ಶನಿವಾರ , ಡಿಸೆಂಬರ್ 21 2024
kn
Breaking News

ಮೂಡಲಗಿ

ಬೆಳಗಾವಿಯಲ್ಲಿ ಎನ್‍ಎಂಪಿ ಘಟಕ ಸ್ಥಾಪನೆಗೆ ಪ್ರಯತ್ನ : ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ : ಬೆಳಗಾವಿಯಲ್ಲಿ ನಂದಿನಿ ಮಿಲ್ಕ್ ಪ್ರೋಡಕ್ಟ್ (ಎನ್‍ಎಂಪಿ) ಘಟಕ ಸ್ಥಾಪಿಸಲು ಪ್ರಯತ್ನಿಸಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಶುಕ್ರವಾರದಂದು ಬೆಳಗಾವಿ ಹಾಲು ಒಕ್ಕೂಟದ ಆವರಣದಲ್ಲಿ ನಡೆದ ಹಾಲು ಉತ್ಪಾದಕರ ರೈತರ ಮಕ್ಕಳಿಗೆ 4.50 ಕೋಟಿ ರೂ. ವೆಚ್ಚದ ವಸತಿ ನಿಲಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಎನ್‍ಎಂಪಿ ಘಟಕ ಸ್ಥಾಪನೆಗೆ ಬೆಳಗಾವಿ ಮಹಾ ನಗರದಲ್ಲಿ 40 ರಿಂದ 50 …

Read More »

12ನೇ ಶತಮಾನದಲ್ಲಿನ ಬಸವಣ್ಣನವರ ತತ್ವ ಕಲಿಯುಗದಲ್ಲಿ ನಡೆಯುತ್ತಿದೆ: ದಾನೇಶ್ವರ ಶ್ರೀಗಳು

ಹಳ್ಳೂರ: ಅತೀ ಆಸೆ ಮಾಡದೆ ಇದ್ದುದರಲ್ಲಿ ಸಂತೃಪ್ತಿ ಹೊಂದಬೇಕು. ಹಿಂದೂ ಮುಸ್ಲಿಂ ಒಂದಾಗಿ ಒಬ್ಬರ ಮನಸ್ಸು ಇನ್ನೋಬ್ಬರು ನೋಯಿಸದೇ ಎಲ್ಲರೂ ಸಹಬಾಳ್ವೆಯಿಂದ ಬದುಕಬೇಕು. ಮಾನವನಿಗೆ ಜ್ಞಾನಾರ್ಜನೆ ಬಹಳ ಅವಶ್ಯಕತೆವಿದೆ ಎಂದು ಬಂಡಿಗಣಿಯ ಚಕ್ರವರ್ತಿ ದಾನೇಶ್ವರ ಶ್ರೀಗಳು ಹೇಳಿದರು. ಬಂಡಿಗಣಿಯ ಚಕ್ರವರ್ತಿ ದಾನೇಶ್ವರ ಶ್ರೀಗಳು ಹಳ್ಳೂರ ಗ್ರಾಮಕ್ಕೆ ಆಗಮನದಿಂದ ಗ್ರಾಮದ ವಿವಿಧ ಬಡಾವಣೆಗಳಲ್ಲಿ ಹಸಿರು ತೋರಣಗಳಿಂದ ಶೃಂಗರಿಸಿದರು. ಗ್ರಾಮದಲ್ಲಿ ಹಬ್ಬದ ವಾತಾವರಣ ಹಬ್ಬಿತ್ತು. ನಂತರ ಅನ್ನ ಪ್ರಸಾದ ನಡೆಯಿತ್ತು. ಗ್ರಾಮದ ಶ್ರೀ …

Read More »

ಪುರಸಭೆ ಕಾಂಪ್ಲೆಕ್ಸ್ ಮಾಹಿತಿ ಹಾಗೂ ಪಾದಚಾರಿ ಮಾರ್ಗ ಸರಿಪಡಿಸುವ ಕುರಿತು ಮನವಿ

ಮೂಡಲಗಿ ಅ11: 2021 ರ ಪ್ರಕಾರ ಪುರಸಭೆಯವರು ಕಾಯಿ ಪಲ್ಲೆ ಮಾರುಕಟ್ಟೆಯಲ್ಲಿನ ಹಳೆ ಕಾಂಪ್ಲೆಕ್ಸ್ ಮಾಹಿತಿ ಪೂರೈಸಿದ್ದು,ನೀಡಿರುವ ಮಾಹಿತಿ ಪ್ರಕಾರ ಕೆಲವರು ಹಳೆ ಮತ್ತು ಹೊಸ ಕಾಂಪ್ಲೆಕ್ಸ್ ಪುರಸಭೆಯಿಂದ ಪಡೆದು ಬೇರೆಯವರಿಗೆ ಪುರಸಭೆ ಹೆಸರಿನಲ್ಲಿ ಹೆಚ್ಚಿನ ಬಾಡಿಗೆ ರೂಪದಲ್ಲಿ ಕೊಡುತ್ತಿರುವುದು ಸತ್ಯವಾದ ಸಂಗತಿಯಾಗಿದೆ,ಆದಕಾರಣ ಬಳಕೆದಾರರಿಗೆ ಹೆಚ್ಚಿನ ಹೊರೆಯಾಗುತ್ತಿದ್ದು, ಪುರಸಭೆಯವರು ಕೂಲಂಕುಷವಾಗಿ ವಿಚಾರಿಸಿ ದುರುಪಯೋಗ ಮಾಡುತ್ತಿರುವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಜೊತೆಗೆ ಮೂಡಲಗಿ ನಗರದ ಮುಖ್ಯರಸ್ತೆಯಾದ ವೀರಭದ್ರೇಶ್ವರ ದೇವಸ್ಥಾನದಿಂದ ಮಾರ್ಕೆಟ್ …

Read More »

ಕೊವಿಡ್ ನಿರ್ಮೂಲನೆಗಾಗಿ ಸರಕಾರದ ನಿರ್ದೇಶನಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ- ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಕೋವಿಡ್ ಸೋಂಕಿನ ಸಂರಕ್ಷಣೆಗಾಗಿ ಅರಭಾಂವಿ ವಿಧಾನಸಭಾ ಮತಕ್ಷೇತ್ರದಲ್ಲಿ ಶೇ.60ರಷ್ಟು ಲಸಿಕೆಗಳನ್ನು ನೀಡಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಶುಕ್ರವಾರದಂದು ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ನಿಗದಿತ ಗುರಿ ತಲುಪಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿರುವದಾಗಿ ಹೇಳಿದರು. ಅರಭಾವಿ ಕ್ಷೇತ್ರದಾದ್ಯಂತ 2.95 ಲಕ್ಷ ಜನರಿಗೆ ಲಸಿಕೆ ಗುರಿಯನ್ನು ಹೊಂದಿದ್ದು, ಇಲ್ಲಿಯವರಿಗೆ ಸುಮಾರು 1.60 ಲಕ್ಷ ಜನರಿಗೆ ಲಸಿಕೆಗಳನ್ನು ಹಾಕಲಾಗಿದ್ದು, ಕೊವೀಡ್ ಹೊಗಲಾಡಿಸಲು …

Read More »

ನೆರೆ,ಸಂತ್ರಸ್ತರ ಮನೆ ಹಾಗೂ ಬೆಳೆ ಪರಿಹಾರಕ್ಕಾಗಿ ಮತ್ತು ಅಧಿವೇಶನದಲ್ಲಿ ಚರ್ಚಿಸಲು ಆಗ್ರಹಿಸಿ ಧರಣಿ- ಭೀಮಪ್ಪ ಗಡಾದ

ಮೂಡಲಗಿ: ತಾಲೂಕಿನಲ್ಲಿ ಘಟಪ್ರಭಾ ನದಿಯ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡು ಸುಮಾರು ಎರಡು ವರ್ಷಗಳು ಗತಿಸಿದ್ದರೂ ಕೂಡಾ ಸರಕಾರದಿಂದ ಮನೆ ಪರಿಹಾರ ಹಣ ದೊರೆಯದೇ ಇರುವುದರಿಂದ, ಮನೆ ಹಾಗೂ ಬೆಳೆ ಪರಿಹಾರಕ್ಕೆ ಮತ್ತು ನೆರೆ ಸಂತ್ರಸ್ತರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲು ಆಗ್ರಹಿಸಿ ಸ.15ರಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಮೂಡಲಗಿಯ ಸಮಾಜ ಸೇವಕ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ತಿಳಿಸಿದರು. ಪಟ್ಟಣದ …

Read More »

ಮೂಡಲಗಿ: ವಿದ್ಯುತ್ ಸರಬರಾಜು ನಿಗಮದ ಕಛೇರಿಯಲ್ಲಿ ಮಣ್ಣಿನ ಗಣಪತಿ ಮೂರ್ತಿ ಪ್ರತಿಷ್ಠಾಪನೆ

ಮೂಡಲಗಿ : ಸ್ಥಳೀಯ ಈರಣ್ಣ ನಗರದ ವಿದ್ಯುತ್ ಸರಬರಾಜು ನಿಗಮದ ಕಛೇರಿಯಲ್ಲಿ ಗಾಂಧೀ ವೃತ್ತದಿಂದ ಪರಿಸರಯುಕ್ತ ಮಣ್ಣಿನ ಗಣಪತಿ ಮೂರ್ತಿಯನ್ನು ಕೊವೀಡ್ ನಿಯಮಾನುಸಾರ ಶಾಖೆಯಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಸರಳತೆಯಿಂದ ಪೂಜಾ ಕಾರ್ಯಕ್ರಮ ಜರುಗಿತು. ಶುಕ್ರವಾರ ಪಟ್ಟಣದಲ್ಲಿ ಜರುಗಿದ ಗಣೇಶ ಚತುರ್ಥಿಯ ನಿಮಿತ್ಯವಾಗಿ ವಿದ್ಯುತ್ ನಿಗಮ ಮಂಡಳಿಯ ಸಿಬ್ಬಂದಿ ವರ್ಗದವರು ವಿಘ್ನ ನಿವಾರಕ ಗೌರಿ ಗಣೇಶನನ್ನು ಪ್ರತಿಷ್ಠಾಪಿಸಿ ಪುಣಿತರಾದರು. ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಎಮ್.ಎಸ್.ನಾಗನ್ನವರ, ಎಸ್.ಎಸ್ ಮುರಗೋಡ, ಶಾಖಾಧಿಕಾರಿಗಳಾದ …

Read More »

ಅಲೆಗಳ ಬಲೆಗೆ ಸಿಲುಕ್ಕಿದ್ದ ಜನತೆ ವಿಘ್ನ ನಿವಾರಕನ್ನು ಪ್ರತಿಷ್ಠಾಪಿಸಿ ಕೊರೋನಾ ಹಿಮ್ಮೆಟ್ಟಲು ಪ್ರಾರ್ಥಿಸಿದರು

ಮೂಡಲಗಿ : ಕೊರೋನಾ ಅರ್ಭಟಕ್ಕೆ ಸಿಲುಕಿ ಸಾರ್ವಜನಿಕರು ಅಲೆಗಳ ಬಲೆಗೆ ಸಿಲುಕಿ ಕಂಗಾಲಾಗಿದ್ದರು. ಪವಿತ್ರ ವಿಘ್ನ ನಿವಾರಕ ಗಣೇಶನನ್ನು ಮಣ್ಣಿನ ರೂಪದಲ್ಲಿ ಬರಮಾಡಿಕೊಂಡು ಮಹಾಮಾರಿ ಕೊರೋನಾ ಅಲೆಗಳನ್ನು ಹಿಮ್ಮೆಟ್ಟಿಸುವಂತೆ ವಿಘ್ನ ನಿವಾರಕ ಗಣೇಶನಲ್ಲಿ ಪ್ರಾರ್ಥಿಸಿ ತಮ್ಮ ಮನೆಗಳಿಗೆ ಹಾಗೂ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ದೇವರ ಮೊರೆಹೋಗಿ ತಾಲೂಕಿನ ಜನತೆ ಸಂಭ್ರಮಿಸಿದರು. ಶುಕ್ರವಾರ ಜರುಗಿದ ಗಣೇಶ ಹಬ್ಬದ ಪ್ರಯುಕ್ತ ಮೂಡಲಗಿ ಹಾಗೂ ಸುತ್ತಲಿನ ಜನತೆ ಸರಳ ರೀತಿಯಲ್ಲಿ ಗೌರಿ …

Read More »

ಅಜ್ಞಾನವೆಂಬ ಅಂಧಕಾರ ತೊಲಗಲು ವಿದ್ಯೆಯೆಂಬ ಸುಜ್ಞಾನದ ಮೂಲಕ ಶಿಕ್ಷಕರಿಂದ ಸಾಧ್ಯವಾಗಿದೆ : ತಹಶಿಲ್ದಾರ ಮಹಾತ

ಮೂಡಲಗಿ: ಅಜ್ಞಾನವೆಂಬ ಅಂಧಕಾರದಲ್ಲಿ ಮುಳುಗಿರುವವನ ಬಾಳಿನಲ್ಲಿ ಕತ್ತಲು ಹೊಡೆದೋಡಿಸಿ, ವಿದ್ಯೆಯೆಂಬ ಸುಜ್ಞಾನದ ಬೆಳಕನ್ನು ತರುವ ಶ್ರೇಷ್ಠ ವ್ಯಕ್ತಿತ್ವ ಶಿಕ್ಷಕ ವೃತ್ತಿಯಲ್ಲಿದೆ. ಸಮಾಜಿಕವಾಗಿ ಆರ್ಥಿಕವಾಗಿ ಬೌದ್ಧಿಕವಾಗಿ ಉನ್ನತ ಮಟ್ಟದಲ್ಲಿರಲು ಶಿಕ್ಷಕರು ಹಾಕಿ ಕೊಟ್ಟ ಭದ್ರ ಬುನಾಧಿಯಾಗಿದೆ ಎಂದು ಮೂಡಲಗಿ ತಹಶೀಲ್ದಾರ ಡಿ.ಜಿ. ಮಹಾತ್ ಹೇಳಿದರು. ರವಿವಾರ ಪಟ್ಟಣದ ಕೆ.ಎಚ್ ಸೋನವಾಲಕರ ಕಲ್ಯಾಣ ಮಂಟಪ ಗುಡ್ಲಮಡ್ಡಿ ಈರಣ್ಣ ದೇವಸ್ಥಾನದಲ್ಲಿ ಜರುಗಿದ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗುರು …

Read More »

ದಿ.ವಾಯ್.ಎಲ್ ಸಣ್ಣಕ್ಕಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ CRP ಗಳಾದ ಕಳ್ಳಿಮನಿ & ಅಮಣಿಯವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ

ಮೂಡಲಗಿ: ದಿ. ವಾಯ್ ಎಲ್ ಸಣ್ಣಕ್ಕಿ ಮೆಮೋರಿಯಲ್ ಟ್ರಸ್ಟ ಕೌಜಲಗಿ ವತಿಯಿಂದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಕೊರೋನಾ ಸಹಾಯವಾಣಿಯಲ್ಲಿ ಬಿಇಒ ಎ.ಸಿ ಮನ್ನಿಕೇರಿಯವರ ನೇತೃತ್ವದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಪಿ.ಜೆ ಕಳ್ಳಿಮನಿ, ಎಮ್.ಎಲ್ ಅಮಣಿ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಗುತ್ತಿದೆ. ಮೂಡಲಗಿ ಕೆ.ಎಚ್.ಸೋನವಾಲಕರ ಕಲ್ಯಾಣ ಮಂಟಪ ಈರಣ್ಣನ ಗುಡಿಯಲ್ಲಿ ಸ. 5 ರಂದು ಜರುಗುವ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವದು …

Read More »

ಧಾರವಾಡದ ಡೆಪ್ಯೂಟಿ ಚನ್ನಬಸಪ್ಪ ದತ್ತಿ ಪ್ರತಿಷ್ಠಾನವತಿಯಿಂದ ಭೂತನ್ನವರ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ

ಮೂಡಲಗಿ: ಡೆಪ್ಯೂಟಿ ಚನ್ನಬಸಪ್ಪ ದತ್ತಿ ಪ್ರತಿಷ್ಠಾನ ಧಾರವಾಡ ವತಿಯಿಂದ ದಿ. ಶ್ಯಾಮರಾವ್ ನರಸೋಪಂತ ಕುಲಕರ್ಣಿ ಅವರ ಸ್ಮರನಾರ್ಥ ನಿವೃತ್ತ ಗುರುಮಾತೆ ಸರೋಜಿನಿ ಶ್ಯಾಮರಾವ್ ಕುಲಕರ್ಣಿ ಇವರು ನೀಡುವ ಸನ್ 2021-22 ನೇಯ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಬಿಲಕುಂದಿಯ ಸವದತ್ತಿ ತೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಹ ಶಿಕ್ಷಕ ಬಿ.ಪಿ ಭೂತನ್ನವರ ರವರಿಗೆ ನೀಡಲಾಗಿದೆ. ಮೂಡಲಗಿ ಕೆ.ಎಚ್.ಸೋನವಾಲಕರ ಕಲ್ಯಾಣ ಮಂಟಪ ಈರಣ್ಣನ ಗುಡಿಯಲ್ಲಿ ಸ. 5 ರಂದು ಜರುಗುವ …

Read More »

You cannot copy content of this page