ಮೂಡಲಗಿ : 2021_22ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಹಳ್ಳಿಯ ಮಕ್ಕಳು ಸಿಟಿ ಮಕ್ಕಳನ್ನು ಮೀರಿ ಸಾಧನೆ ಮಾಡಿದ್ಧು ತುಂಬಾ ಸಂತೋಷ ಎಂದು ಪ್ರಾಚಾರ್ಯರಾದ ಎಸ್ ಎಮ್ ಕಮಲಾಪೂರ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.
ವಾಣಿಜ್ಯ ವಿಭಾಗದಲ್ಲಿ ಕುಮಾರಿ ಪೂರ್ಣಿಮಾ ಅಂಗಡಿ ಅವಳು 600ಕ್ಕೆ 586 ಅಂಕ ಪಡೆದು ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿಗೆ ಪ್ರಥಮ ಸ್ಥಾನ ಬಂದರೆ ಕಲಾ ವಿಭಾಗದಲ್ಲಿ ಕುಮಾರಿ ಸವಿತಾ ಬ ಕೌಜಲಗಿ 600 ಕ್ಕೆ 579 ಅಂಕ ಪಡೆದು ಶೈಕ್ಷಣಿಕ ಜಿಲ್ಲೆಗೆ ತೃತೀಯ ಸ್ಥಾನ ಬಂದು ಇಬ್ಬರು ವಿದ್ಯಾರ್ಥಿಗಳು ಕಾಲೇಜಿನ ಕೀರ್ತಿಯನ್ನು ಜಿಲ್ಲೆಯಾದ್ಯಂತ ಬೆಳಗಿಸಿದ್ದಕ್ಕೆ ವಿದ್ಯಾರ್ಥಿಗಳನ್ನು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ಭಂಡಾರಯವರು, ಎಲ್ಲಾ ಉಪನ್ಯಾಸಕರು, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು, ಗ್ರಾಮದ ಶಿಕ್ಷಣ ಪ್ರೇಮಿಗಳು ಕೂಡಾ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
Sarvavani Latest Kannada News