ಹಳ್ಳೂರ: ನವೆಂಬರ 26 ಭಾರತ ದೇಶಕ್ಕೆ ಮಹತ್ವದ ದಿನ ಗೌರವ ಕೋಡುವ ದಿನವಾಗಿದೆ. ಈ ದಿವಸ ಯಾರು ಮರೆಯಲು ಸಾಧ್ಯವಿಲ್ಲ, ಭಾರತದ ಸಂವಿಧಾನ ಜಗತ್ತಿನ ಅತಿದೊಡ್ಡ ಸಂವಿಧಾನ, 1949 ರ ನವೆಂಬರ 26 ರಂದು ಸಂವಿಧಾನವನ್ನು ಅಂಗೀಕರಿಸಲಾಯಿತ್ತು. ಇದರ ಅಂಗವಾಗಿ ನಾವು ಸಂವಿಧಾನ ದಿನವನ್ನು ಆಚರಿಸುತ್ತಿದ್ದೇವೆ ಎಂದು ಪ.ಜಾತಿ,ಪ.ಪಂಗಡಗಳ ಬಲವರ್ಧನ ಮತ್ತು ಮೇಲ್ವಿಚಾರಣಾ ಸಮಿತಿಯ ಜಿಲ್ಲಾಧ್ಯಕ್ಷ ಮಾರುತಿ ನಾ. ಮಾವರಕರ ಹೇಳಿದರು.
ಸ್ಥಳೀಯ ಪ.ಜಾತಿ,ಪ.ಪಂಗಡಗಳ ಬಲವರ್ಧನ ಮತ್ತು ಮೇಲ್ವಿಚಾರಣಾ ಸಮಿತಿಯ ಕಾರ್ಯಾಲಯದ ಆವರಣದಲ್ಲಿ ನಡೆದ ಸಂವಿಧಾನ ಸಮರ್ಪಣಾ ದಿವಸ ಅಂಗವಾಗಿ ಮಾತನಾಡಿದ ಅವರು ಭಾರತ ಸಂವಿಧಾನ ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆ ಒದಗಿಸಿದೆ. ಮೂಲಭೂತ ಹಕ್ಕುಗಳನ್ನು ನೀಡಿದೆ. ಕರ್ತವ್ಯಗಳನ್ನು ನೀಡಿದೆ. ಭಾರತಕ್ಕೆ ಸಂವಿಧಾನವೇ ಬಹುದೊಡ್ಡ ಬಲ. ನಮ್ಮ ಸಂವಿಧಾನ ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನು ಎಂದರು.
ನ್ಯಾಯವಾದಿ, ಸಮಿತಿಯ ತಾಲೂಕಾಧ್ಯಕ್ಷ ರಾಜು ಐಹೋಳೆ ಮಾತನಾಡಿ ನಮ್ಮ ದೇಶದಲ್ಲಿ ಹೊಸ ಶಕೆ ಆರಂಭವಾಗಿದ್ದು ಸಂವಿಧಾನ ಜಾರಿಗೆ ಬಂದಾಗಿನಿಂದಲೇ. ಸಂವಿಧಾನದ ಮಹತ್ವದ ಬಗ್ಗೆ ಎಲ್ಲರಿಗೂ ಅತ್ಯವಶ್ಯಕ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಜತೆಗೆ ಅವರ ಸಾಧನೆಯ ಜಾಗೃತಿ ಮೂಡಿಸುವುದು ಈ ದಿನದ ವಿಶೇಷತೆ ಎಂದರು.
ಹೆಣು ಮಕ್ಕಳಿಗೆ ಶಿಕ್ಷಣ ಮತದಾನದ ಹಕ್ಕು ಆಸ್ತಿ ಹಕ್ಕು ಇವರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲಿಸುವ ಮೂಲಕ ಜೀವನ ಕೊಟ್ಟವರು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಎಂದರು.
ನ್ಯಾಯವಾದಿ ಸುರೇಶ ಸಣ್ಣಕ್ಕಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಸಂವಿಧಾನ ದಿನಾಚರಣೆ ಹಿನ್ನೆಲೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೆಲವೊಂದು ಸ್ಪೂರ್ತಿದಾಯಕ ಸಂದೇಶಗಳು ನಮ್ಮೆಲ್ಲರಿಗೆ ಆದರ್ಶವಾಗಿದೆ. ಒಗ್ಗಟ್ಟಾದರೆ ನಾವು ಏನಾದರೂ ಸಾಧಿಸಲು ಸಾಧ್ಯ ಈ ನಿಟ್ಟಿನಲ್ಲಿ ಒಗ್ಗಟ್ಟಾದರೆ ನಾವು ಸದಾ ಎದ್ದು ನಿಲ್ಲುತ್ತೇವೆ ವಿಭಜನೆಗೊಂಡರೆ ಕುಸಿದು ಬೀಳುತ್ತೇವೆ ಅಂತಾ ಸಂದೇಶ ನೀಡಿದರು ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕ ದೇವೆಂದ್ರ ಹೋಟಕರ, ಸಂತೋಷ ಕಾಂಬಳೆ, ಮುಖಂಡ ಸಂಗಪ್ಪ ನಾಯ್ಕ್, ನಾನಪ್ಪ ಮಾವರಕರ, ಪ್ರವೀಣ ಸೇರಿದಂತೆ ಸಮಿತಿಯ ಸಂಘಟಿಕರು, ಕಾರ್ಯಕರ್ತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ವರದಿ:- ಪ್ರವೀಣ ಮಾ ಮಾವರಕರ