ಮೂಡಲಗಿ: ಪಟ್ಟಣದ ಅಪ್ರಾಪ್ತ ಬಾಲಕಿಯ ಜೋತೆ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ, ಸ್ಥಳಿಯ ಶ್ರೀಕಾಂತ ಎಂಬಾತ ಬಾಲಕಿಯ ಜೊತೆ ವಿಡಿಯೋ, ಪೋಟೋಗಳನ್ನ ತನ್ನ ಮೊಬೈಲ್ ನಲ್ಲಿ ಸೇರೆಹಿಡಿಯುತ್ತ, ಬಾಲಕೀಯ ತಾಯಿ ಕೂಲಿ ಕೆಲಸಕ್ಕೆಂದು ಹೋದಾಗ, ಮನೆಗೆ ಬಂದು ಮದುವೆ ಆಗುವುದಾಗಿ ಹೇಳಿ, ಬಾಲಕಿಯನ್ನು ಸಂಬೊಗಕ್ಕೆ ಕರೆಯುತ್ತಿದ್ದ.

ಬಾಲಕಿ ಸಂಬೋಗಕ್ಕೆ ಒಪ್ಪದೆ ಇದ್ದಾಗ, ತಾವಿಬ್ಬರು ತೆಗೆಸಿಕೊಂಡಿರುವ ಪೋಟೋಗಳನ್ನು ಎಲ್ಲರಿಗೂ ಹರಿಬಿಟ್ಟು ನಿನ್ನ ಹೇಸರು ಕೆಡಿಸುತ್ತೆನೆಂದು ಬೆದರಿಸಿ, ಬಲವಂತವಾಗಿ ಬಾಲಕಿಯ ಜೊತೆ ಸಂಬೋಗ ನಡೆಸಿರುವುದು ಬಾಲಕಿ ಠಾಣೆಯಲ್ಲಿ ಹೇಳಿಕೆ ನೀಡಿದ್ದಾಳೆ. ಬಾಲಕಿಯ ಜೊತೆ ಸಂಬೋಗ ಮಾಡುವುದನ್ನು ತನ್ನ ಪೋನಿನಲ್ಲಿ ಸೆರೆಹಿಡಿದ ಯುವಕ, ಮತ್ತೆ ಮೂರು ಬಾರಿ ಬಾಲಕಿಯ ಮೇಲೆ ಅತ್ಯಾಚಾರವ್ಯಸಗಿದ್ದಾನೆ.
ಕಳೆದ ನಾಲ್ಕು ದಿನಗಳ ಹಿಂದೆ ಆರೋಪಿ ಶ್ರೀಕಾಂತ ಬಾಲಕಿಯನ್ನ ಮದುವೆ ಮಾಡಿಕೊಳ್ಳಲು ಕರೆದಾಗ, ಅವಳು ನಿರಾಕದ್ದಾಳೆ. ಕೋಪಗೊಂಡ ಆರೋಪಿ ಅವಳನ್ನ ಬಡಿದು, ಜೀವಬೆದರಿಕೆ ಹಾಕಿದ್ದಾನೆ.
ಈ ವಿಷಯ ತಿಳಿದ ಬಾಲಕಿಯ ಪೋಷಕರು ಹಾಗೂ ಬಾಲಕಿ ಮೂಡಲಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಅಪ್ರಾಪ್ತ ಬಾಲಕಿಯನ್ನು ಎರಡು ವರ್ಷಗಳಿಂದ ಪ್ರೀತಿಸಿ, ಮದುವೆ ಆಗುವುದಾಗಿ ನಂಬಿಸಿ ಬಾಲಕಿಯ ಜೊತೆ ನಡೆಸಿದ ಸಂಬೋಗ ವಿಡಿಯೋಗಳನ್ನ ವಾಟ್ಸಪ್ ಗ್ರುಪ್ ಗಳಲ್ಲಿ ಹರಿಬಿಟ್ಟ ಆರೋಪಿ ಈಗ ಜೈಲು ಸೇರಿದ್ದಾನೆ.
Sarvavani Latest Kannada News