ಮೂಡಲಗಿ: ಜಗತ್ತಿನಾದ್ಯಂತ ಕೊರೋನಾ ಮಾಹಾಮಾರಿ 2ವರ್ಷಗಳಿಂದ ಅತೀವವಾಗಿ ಕಾಡುತ್ತಿದೆ. ಇದರಿಂದಾಗಿ ತತ್ತರಗೊಂಡ ಸರ್ಕಾರಗಳು ಎಚ್ಚೆತ್ತು, ಲಸಿಕೆ ಕಂಡು ಹಿಡಿದು ಕೊವ್ಯಾಕ್ಸಿನ್ ಮತ್ತು ಕೋವಿಶಿಲ್ಡ್ ಜನರ ಮುಂದೆ ಇಟ್ಟಿದೆ. ಸರ್ಕಾರ ಕೊರೋನಾ ಹೆಚ್ಚಳ ವೇಳೆ ಎರಡನೆ ಡೋಸ್ ಪಡೆಯುವಂತೆ ಜನತೆಗೆ ಸಾಕಷ್ಟು ಮನವಿ ಮಾಡಿಕೊಳ್ಳುತ್ತಿದೆ. ಮೊದಲು ಮತ್ತು ಎರಡನೇಯ ಡೋಸ್ ಜನಸಾಮಾನ್ಯರಿಗೆ ಬೇಗನೆ ನೀಡುವಂತೆ ಸಂಬಂದ ಪಟ್ಟ ಇಲಾಖೆಗಳು, ಸ್ಥಳಿಯ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಒತ್ತಡ ಹಾಕುತ್ತಿರುವುದು ಸರ್ವೆ ಸಾಮಾನ್ಯವಾಗಿದೆ.
ಆದರೆ ಮೂಡಲಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮೇಲಾಧಿಕಾರಿಗಳ ಒತ್ತಡ ತಾಳಲಾರದೊ ಅಥವಾ ವ್ಯಾಕ್ಸಿನ್ ಮಾರಾಟ ಮಾಡುವುದಕ್ಕೊ, ಎರಡನೇಯ ಡೊಸ್ ಪಡಿಯದೆ ಇರುವ ಮುಗ್ದ ಮತ್ತು ಅವಿದ್ಯಾವಂತರ ಹೆಸರನ್ನ ಬಳಸಿಕೊಂಡು ಎರಡನೆ ಡೋಸ್ ನೀಡಿರುವುದಾಗಿ ಸರ್ಕಾರಕ್ಕೆ ಲೆಕ್ಕ ತೋರಿಸುತ್ತಿರುವದು ಸಾಮಾನ್ಯ ಜನರಿಗೆ ಮತ್ತು ಸರ್ಕಾರಕ್ಕೆ ಮಾಡುವ ಅತಿದೊಡ್ಡ ಮೋಸವಾಗಿದೆ.
ಸರ್ಕಾರಗಳು ಕೊರೋನಾ ಲಸಿಕೆ ನೀಡುತ್ತಿರುವುದು ಜನಸಾಮಾನ್ಯರು ಆರೋಗ್ಯದಿಂದಿರಲು. ಅದೇ ಸರ್ಕಾರಿ ಆಸ್ಪತ್ರೆಯ ಅಧಿಕಾರಿಗಳು ನಾವು ಪಟ್ಟಣದ ವಾಸಿಗಳಿಗೆ ಎರಡೂ ಡೊಸ್ ನೀಡಿದ್ದೆವೆ ಅಂತ ಸರ್ಕಾರಕ್ಕೆ ಸುಳ್ಳು ವರದಿ ನೀಡಿತ್ತಿರುವುದು ಯಾಕೆ? ಇದರ ಹಿಂದಿನ ಮತ್ತು ಒಳ ಮರ್ಮವೇನು ಎಂಬುದು ಮೇಲಾಧಿಕರಿಗಳ ತನಿಖೆಯಿಂದ ತಿಳಿಯಬೇಕಾಗಿದೆ.
ಪಟ್ಟಣದ ನಿವಾಸಿ ವಿಲ್ಸನ ಚ. ಸಣ್ಣಕ್ಕಿ ಎಂಬುವ ವ್ಯಕ್ತಿ ಮತ್ತು ಕುಟುಂಬ ಸದಸ್ಯರು ಏಳು ಜನ ಸೇರಿ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಮೊದಲನೆ ಡೊಸ್ ಪಡೆದಿದ್ದು, ಎರಡನೆಯ ಡೊಸ್ ಇವತ್ತಿನವರೆಗೂ ಪಡೆದಿಲ್ಲ. ಜನವರಿ ಒಂದರಂದು ಹೊಸ ವರ್ಷಾಚರಣೆಯ ಸಂದರ್ಬದಲ್ಲಿ ವಿಲ್ಸನ್ ಎಂಬುವರ ಮೊಬೈಲ್ಗೆ ಮೆಸೇಜ್ ಬಂದಿದೆ. ಅದನ್ನ ತೆಗೆದು ನೋಡುವಷ್ಟರಲ್ಲಿ ಅವರಿಗೆ ಶಾಕ್ ಕಾದಿದ್ದು, ಕುಟುಂಬದ ಏಳು ಜನರು ಎರಡನೆ ಡೊಸ್ ಪಡೆದಿರುವ ಮೆಸೇಜ್ ದೊಂದಿಗೆ, ಸರ್ಟಿಫಿಕೇಟ್ ಕೂಡ ನೊಡಿದ್ದಾರೆ. ಇದರ ಅರ್ಥ ಏನು ಅಂತ ಇದಕ್ಕೆ ಸಂಬಂದ ಪಟ್ಟ ಹಿರಿಯ ಅಧಿಕಾರಿಗಳು ಜಿಲ್ಲಾಡಳಿತ ಉತ್ತರಿಸುವುದು ಸೂಕ್ತ.
ಪಟ್ಟಣದಲ್ಲಿ ಸಾಕಷ್ಟು ಅವಿಧ್ಯಾವಂತರು, ವಯಸ್ಕರು ಆಂಗ್ಲ ಭಾಷೆ ಬಾರದೇ ಇರುವವರು ಸಾಕಷ್ಟು ಜನ ಇದ್ದಾರೆ. ಇಂತಹ ಮುಗ್ದ ಜನರಿಗೆ ವಾಕ್ಸಿನ ನೀಡದೆ, ಎರಡನೇಯ ಡೋಸ್ ನೀಡಿದ್ದೆವೆ ಅನ್ನೋ ಆಸ್ಪತ್ರೆಯ ವರದಿ ಕೇಳಿದರೆ ಭಯ ಹುಟ್ಟುವಂತ್ತಿದೆ. ಇಂತಹ ಅವಿಧ್ಯಾವಂತರು ವ್ಯಾಕ್ಸಿನಿಂದ ವಂಚಿತರಾಗುತ್ತಿರುವುದು, ದುರ್ದೈವದ ಸಂಗತಿ. ಸರ್ಕಾರ ಕೊರೋನಾದಿಂದ ಜನರನ್ನ ರಕ್ಷಿಸುವ ಉದ್ದೇಶ ವಿಫಲ ಪ್ರಯತ್ನವಾಗುತ್ತಿದೆ. ಕೂಡಲೆ ತಾಲೂಕಾಡಳಿತ, ಜಿಲ್ಲಾಡಳಿತ, ಆರೋಗ್ಯ ಇಲಾಖೆ ಎಚ್ಚೆತ್ತು, ಇದೇ ತರಹ ಆಸ್ಪತ್ರೆಯ ಅಧಿಕಾರಿಗಳು ಎಷ್ಟು ಸುಳ್ಳು ಮಾಹಿತಿ ನೀಡಿದ್ದಾರೆ ಅನ್ನೋ ಸಂಪೂರ್ಣ ಮಾಹಿತಿ ಪಡೆದು. ಈ ವ್ಯಾಕ್ಸಿನ ಹಗರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಅನ್ನುವದು ಸರ್ವಜನಿಕರ ಒತ್ತಾಯವಾಗಿದೆ. ಇದೇ ತರಹ ಎಷ್ಟು ಜನರಿಗೆ ಎರಡನೇಯ ಡೋಸ್ ವಂಚನೆಯಾಗಿದೆ ಅನ್ನೊದನ್ನ ಪತ್ತೆ ಹಚ್ಚಿ, ಅಂತಹ ಸಂತ್ರಸ್ತರ ಸರಿಯಾದ ಮಾಹಿತಿ ಪಡೆದು, ಅವರಿಗೆ ಲಸಿಕೆ ನೀಡಬೇಕಾದ ಅನಿವಾರ್ಯತೆ ಒದಗಿ ಬಂದಿದೆ.