ಹಳ್ಳೂರ: ಕೊರೋನಾ ಮಾಹಾಮಾರಿ ಜಗತ್ತಿಗೆ ನರಕಯಾತನೆ ತೋರಿಸುತ್ತಿದೆ. ಇಂತಹ ಸಂದರ್ಬದಲ್ಲಿ ಶಿವಾಪೂರ (ಹ) ಗ್ರಾಮದ 3 ಜನ ಹೆಣ್ಣು ಮಕ್ಕಳು ಇರುವ ಒಂದು ಕುಟುಂಬ, ಆ ಕುಟುಂಬದಲ್ಲಿ ಅಂದಾಜು ಎಪ್ಪತ್ತು ವರ್ಷ ವಯೋ ವೃದ್ದೆ, ಅಂದಾಜು 50 ವರ್ಷದ ಮಹಿಳೆ, ಮತ್ತು 13 ವರ್ಷದ ಮೊಮ್ಮಗಳು ಸೇರಿ ಒಂದು ಕುಟುಂಬ ವಾಸವಾಗಿತ್ತು.
ವಯೋವೃದ್ದೆ ಅಜ್ಜಿ 4 ವರ್ಷಗಳಿಂದ ಹಾಸಿಗೆಯಲ್ಲಿಯೇ ದಿನಗಳನ್ನ ಕಳೆಯುತ್ತಿದ್ದಳು. ಪ್ರಪಂಚದ ಜ್ಞಾನವೇ ಇಲ್ಲ ಹಾಗೂ ಆರೋಗ್ಯಕ್ಕೆ ಯಾವುದೇ ತೊಂದರೆ ಇಲ್ಲ. ಕೇವಲ ಜೀವ ಮಾತ್ರ ಇದೆ. ಕರೋನಾ 2 ನೇ ಅಲೆಯಿಂದ ಅಜ್ಜಿಯ ಕುಟುಂಬದ 50 ವರ್ಷದ ಮಹಿಳೆ, ಮತ್ತು 13 ವರ್ಷದ ಮೊಮ್ಮಗಳಿಗೆ ಕೋವಿಡ್ ಸೊಂಕು ತಗುಲಿ ಮನೇಲಿ ಇಬ್ಬರು ಉಸಿರು ನಿಲ್ಲಿಸಿದರು. ಆ ಅನಾಥ ಶವಗಳನ್ನ ಸ್ಥಳೀಯ ಆಡಳಿತ ಮಂಡಳಿಯ ಗ್ರಾಮ ಪಂಚಾಯತ ಸದಸ್ಯರು, ಗ್ರಾಪಂ ಅಧ್ಯಕ್ಷ ಬಸವರಾಜ ಸಾಯನ್ನವರ, ಪಿಡಿಒ ಶ್ರೀಶೈಲ ತಡಸನ್ನವರ, (ಟಾಸ್ಕ್ ಪೋರ್ಸ ಕಮೀಟಿ) ಸೇರಿದಂತೆ ಎಲ್ಲರೂ ಜೋತೆಗೂಡಿ ಮೂಡಲಗಿಯ ಅಂಜುಮನ್ ಕಮೀಟಿ ಸದಸ್ಯರ ಸಹಾಯದಿಂದ ಮೃತರ ಅಂತ್ಯ ಕ್ರೀಯೆ ನಡೆಸಿದರು. ಸಂಬಂಧಿಕರು ಯಾರು ಕೂಡಾ ಇತ್ತ ಕಡೆ ಕಣ್ಣೆತ್ತು ನೋಡಲ್ಲಿಲ್ಲ. ಈ ದುರ್ದೈವಿಯ ಮನೆಯವರ ಕಡೆ ಮುಖ ಮಾಡಿಲಿಲ್ಲ.
ಅನಾರೋಗ್ಯದಿಂದ ಬಳಲುತ್ತಿದ್ದ ಎಪ್ಪತ್ತು ವರ್ಷದ ವಯೋ ವೃದ್ದೆಯು ಗುರುವಾರ ರಾತ್ರಿ 12 ಘಂಟೆಗೆ ಮೂಡಲಗಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲ ಮಾಡಿದರು. ವರದಿಯಲ್ಲಿ ಕೋವಿಡ್ ಪೋಜಿಟಿವ್ ಬಂದಿತ್ತು. ಸ್ಥಳೀಯ ವೈದ್ಯರು ರೋಗಿಯ ಆರೈಕೆಯಲ್ಲಿ ತೋಡಗಿದ್ದಾರೆ. ಹೀಗಾಗಿ ಕೋವಿಡ್ ಹಿನ್ನಲೆಯಲ್ಲಿ ಒಂದು ಮನೆಯೇ ಅಸುನಿಗುತ್ತಿದೆ.
ವರದಿ:- ಪ್ರವೀಣ ಮಾ. ಮಾವರಕರ
Sarvavani Latest Kannada News