದ ತುಂಬೆಲ್ಲಾ ಮರಣ ಮೃದಂಗ ಭಾರಿಸುತ್ತಿರುವ ಕೊರೊನಾ ವೈರಸ್ ರೋಗವನ್ನು ತಡೆಗಟ್ಟುವ ಸಲುವಾಗಿ 21 ದಿನಗಳ ಕಾಲ ಲಾಕ್ ಡೌನ್ ಮಾಡಿದ್ದಾರೆ. ಲಾಕ್ ಡೌನ್ ಅಂದರೆ ಅಂಗಡಿ ಮುಗ್ಗಟ್ಟುಗಳು, ಬಸ್ ಸಂಚಾರ ಅಷ್ಟೇ ಬಂದ್ ಅಲ್ಲ. ಮನುಷ್ಯ ತನ್ನ ಮನೆಯಿಂದ ಹೊರಗೆ ಬರದಂತೆ ನಿರ್ಬಂಧ ಹಾಕಿಕೊಂಡಾಗ ಮಾತ್ರ ಆದೇಶಕ್ಕೆ ಬೆಲೆ ಕೊಟ್ಟಂತೆ ಆಗುತ್ತದೆ ಎಂದರು.

ಕೊರೊನಾ ರೋಗಕ್ಕೆ ಒಂದೇ ಒಂದು ಔಷಧಿ ಅಂದರೆ ಅದು ನಾವೇಲ್ಲರೂ ಮನೆಯಲ್ಲಿ ಇರುವುದು. ಆ ರೋಗಕ್ಕೆ ಔಷಧಿ ಆದರಿಂದ ಹಳ್ಳೂರ ಗ್ರಾಮದ ಸಾರ್ವಜನಿಕರು ತಮ್ಮ ಜೀವ ಉಳಿಸಿಕೊಳ್ಳಬೇಕಾದರೆ ತಮ್ಮ ಕೈ ತೊಳೆದುಕೊಂಡು, ಮುಖಕ್ಕೆ ಮಾಸ್ಕ್ ಹಾಕಿಕೊಂಡು, ತಮ್ಮ ಮನೆ ಬಿಟ್ಟು ಹೊರಗಡೆ ಬಾರದಂತೆ ಇದ್ದರೆ ತಮ್ಮ ಜೀವ ಅಷ್ಟೇ ಅಲ್ಲ ಇಡೀ ಗ್ರಾಮದ ಜನರ ಜೀವ ಉಳಿಸಿದಂತೆ ಆಗುತ್ತದೆ ಎಂದು ಹೇಳಿದರು.

ಪೋಲಿಸ್ ಅಧಿಕಾರಿಗಳು, ಪಂಚಾಯತ ಸಿಬ್ಬಂದಿ, ಆರೋಗ್ಯ, ಆಶಾ ಕಾರ್ಯಕರ್ತೆಯವರು ಜನರ ಸೇವೆಗಾಗಿ ತಮ್ಮ ಜೀವನ ಮುಡಿಪ್ಪಾಗಿಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಧಿಕಾರಿಗಳು ಜನರಿಗೆ ಎಷ್ಟೇ ಜಾಗೃತಿ ಮೂಡಿಸಿದರು ಸಾರ್ವಜನಿಕರು ತಿಳಿದುಕೊಳ್ಳುತ್ತಿಲ್ಲಾ. ಹೊರಗಡೆ ಬರಬೇಡಿ ಎಂದು ಹೇಳಿದರು ಕೇಳುತ್ತಿಲ್ಲ, ಆದಷ್ಟು ಜನರು ಹೊಗಡೆ ಬರದಿಂದರೆ ನಮ್ಮ ದೇಶ ನಮ್ಮ ರಾಜ್ಯದ ಜನರನ್ನು ರಕ್ಷಿಸಿಕೊಳ್ಳಬಹುದು ಎಂದು ಹೇಳಿದರು.
ಗ್ರಾಮದ ಬೀಟ್ ಪೋಲಿಸ್ ಎನ್ ಎಸ್ ಒಡೆಯರ ಮಾತನಾಡಿ, ನಾವು ಇಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿರುವುದು ಜನರ ರಕ್ಷಿಸುವ ಸಲುವಾಗಿ. ಜನರು ನಮ್ಮ ಜೊತೆ ಕೈ ಜೋಡಿಸಿದರೆ ನಮ್ಮ ಗ್ರಾಮದಲ್ಲಿ ಕೊರೊನಾ ವೈರಸ್ ಹರಡದಂತೆ ತಡೆಗಟ್ಟಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಡಿಒ ಎಚ್ ವೈ ತಾಳಿಕೋಟಿ, ಸಂಜು ಅಗ್ನೆಪ್ಪಗೊಳ, ಮಹಾದೇವ ಕುಲಕರ್ಣಿ, ಎಸ್ ಎಚ್ ವಾಸನ್, ಮುರಿಗೆಪ್ಪ ಮಾಲಗಾರ ಕೊರೋನಾ ಮಾಹಾಮಾರಿಯ ಅಪಾಯದ ಕುರಿತು ಹಾಗೂ ತಡೆಗಟ್ಟುವ ಕ್ರಮಗಳ ಕುರಿತು ಮಾತನಾಡಿದರು.
ಗ್ರಾಮದ ಪ್ರಮುಖ ರಸ್ತೆಗಳನ್ನು ಬಂದ ಮಾಡಿದ್ದು, ಬೇರೆ ಊರಿನವರಿಗೆ ಅನಗತ್ಯ ತಿರುಗುವಿಕೆಗೆ ಕಡಿವಾಣ ಹಾಕಿದ್ದಾರೆ. ಪ್ರತಿ ದಿನ ಬೆಳಗ್ಗೆ ಸಂತೆ ಸಮಾಜಿಕ ಅಂತರ ಕಾಯ್ದುಕೊಂಡು ಜರುತ್ತಿದೆ. ಕರೋನಾ ಸೈನಿಕ ತಂಡವನ್ನು ರಚಿಸಿದ್ದು ಇವರ ಮೂಲಕ ಅಂಗಡಿ ಮುಗ್ಗಟ್ಟುಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ತಡೆಯುವದು. ವ್ಯವಸ್ಥಿತ ರೀತಿಯಲ್ಲಿ ಸಂತೆ ಜರುಗಿಸುವದು. ಕೊರೋನಾ ಸಂಶಯಾಸ್ಪದರನ್ನು ಆಶಾ ಕಾರ್ಯಕರ್ತೆಯರ ಮೂಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಕಾರ್ಯಗಳು ನಡೆಯುತ್ತಿವೆ.
ಕಾರ್ಯಕ್ರಮದಲ್ಲಿ ತಾಪಂ ಗೋಕಾಕ ಉಪನಿರ್ದೇಶಕ ಎಸ್ ಎಚ್ ದೇಸಾಯಿ, ಗ್ರಾಪಂ ಉಪಾಧ್ಯಕ್ಷ ಉಮೇಶ ಸಂತಿ, ಮಾಜಿ ಜಿಪಂ ಸದಸ್ಯ ಭೀಮಶಿ ಮಗದುಮ, ಗ್ರಾಪಂ ಸದಸ್ಯರಾದ ಲಕ್ಷ್ಮಣ ಕತ್ತಿ, ಬಾಹುಬಲಿ ಸಪ್ತಸಾಗರ, ಮಲ್ಲಪ್ಪ ಹೊಸಟ್ಟಿ, ಸಂಗಪ್ಪ ಪಟ್ಟಣಶೆಟ್ಟಿ, ಅಶೋಕ ಬಾಗಡಿ, ಭೀಮಪ್ಪ ಹೊಸಟ್ಟಿ, ಗಂಗಪ್ಪ ಅಟಮಟ್ಟಿ, ಪಿಡಿಒ ಅಧಿಕಾರಿಗಳಾದ ಹನಮಂತ ಬಸಳಿಗುಂದಿ, ಎಸ್.ಆರ್ ರೊಡ್ಡನವರ, ಎಸ್.ಬಿ ತಡಸನವರ ಹಾಗೂ ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸಾರ್ವಜನಿಕರು ಇದ್ದರು. ವೈ ಬಿ ಕಳ್ಳಿಗುದ್ದಿ ನಿರೊಪಿಸಿ ವಂದಿಸಿದರು.
ವರದಿ: ಕೆ.ವಾಯ್ ಮೀಶಿ


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page