ಭಾನುವಾರ , ಡಿಸೆಂಬರ್ 22 2024
kn
Breaking News

ಕೆ.ಎಮ್.ಎಫ್ ರಾಜ್ಯಾಧ್ಯಕ್ಷ, ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಜನರಿಗೆ ಅಗತ್ಯ ವಸ್ತುಗಳ ಪೂರೈಕೆ

Spread the love

ಮೂಡಲಗಿ: ವಿಶ್ವವ್ಯಾಪಿ ಜನ ಜೀವನ ಹದಗೆಟ್ಟಿರುವಾಗ ಪೌರ ಕಾರ್ಮಿಕರು, ಆಶಾಕಾರ್ಯಕರ್ತೆಯರ ಸೇವಾಕಾರ್ಯ ಮೆಚ್ಚುವಂತಹದು. ಇಂತಹ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಸಾಮಾಜಿಕ ಅಂತರ ಕಾಯ್ದುಕೊಂಡು ಸೇವೆಯು ಶ್ಲಾಘನೀಯವಾಗಿದೆ ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿದ ಪೌರ ಕಾರ್ಮಿಕರು, ಆಶಾಕಾರ್ಯಕರ್ತೆಯರಿಗೆ ದಿನ ಬಳಕೆ ವಸ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊರೋನಾ ಎಂಬ ಮಹಾಮಾರಿ ವೈರಸ್ ವಿಶ್ವವನ್ನೆ ನಡುಗಿಸಿದೆ. ಸಾಮಾಜಿಕವಾಗಿ ನಗರದಲ್ಲಿ ಯಾವುದೇ ರೋಗಗಳು, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸೇವಾ ಕಾರ್ಯ ಮೆಚ್ಚುಗೆ ಪಡುವದಾಗಿದೆ. ಪೊಲೀಸ್, ಆರೋಗ್ಯ, ಶಿಕ್ಷಣ, ಪೌರಾಡಳಿತ ಇಲಾಖೆಗಳು ಜಂಟಿಯಾಗಿ ಸಮರೋಪಾದಿಯಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಸಾರ್ವಜನಿಕರು ಕರೋನಾ ಹಿಮ್ಮೆಟ್ಟಿಸುವಲ್ಲಿ ಸರ್ಕಾರದ ನಿಯಮಗಳನ್ನು ಎಲ್ಲರೂ ಪಾಲಿಸಬೇಕು ಮತ್ತು ಸಹಕಾರ ನೀಡಬೇಕು ಎಂದು ನುಡಿದರು.

ಸ್ಥಳೀಯ ಶಾಸಕರ ಆಪ್ತ ಕಾರ್ಯದರ್ಶಿ ನಾಗಪ್ಪ ಶೇಖರಗೋಳ ಮಾತನಾಡಿ, ಕ್ಷೇತ್ರದ ಜನತೆಗೆ ತೊಂದರೆಯಾಗಬಾರದು ಎಂದು ಕೆ.ಎಮ್.ಎಫ್ ರಾಜ್ಯಾಧ್ಯಕ್ಷ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಮಾರ್ಗದರ್ಶನದಲ್ಲಿ ಜನರಿಗೆ ಅಗತ್ಯ ವಸ್ತುಗಳು ಆರೋಗ್ಯದ ಕಾಳಜಿವಹಿಸಿದ್ದಾರೆ. ಸಾರ್ವಜನಿಕರು ಸರಕಾರದ ನಿಯಮಾವಳಿಗಳನ್ನು ಪಾಲಿಸಿಬೇಕು. ಸೀತ ಕೆಮ್ಮು ಉಸಿರಾಟ ತೊಂದರೆಯಾದರೆ ಕೊಡಲೆ ಆಸ್ಪತ್ರೆಗೆ ದೌಡಾಹಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿಕೊಳ್ಳ ಬೇಕು ಸಲಹೆ ನೀಡಿದರು.

ಕಾರ್ಯಕ್ರಮವನ್ನು ರಾಜ್ಯ ಸರಕಾರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ದವಸ ದಾನ್ಯ ದಿನಬಳಕೆ ವಸ್ತುಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಆರೋಗ್ಯಾಧಿಕಾರಿ ಡಾ. ಭಾರತಿ ಕೋಣಿ, ಸಿಪಿಐ ವೆಂಕಟೇಶ ಮುರನಾಳ, ಪಿ.ಎಸ್.ಐ ಮಲ್ಲಿಕಾರ್ಜುನ ಸಿಂಧೂರ, ಆರೋಗ್ಯ ನೀರಿಕ್ಷಕ ಚಿದಾನಂದ ಮುಗಳಖೋಡ, ಸರಕಾರಿ ನೌಕರ ಸಂಘದ ಅಧ್ಯಕ್ಷ ಆನಂದ ಹಂಚ್ಯಾಗೋಳ, ಕಾರ್ಯದರ್ಶಿ ಕೆ.ಆರ್ ಅಜ್ಜಪ್ಪನವರ, ಉಪಾಧ್ಯಕ್ಷ ಆರ್.ಬಿ ಕಟಗಾವಲಿ, ರಾಜ್ಯ ಪರಿತ್ತಿನ ಎಮ್ ಆರ್ ಮಹಾಲಿಂಗಪೂರ, ಎ.ಎಮ್ ಮೋಡಿ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಆರ್ ತರಕಾರ, ಎಲ್ ಎಮ್ ಬಡಕಲ್, ಎ.ಪಿ ಪರಸನ್ನವರ, ಎಸ್.ಎಲ್ ಪಾಟೀಲ, ಎಸ್.ಜಿ ಗುಡಗುಡಿ, ಇಸಿಒ ಟಿ ಕರಿಬಸವರಾಜು, ಬಿ.ಎಸ್ ಸತೀಶ, ಕೆ.ಎಲ್ ಮೀಶಿ, ಆರ್.ಟಿ ಸೋನವಾಲಕರ, ಎಸ್.ಬಿ ಜಾಗನೂರ ಹಾಗೂ ಆಶಾಕಾರ್ಯಕರ್ತೆಯರು, ಪೌರಕಾರ್ಮಿಕರು ಹಾಜರಿದ್ದರು.

ವರದಿ:ಕೆ.ವಾಯ್ ಮೀಶಿ


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page