ಮೂಡಲಗಿ: ರಾಜಸ್ಥಾನದ ಉದಯಪೂರದಲ್ಲಿ ಡಿ. ೨೫ ರಿಂದ ಜರುಗಲಿರುವ ಅಂಗವಿಕಲರ ರಾಷ್ಟ್ರೀಯ ವಿಲ್‌ಚೇರ್ ಕ್ರಿಕೇಟ್ ಟೋರ್ನಾಮೆಂಟಗೆ ತಾಲೂಕಿನ ಗುಲಗಂಜಿಕೊಪ್ಪದ ಹನಮಂತ ಹಾವಣ್ಣವರ ಕರ್ನಾಟಕ ತಂಡದಲ್ಲಿ ಪ್ರತಿನಿಧಿಸುವ ಮೂಲಕ ಗ್ರಾಮೀಣ ಮಟ್ಟದಲ್ಲಿದ್ದರು ವಿಶೇಷ ಕ್ರೀಡಾ ಪ್ರತಿಭೆಗೆ ಅವಕಾಶ ಸಿಕ್ಕಂತಾಗಿದೆ. ಮೂಲತಃ ಕೃಷಿ ಕುಟುಂಬದಿoದ ಬಂದoತಹ ಹನಮಂತ ಹಾವಣ್ಣವರ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿಹೊಂದಿರುವದರಿoದ ಅಂಗವಿಕಲನಾದರು ಛಲಬಿಡದೆ ಪ್ರಯತ್ನ ಪಟ್ಟು ಕರ್ನಾಟಕ ತಂಡದಲ್ಲಿ ಪ್ರತಿನಿಧಿಸುವದು ಹೆಮ್ಮೆಯ ವಿಷಯವಾಗಿದೆ. ಪ್ರಸ್ತುತ ಗ್ರಾಮ ಪಂಚಾಯತ ಸದಸ್ಯರಾಗಿದ್ದು ಅನೇಕ …
Read More »ಮೂಡಲಗಿ ಪಟ್ಣದಲ್ಲಿ ಸರಣಿ ಕಳ್ಳತನ: ವಿಡಿಯೊದಲ್ಲಿ ಸೆರೆಯಾದ ಕಳ್ಳರ ಕರಾಮತ್ತು
ಮೂಡಲಗಿ: ಪಟ್ಟಣದಲ್ಲಿ ಕಳೆದ ತಿಂಗಳಿನಿಂದ ಸರಣಿ ಕಳ್ಳತನವಾಗುತ್ತಿದ್ದು ಪಟ್ಟಣದ ವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಕಳೆದ ನವೆಂಬರ್ 28ರ ರಾತ್ರಿ ಕಲ್ಮೇಶ್ವರ ವೃತದಲ್ಲಿನ ಒಂದು ಅಂಗಡಿಯನ್ನು ಕಳ್ಳರು ಕದಿಯಲು ಪ್ರಯತ್ನಿಸಿದ್ದು, ಅದೃಷ್ಟವಶಾತ್ ಈ ಕದಿಮರ ಕೈಗೆ ಬೆಲೆಬಾಳುವ ವಸ್ತು, ಹಣ ಸಿಕ್ಕಿಲ್ಲ. ಮತ್ತೆ ಅದೆ ನವೆಂಬರ ತಿಂಗಳಿನ 29ರ ರಾತ್ರಿ ಮಾರ್ಕೆಟ್ ರಸ್ತೆಯಲ್ಲಿನ ತಗಡಿನ ಶೆಡ್ ಅಲ್ಲಿರುವ ಸುಭಾಸ ಗಾರ್ಮೆಂಟ್ಸ್ ಅನ್ನವ ಬಡಪಾಯಿ ವ್ಯಕ್ತಿಯ ಬಟ್ಟೆ ಅಂಗಡಿಯಲ್ಲಿ ಕಳ್ಳರು ತಮ್ಮ ಕೈಚಳಕ …
Read More »ಫೆ 07 ಬೆಂಗಳೂರಿನಲ್ಲಿ “ಎಸ್.ಟಿ. ಮೀಸಲಾತಿಗಾಗಿ ಕುರುಬರ ಜಾಗೃತಿ ಸಮಾವೇಶ” : ಸೋಮಣ್ಣ ಮೌರ್ಯ
ವರದಿ: ಕೆ.ವಾಯ್ ಮೀಶಿ ಬೆಂಗಳೂರು: ಕುರುಬ ಸಮಾಜವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಹಾಗೂ ರಾಜಕೀಯವಾಗಿಯೂ ಹಿಂದುಳಿದಿದೆ ಇಂದಿಗೂ ಸಹ ಅಲೆಮಾರಿ ಜೀವನ ನಡೆಸುತ್ತಿರುವ, ಬುಡಕಟ್ಟು ಸಂಸ್ಕøತಿಗಳನ್ನು ಆಚರಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮೀಸಲಾತಿಯು ಪ್ರಜೆಗಳ ಹಕ್ಕು. ಭಾರತ ದೇಶದಲ್ಲಿ ಹಲವು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿದ್ದರೂ ಸಹ ಕರ್ನಾಟಕದಲ್ಲಿ ಕುರುಬ ಸಮುದಾಯ ಮೀಸಲಾತಿಯಿಂದ ವಂಚಿತವಾಗಿದೆ ಎಂದು ಸೋಮಣ್ಣ ಮೌರ್ಯ ಮಲ್ಲೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅವರು ಬೆಂಗಳೂರಿನಲ್ಲಿ …
Read More »ಜಯ ಕರ್ನಾಟಕ ಅಧ್ಯಕ್ಷ, ಮಾಜಿ ಭೂಗತ ಜಗತ್ತಿನ ದೊರೆ ಮುತ್ತಪ್ಪ ರೈ ಇನ್ನಿಲ್ಲ
ಜಯ ಕರ್ನಾಟಕ ಸಂಘಟನೆಯ ಸ್ಥಾಪಕ, ಮಾಜಿ ಭೂಗತ ದೊರೆ ಮುತ್ತಪ್ಪ ರೈ (68) ನಿಧನರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಲಿವರ್ ಹಾಗೂ ಮೆದುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮುತ್ತಪ್ಪ ರೈ ಗುರುವಾರ ತಡರಾತ್ರಿ 2 ಗಂಟೆ ಹೊತ್ತಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮುತ್ತಪ್ಪ ರೈ ನಿಧನರಾಗಿದ್ದಾರೆಂಬ ಸುದ್ದಿ ಬುಧವಾರ ರಾತ್ರಿಯೇ ಹರಡಿತ್ತು. ಆದರೆ ಆಸ್ಪತ್ರೆ ರೈ ನಿಧನವನ್ನು ಅಧಿಕೃತವಾಗಿ ಪ್ರಕಟಿಸಿರಲಿಲ್ಲ. ಪುತ್ತೂರಿನ ಮುತ್ತಪ್ಪ ರೈ ಕಳೆದ ಏಪ್ರಿಲ್ 28ರಂದು …
Read More »ಇಲ್ಲಿನ ಹತ್ತು ಪ್ರದೇಶಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಇಲ್ಲ!
ಬೆಳಗಾವಿ: ಮಹಾಮಾರಿ ಕೊರೋನಾ ರೋಗದ ಹಿನ್ನಲೆಯಲ್ಲಿ ನಮ್ಮ ರಾಜ್ಯದಲ್ಲಿ ಇಂದಿನಿಂದ 3.0 ಹಂತದ ಲಾಕ್ ಡೌನ್ ಮುಂದುವರೆದಿದ್ದು, ಈ ಹಂತದ ಲಾಕ್ ಡೌನ್ ನಲ್ಲಿ ಒಂದಿಷ್ಟು ಸಡಿಲಿಕೆ ಮಾಡಲಾಗಿದೆ. ಕಳೆದ ಒಂದುವರೆ ತಿಂಗಳ ಬಳಿಕ ಇಂದಿನಿಂದ ಕಂಟೇನ್ಮೆಂಟ್ ಝೋನ್ ಹೊರತುಪಡಿಸಿ ಉಳಿದೆಡೆ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ ಬೆಳಗಾವಿ ಜಿಲ್ಲೆಯ 10 ಪ್ರದೇಶಗಳಲ್ಲಿ ಮಧ್ಯ ಮಾರಾಟಕ್ಕೆ ಅವಕಾಶ ನೀಡದೇ ಇರುವುದು ಮದ್ಯ ಪ್ರಿಯರಿಗೆ ಮತ್ತೆ ನಿರಾಸೆಮಾಡಿದೆ. ಇಲ್ಲಿನ 10 …
Read More »ಎಣ್ಣೆ ಅಂಗಡಿ ಪ್ರಾರಂಭಕ್ಕೆ ಸಕಲ ಸಜ್ಜು
ಮೂಡಲಗಿ: ಪಟ್ಟಣದಲ್ಲಿ ನಾಲ್ಕು ವೈನ್ಸ್ ಶಾಪ ಸೇರಿ ಒಂದು ಎಮ್.ಎಸ್.ಆಯ್.ಎಲ್ ಪ್ರಾರಂಭಕ್ಕೆ ರವಿವಾರ ಸಂಜೆ ಸಕಲ ಸಿದ್ದತೆಯನ್ನು ಮಾಡಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಕಟ್ಟಿಗೆ ಕಟ್ಟಿ ಹಾಗೂ ಚೌಕ್-ಬಾಕ್ಷಗಳನ್ನು ಮತ್ತು ಬ್ಯಾರಿಕೆಡ್ ಹಾಕಿ ಪೂಜೆ ಸಲ್ಲಿಸಿ ಅಂಗಡಿ ತೆರೆಯಲು ಸಜ್ಜಾಗಿ ನಿಂತಿವೆ. ಮೂಡಲಗಿ ಪಟ್ಟಣದಲ್ಲಿ ದುರ್ಗಾ ವೈನ್ಸ್, ಹೊನ್ನಮ್ಮಾ ವೈನ್ಸ್, ರಾಜೇಶ್ವರಿ ವೈನ್ಸ್, ಎಂಎಸ್‌ಐಎಲ್ ಹಾಗೂ ಚೇತನ ವೈನ್ಸ್ ಸಜ್ಜಾಗಿ ನಿಂತಿರುವ ದೃಶ್ಯ ಕಾಣಿಸಿತು. ಕಳೆದ ಎರಡು ತಿಂಗಳುಗಳಿಂದ ಜಾತಕ …
Read More »ಲಾಕ್ ಡೌನ್ ಸಡಲಿಸಿ, ಮದ್ಯಪ್ರಿಯರಿಗೆ ಮದ್ಯ ಬಾಗ್ಯ ಕಲ್ಪಿಸಿದ ಸರ್ಕಾರ
ದೇಶದಲ್ಲಿ ಕೋರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಿಸಿತ್ತು. ಇದರ ಪರಿಣಾಮ ರಾಜ್ಯದಲ್ಲಿ ಮದ್ಯ ಮಾರಾಟ ಸಂಪೂರ್ಣ ಬಂದಾಗಿತ್ತು. ಇದನ್ನ ಅರಿತ ಮದ್ಯಪ್ರಿಯರು ಕಳ್ಳಬಟ್ಟಿ ಸರಾಯಿಗೆ ಮೊರೆ ಹೋಗಿದ್ದರು. ದುಬಾರಿ ದರ ಪಡೆದುಕೊಂಡು ಹಲವೆಡೆಗಳಲ್ಲಿ ಕಳ್ಳತನದಿಂದ ಮದ್ಯ ಮಾರಾಟಗಾವಾಗುತ್ತಿತ್ತು. ಇದನ್ನು ಮನಗಂಡು ರಾಜ್ಯ ಸರ್ಕಾರ ಕೆಲವೊಂದು ಷರತ್ತುಗಳನ್ನ ವಿದಿಸಿ ಮದ್ಯಪ್ರಿಯರಿಗೆ ಮೇ.4 ಬೆಳಿಗ್ಗೆ 9ಘಂಟೆಯಿಂದ ಮದ್ಯ ಮಾರಾಟಕ್ಕೆ ಆದೇಶ ಹೊರಡಿಸಿದೆ. ಕೇಂದ್ರ/ರಾಜ್ಯ/ಜಿಲ್ಲಾಡಳಿತ …
Read More »ಬೆಳಗಾವಿಯಲ್ಲಿ ನಿಲ್ಲದ ಕೋರೊನಾ ಅಟ್ಟಹಾಸ
ಬೆಳಗಾವಿ: ರಾಜ್ಯದಲ್ಲಿ ಇಂದು ಹೊಸದಾಗಿ 11 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದರಲ್ಲಿ ಮಂಡ್ಯದ ಎಂಟು ಹಾಗೂ ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿ P301ರ ವ್ಯಕ್ತಿಯಿಂದ ೫೦ ಹಾಗೂ ೫೫ ವರ್ಷದ ವಕ್ತಿಗಳಿಗೆ ಮತ್ತು ೩೦ ವರ್ಷದ ಮಹಿಳೆಗೆ ಸೇರಿ ಮೂವರಲ್ಲಿ ಕೋರೊನಾ ವೈರಸ್ ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟೂ ಸೊಂಕಿತರ ಸಂಖ್ಯೆ 576ಕ್ಕೇರಿದೆ. ಬೆಳಗಾವಿಯಲ್ಲಿ 72ಕ್ಕೆರಿದೆ.
Read More »BREAKING NEWS: ಬೆಳಗಾವಿಯಲ್ಲಿ ಇಂದು ಲೆಕ್ಕಕ್ಕೆ ನಿಲುಕದ ಕೊರೊನಾ ಪಾಸಿಟಿವ್ ಪತ್ತೆ
ಬೆಳಗಾವಿ: ಜಿಲ್ಲೆಯಲ್ಲಿ ಕೊವಿಡ್-19 ಪ್ರಕರಣವು ಕಡಿಮೆ ಆಗುತ್ತಿವೆ ಎಂದು ಜಿಲ್ಲೆಯ ಜನ ನಿಟ್ಟುಸಿರುವ ಬಿಡುವಷ್ಟರಲ್ಲಿ, ಆತಂಕ ಸೃಷ್ಟಿಸುವ ರೀತಿಯಲ್ಲಿ ಇಂದು ಆರೋಗ್ಯ ಇಲಾಖೆ 12 ಘಂಟೆಗೆ ಹೆಲ್ತ್ ಬುಲೇಟಿನ್ ಬಿಡುಗಡೆ ಮಾಡಿದ್ದು, ಅದರಲ್ಲಿ ಜಿಲ್ಲೆಯಲ್ಲಿ ಹದಿನಾಲ್ಕು ಜನರಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಜಿಲ್ಲೆಯಲ್ಲಿನ ಕೊರೋನಾ ಸೊಂಕಿತರ ಸಂಖ್ಯೆ 69ಕ್ಕೆರಿದೆ. ಸೋಂಕಿತರ ವರದಿ ಜಿಲ್ಲೆಯ ಹುಕ್ಕೆರಿ ತಾಲೂಕಿನ ಸಂಕೇಶ್ವರದ 9 ವರ್ಷದ ಬಾಲಕ ಸೇರಿ 75 ವರ್ಷದ ವೃದ್ದೆಯಲ್ಲೂ ಸೋಂಕು ದೃಡಪಟ್ಟಿದೆ. …
Read More »ಮತದಾರರ ಋಣ ತೀರಿಸಲು ಇದೊಂದು ಅಳಿಲು ಸೇವೆ : ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ಅರಭಾಂವಿ ಕ್ಷೇತ್ರದಲ್ಲಿ ವಾಸಿಸುತ್ತಿರುವ ಪ್ರತಿಯೊಂದು ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ನೀಡುವ ಮೂಲಕ ಮಹಾನ್ ದಾನಿಯಾಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸತ್ಕಾರ್ಯ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಸಮಾಜ ಮುಖಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಬಾಲಚಂದ್ರ ಜಾರಕಿಹೊಳಿ ಅವರು ಕ್ಷೇತ್ರದ ಜನರ ಹೃದಯದಲ್ಲಿ ನೆಲೆಸಿರುವ ಹೃದಯವಂತರು ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಬಣ್ಣಿಸಿದರು. ಶನಿವಾರದಂದು ಪಟ್ಟಣದ ಸರ್ವ ಕುಟುಂಬಗಳಿಗೆ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಆಹಾರ ಧಾನ್ಯಗಳ ಕಿಟ್ಟ್ …
Read More »