ಶುಕ್ರವಾರ , ನವೆಂಬರ್ 22 2024
kn
Breaking News

ದೇಶದ ಸಮಗ್ರತೆ ಹಾಗೂ ಭಾರತವನ್ನು ಜಗತ್ತಿನಲ್ಲಿಯೇ ಶಾಲಿ ರಾಷ್ಟ್ರವನ್ನಾಗಿಸಲು ಬಿಜೆಪಿ ಬೆಂಬಲಿಸಿ : ಪ್ರಲ್ಹಾದ ಜೋಶಿ

Spread the love

ಮೂಡಲಗಿ: ದೇಶದ ಸಮಗ್ರತೆ ಹಾಗೂ ಭಾರತವನ್ನು ಜಗತ್ತಿನಲ್ಲಿಯೇ ಶಕ್ತಿ ಶಾಲಿ ರಾಷ್ಟ್ರವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕಾರ್ಯೊನ್ಮೂಕರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಸುಸಂಸ್ಕøತ ಮನೆತನದ ಹಾಗೂ ಗೋಕಾಕ ನಾಡಿನ ಮನೆ ಮಗಳಾದ ಮಂಗಳಾ ಸುರೇಶ ಅಂಗಡಿ ಅವರನ್ನು ಲೋಕಸಭೆಗೆ ಆಯ್ಕೆಮಾಡಿ ಕಳುಹಿಸುವಂತೆ ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಮನವಿ ಮಾಡಿಕೊಂಡರು.
ಇಲ್ಲಿಯ ಬಸವ ಮಂಟಪದಲ್ಲಿ ಸೋಮವಾರ ಸಂಜೆ ಜರುಗಿದ ಬೆಳಗಾವಿ ಲೋಕಸಭಾ ಉಪಚುನಾವಣೆ ಪ್ರಚಾರಾರ್ಥವಾಗಿ ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ ಅಂಗಡಿ ಅವರ ಪರ ಮತಯಾಚಿಸಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದಿ.ಸುರೇಶ ಅಂಗಡಿ ಅವರು ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದರು, ಕೋವಿಡ್-19 ಕ್ಕೆ ತುತ್ತಾಗಿ ಆಕಾಲಿಕ ನಿಧನ ಹೊಂದಿದ್ದರಿಂದ ಈ ಉಪಚುನಾವಣೆಯಲ್ಲಿ ಅಂಗಡಿ ಅವರ ಧರ್ಮ ಪತ್ನಿಯನ್ನು ಕನಕ್ಕಿಳಿಸಿದ್ದೇವೆ ಎಂದು ಹೇಳಿದರು.
ಕೇಂದ್ರ ರೈಲ್ವೆ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದರು, ಕರ್ನಾಟಕಕ್ಕೆ ತನ್ನದೇಯಾದ ಕೊಡುಗೆಯನ್ನು ನೀಡಿದ್ದರು, ರೈಲ್ವೆ ಇಲಾಖೆಗೆ ಸಾಕಷ್ಟು ಹೊಸ ಹೊಸ ಯೋಜನೆಗಳನ್ನು ಪ್ರಕಟಿಸಿ ಜನಾನುರಾಗಿಯಾಗಿದ್ದರು, ಕಾರ್ಯಕರ್ತರಿಗೆ ಬಹಳ ಹತ್ತಿರದಿಂದ ಇದ್ದೂಕೊಂಡು ಅವರ ಸಮಸ್ಯೆಗಳನ್ನು ಆಲಿಸಿಕೊಂಡು ಪರಿಹರಿಸುವ ಉತ್ತಮ ಜನಪ್ರತಿನಿಧಿಯಾಗಿದ್ದರು, ಕಳೆದ ಬಾರಿಗಿಂತ ಈ ಚುನಾವಣೆಯಲ್ಲಿ ದಾಖಲೆಯ ಮತಗಳ ಅಂತರದಿಂದ ಗೆಲ್ಲಿಸಿ ಕೊಡುವಂತೆ ಮನವಿ ಮಾಡಿದರು.
130 ವರ್ಷಗಳ ಇತಿಹಾಸವನ್ನು ಹೊಂದಿರುವ ಕಾಂಗ್ರೇಸ್ ಪಕ್ಷಕ್ಕೆ ಈ ದೇಶದಲ್ಲಿ ನೆಲೆ ಇಲ್ಲ, ಪಂಚರಾಜ್ಯಗಳ ಚುನಾವನೆಯಲ್ಲಿಯೂ ನಮ್ಮದೆ ಪಕ್ಷ ಆಡಳಿತ ನಡೆಸಲಿದೆ, ರಾಜಸ್ಥಾನ, ಪಂಜಾಬ ಸೇರದಂತೆ ಮೂರು ನಾಲ್ಕು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದೆ ಉಳಿದ ಎಲ್ಲ ದೇಶದ ಮೂಲೆ ಮೂಲೆಗಳಲ್ಲೂ ಬಿಜೆಪಿ ಅಧಿಕಾರಿ ಚುಕ್ಕಾಣಿ ಹಿಡಿದಿದೆ, ಈಗಿರುವುದು ನಕಲಿ ಕಾಂಗ್ರೇಸ್ ಪಕ್ಷ, ಹಾಗೂ ನಕಲಿ ಗಾಂಧಿಗಳು ಎಂದು ಪಕ್ಷದ ವಿರುದ್ದ ಕಿಡಿಕಾರಿದರು.
ಮಾಜಿ ಮುಖ್ಯ ಮಂತ್ರಿ ಹಾಗೂ ಕೈಗಾರಿಕ ಸಚಿವ ಜಗದೀಶ ಶೇಟ್ಟರ ಮಾತನಾಡಿ, ದಿ.ಸುರೇಶ ಅಂಗಡಿ ಅವರ ಪ್ರಗತಿ ಪರ ಯೋಜನೆಗಳನ್ನು ವಿವರಿಸಿದರು. ಮಂಗಳಾ ಅಂಗಡಿ ಅವರಿಗೆ ಮತ ಚಲಾಯಿಸಿ ಅವರನ್ನು ಗೆಲ್ಲಿಸುವ ಮೂಲಕ ಸುರೇಶ ಅಂಗಡಿ ಅವರ ಆತ್ಮಕ್ಕೆ ಚೀರಶಾಂತಿ ಸಿಗುತ್ತದೆ. ಆದ್ದರಿಂದ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಗಳನ್ನು ಜನರ ಮನೆ ಬಾಗಿಲಿಗೆ ತಲ್ಲುಪಿಸುವ ಕೆಲಸ ಮಾಡಬೇಕು, ಕಾಂಗ್ರೇಸ್ ಪಕ್ಷ ಲೋಕಸಭೆಯಲ್ಲಿ ಅತ್ಯಲ್ಪ ಸ್ಥಾನಹೊಂದಿದ್ದು, ರಾಜ್ಯದಿಂದ 28ರ ಪೈಕಿ ಕೇವಲ ಒಬ್ಬರೆ ಒಬ್ಬರು ಸಂಸದರಾಗಿ ಆಯ್ಕೆಯಾಗಿದ್ದಾರೆ ಇದರಿಂದ ಪಕ್ಷ ನಿರ್ಣಾಮವಾಗಿದೆ, ದುರ್ಭಿನಿ ಹಿಡಿದುಕೊಂಡು ಪಕ್ಷವನ್ನು ಹುಡುಕುವ ಪರಸ್ಥಿತಿ ನಿರ್ಮಾಣವಾಗಿದೆ, ಕಾಂಗ್ರೇಸ್ ಬಿಗ್ ಜೀರೊಯಾಗಿದೆ ಎಂದು ಲೇವಡಿ ಮಾಡಿದರು. ಸಿದ್ದು-ಡಿಕೆಸಿ ಜಟಾಪಟಿಯು ಮುಂದುವರೆದಿದ್ದು, ಮುಖ್ಯ ಮಂತ್ರಿಯ ಸ್ಥಾನಕ್ಕಾಗಿ ಇವರಿಬ್ಬರೂ ಹಗಲುಗನಸು ಕಾಣುತ್ತಿದ್ದಾರೆ, ರಾಜ್ಯದಲ್ಲಿ ಇನ್ನೂ ಮುಂದೆ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರುವದಿಲ್ಲವೆಂದು ಭವಿಷ್ಯ ನುಡಿದರು.
ನಗರಾಭಿವೃದ್ದಿ ಸಚಿವ ಬಿ.ಎ ಬಸವರಾಜ ಮತ್ತು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಮಾತನಾಡಿ, ಏಪ್ರೀಲ್ 17 ರಂದು ನಡೆಯುವ ಈ ಉಪಚುನಾವಣೆಯಲ್ಲಿ ಅಂಗಡಿಯವರಿಗೆ ತಮ್ಮ ಅಮೂಲ್ಯ ಮತ ನೀಡಿ ಅವರನ್ನು ಗೆಲ್ಲಿಸಿಕೊಡಬೇಕು. ಪಕ್ಷದಲ್ಲಿ ಸಾಕಷ್ಟು ಮುಖಂಡರುಗಳು ಟಿಕೇಟ್‍ಗಾಗಿ ಪ್ರಯತ್ನಿಸಿದರು ಕೇಂದ್ರದ ನಾಯಕರು ದಿ. ಅಂಗಡಿಯವರ ಕುಟುಂಭಕ್ಕೆ ಟಿಕೇಟು ನೀಡಿದ್ದಾರೆ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ಅಂಗಡಿ ಕುಟುಂಭದವರಿಗೆ ಬೆಂಬಲ ನೀಡುತ್ತಿದ್ದಾರೆ. ಬೆಳಗಾವಿ ಲೋಕಸಭಾ ವ್ಯಾಪ್ತಿಯಲ್ಲಿ ಎಲ್ಲ ಕಡೆಗಳಲ್ಲೂ ಮಂಗಳಾ ಅಂಗಡಿಯವರಿಗೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಹೀಗಾಗಿ ಮಂಗಳಾ ಅವರು ಲೋಕಸಭೆಗೆ ಪ್ರವೇಶಿಸುವದು ನಿಶ್ಚಿತವೆಂದು ಹೇಳಿದರು.
ಅಭ್ಯರ್ಥಿ ಮಂಗಳಾ ಅಂಗಡಿ ಮತಯಾಚಿಸಿದರು.
ರಾಜ್ಯ ಸಭಾ ಸದಸ್ಯ ಈರಪ್ಪ ಕಡಾಡಿ, ಚಿಕ್ಕೋಡಿ ಸಂಸದ ಅಣ್ಣಾಸಾಬ ಜೊಲ್ಲೆ, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಸಂಜಯ ಪಾಟೀಲ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ಎಮ್ ಎಲ್ ಮುತ್ತೇನ್ನವರ, ಬಿಜೆಪಿ ಜಿಲ್ಲಾ ಸಹ ಉಸ್ತುವಾರಿ ಬಸವರಾಜ ಯಂಕಂಚಿ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಪ್ರೇಮಾ ಭಂಡಾರಿ, ಅರಭಾಂವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಜಿಪಂ ಸದಸ್ಯರಾದ ಗೋವಿಂದ ಕೊಪ್ಪದ, ವಾಸಂತಿ ತೇರದಾಳ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ ಸ್ವಾಗತಿಸಿದರು, ಪರಸಪ್ಪ ಬಬಲಿ ನಿರೂಪಿಸಿದರು. ಪ್ರಕಾಶ ಮಾದರ ವಂದಿಸಿದರು.

~ ರಮೇಶ, ಬಾಲಚಂದ್ರ ಇನ್ನೇರಡು ದಿನದಲ್ಲಿ ಪ್ರಚಾರದಲ್ಲಿ ಭಾಗಿ

ಕೇಲವು ಕಾರಣಾಂತರಗಳಿಂದ ಮಾಜಿ ಸಚಿವ ರಮೇಶ ಜಾರಕಿಹೊಳಿ ಮತ್ತವರ ಸಹೋದರ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿಲ್ಲ ಇನ್ನೇರಡು ದಿನದಲ್ಲಿ ಇವರಿಬ್ಬರೂ ತಮ್ಮ ತಮ್ಮ ಮತಕ್ಷೇತ್ರಗಳಲ್ಲಿ ಮಂಗಳಾ ಅಂಗಡಿಯವರ ಪರ ಮತ ಯಾಚಿಸಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೇಟ್ಟರ ಹಾಗೂ ಸಚಿವ ಉಮೇಶ ಕತ್ತಿ ಹೇಳಿದರು.
ಮೂಡಲಗಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಸಾರ್ವಜನಿಕ ಸಭೆಯನ್ನುದ್ಧೇಶಿಸಿ ಮಾತನಾಡಿದ ಅವರು, ಈಗಾಗಲೆ ಗೋಕಾಕ ಮತ್ತು ಮೂಡಲಗಿಯಲ್ಲಿ ಜನ ಸಾಗರದ ಮದ್ಯೆ ಬಿರುಸಿನ ಪ್ರಚಾರ ಸಾಗುತ್ತಿದೆ. ಕೇಲವು ಕಾರಣಗಳಿಂದ ಇವರಿಬ್ಬರು ಪ್ರಚಾರದಿಂದ ದೂರವಿದ್ದು ಇಷ್ಟರಲ್ಲಿಯೇ ಪ್ರಚಾರಕ್ಕೆ ಆಗಮಿಸುವರು. ತಮ್ಮೊಂದಿಗೆ ಈಗಾಗಲೆ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿಯವರು ದೂರವಾಣಿ ಮೂಲಕ ಮಾತನಾಡಿದ್ದಾರೆ. ಎರಡು ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ ಮತಗಳನ್ನು ದೊರಕಿಸಿಕೊಡುವ ವಾಗ್ದಾನವನ್ನು ಸಹ ಮಾಡಿದ್ದಾರೆ. ಹೀಗಾಗಿ ಯಾವುದೆ ಸಂಶಯಕ್ಕೆ ಒಳಗಾಗದೆ ನಿಮ್ಮ ಮನೆ ಮಗಳಾದ ಮಂಗಳಾ ಅವರಿಗೆ ಊಡಿ ತುಂಬಿ ಲೋಕಸಭೆಗೆ ಆರಿಸಿ ಕಳಿಸುವಂತೆ ಅವರುಗಳು ಕೋರಿದರು.
ಗೋಕಾಕದಲ್ಲಿಂದು ಲಖನ್ ಜಾರಕಿಹೊಳಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಬಂದಿದ್ದೇವೆ. ಅವರು ಸಹ ಕಾಂಗ್ರೇಸ್‍ನ ಇತ್ತಿಚ್ಚಿನ ವಿದ್ಯಮಾನಗಳಗೆ ಬೆಸತ್ತಿದ್ದಾರೆ. ಬಿಜೆಪಿ ರಾಮನ ಪಕ್ಷವಾಗಿದ್ದು, ಕಾಂಗ್ರೇಸ್ ರಾವಣನ ಪಕ್ಷವಾಗಿದೆ ಎಂದು ಲಖನ್ ತಮ್ಮ ಬಳಿ ನೋವನ್ನು ತೊಡಿಕೊಂಡರೆಂದು ಸಚಿವ ಜಗದೀಶ ಶೇಟ್ಟರ, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಸೇರಿದಂತೆ ಹಲವರು ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ಲಖನ್ ಬೆಂಬಲಿಸಿದರೇ ನಮ್ಮ ಬಿಜೆಪಿ ಅಭ್ಯರ್ಥಿ ಭಾರಿ ಮತಗಳ ಅಂತರದಿಂದ ಆಯ್ಕೆಯಾಗುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page