ಬನವಾಸಿ: ಕೇಂದ್ರ ಸರ್ಕಾರ ಎರಡನೇ ಅವಧಿ ಅಧಿಕಾರ ಹಿಡಿದು ಎರಡು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಬನವಾಸಿ ಬಿಜೆಪಿ ರೈತ ಮೋರ್ಚಾದಿಂದ ಭಾನುವಾರ ಸೇವಾ ದಿವಸ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ನಿಮಿತ್ಯ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ವನಮಹೋತ್ಸವ ಹಾಗೂ ಕೊರೊನಾ ವಾರಿಯರ್ಸ್‍ಗೆ ಮಾಸ್ಕ್ ಹ್ಯಾಂಡ್ ಸ್ಯಾನಿಟೈಜರ್ ವಿತರಿಸಲಾಯಿತು.
ಬನವಾಸಿ ಪೊಲೀಸ್ ಠಾಣೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಗ್ರಾಮ ಪಂಚಾಯತ್ ಅಧ್ಯಕ್ಷೆ ತುಳಸಿ ಆರೇರ, ಬಿಜೆಪಿ ಮುಖಂಡ ದ್ಯಾಮಣ್ಣ ದೊಡ್ಮನಿ, ಪಿಎಸ್‍ಐ ಹನುಮಂತ ಬಿರಾದರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಿಜೆಪಿ ಮುಖಂಡ ದ್ಯಾಮಣ್ಣ ದೊಡ್ಮನಿ ಮಾತನಾಡಿ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯುರಪ್ಪನವರು ಜನಪರ ಕಾಳಜಿಯನ್ನು ಇಟ್ಟುಕೊಂಡು ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಕೊರೊನಾದಂತಹ ಸಂದಿಗ್ದ ಪರಿಸ್ಥಿತಿಯಲ್ಲಿಯೂ ಸಹ ದಿಟ್ಟತನದಿಂದ ಆಡಳಿತ ಮಾಡುತ್ತಿರುವ ಇಂತಹ ಮಹಾನ್ ನಾಯಕರನ್ನು ಹೊಂದಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಪ್ರೇಮ್‍ಕುಮಾರ್ ಮಾತನಾಡಿ, ಮೋದಿಜೀಯವರು ಎರಡನೇ ಅವಧಿಯ ಅಧಿಕಾರ ಹಿಡಿದು ಎರಡು ವರ್ಷ ತುಂಬಿರುವ ಹಿನ್ನಲೆಯಲ್ಲಿ ಕಾರ್ಯಕರ್ತರಲ್ಲಿ ಸಂಭ್ರಮದ ವಾತವಾರಣ ಸೃಷ್ಠಿಯಾಗಿದೆ. ಆದರೆ ಇದು ಸಂಭ್ರಮಾಚರಣೆಯ ಸಮಯವಲ್ಲ, ಆ ಕಾರಣದಿಂದ ನಾವೆಲ್ಲರೂ ಸೇರಿ ಕೊರೋನಾ ವಾರಿಯರ್ಸ್‍ಗಳಿಗೆ ಮಾಸ್ಕ್, ಸ್ಯಾನಿಟೈಜರ್ ನೀಡುತ್ತಿದ್ದೆವೆ. ಜೊತೆಗೆ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ತಾಲೂಕಿನ ಬನವಾಸಿ, ಭಾಶಿ, ಗುಡ್ನಾಪೂರ, ಹಲಗದ್ದೆ, ಸುಗಾವಿ ಗ್ರಾಮ ಪಂಚಾಯಿತಿಗಳಲ್ಲಿ ಗಿಡಗಳನ್ನು ನೆಟ್ಟು ವನಮಹೋತ್ಸವ ಆಚರಿಸುತ್ತಿದ್ದೆವೆ ಎಂದರು.
ಈ ಸಂದರ್ಭದಲ್ಲಿ ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಪ್ರೇಮ್‍ಕುಮಾರ್, ಯುವ ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಸನ್ನ ಸೋನಪೂರ, ಮಹಾಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಶಿವಕುಮಾರ ಗೌಡ, ಬನವಾಸಿ ಶಕ್ತಿ ಕೇಂದ್ರದ ಅಧ್ಯಕ್ಷ ಸಿದ್ದು ನೇರಗಲ್, ಭಾಶಿ ಗ್ರಾಪಂ ಅಧ್ಯಕ್ಷೆ ದಾಕ್ಷಯಿಣಿ ನಾಯ್ಕ್, ಗುಡ್ನಾಪೂರ ಗ್ರಾಪಂ ಅಧ್ಯಕ್ಷ ಶಿವಶಂಕರ ಗೌಡ, ಗಣಪತಿ ನಾಯ್ಕ್, ದತ್ತು ಭಟ್ಟ, ಜಯಶಂಕರ ಮೇಸ್ತ್ರಿ, ಸಿದ್ದು ಲಕ್ಕೋಳ್ಳಿ, ಭೋಜಪ್ಪ ನಾಯ್ಕ್ ಹಾಗೂ ಬಿಜೆಪಿಯ ಪ್ರಮುಖರು ಇದ್ದರು.
Check Also
ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ
Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …