ವರದಿ:ಕೆ.ವಾಯ್ ಮೀಶಿ
ಮೂಡಲಗಿ: ಸರ್ಕಾರಿ ಶಾಲೆಗಳು ಮಕ್ಕಳ ಕೊರತೆಯಿಂದ ಶಾಲೆಗಳು ಮುಚ್ಚುವಂತ ಪರಸ್ಥಿತಿ ನಿರ್ಮಾಣವಾಗಿದೆ. ಆದರೆ ಶೈಕ್ಷಣಿಕ ಕಾಳಜಿಯುಳ್ಳ ಶಿಕ್ಷಕರೊಬ್ಬರ ಪ್ರಯತ್ನದಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು. ಮಕ್ಕಳ ಜೊತೆ ಮಕ್ಕಳಾಗಿದ್ದು ಪಾಠ ಮಾಡುವ ಅಚ್ಚುಮೆಚ್ಚಿನ ಗುರು. ಆದರೆ ಶಾಲಾ ಮಕ್ಕಳಿಗೆ, ಪಾಲಕರಿಗೆ, ಎಸ್‍ಡಿಎಮ್‍ಸಿ ಸದಸ್ಯರು ಮತ್ತು ಸಿಬ್ಬಂದಿಗಳಿಗೆ ಶಿಕ್ಷಕನ ನಿವೃತ್ತಿಯಿಂದಾಗಿ ಗ್ರಾಮದಲ್ಲಿ ಬೇಸರದ ಛಾಯೆ ಮೂಡಿದೆ.
ತಾಲೂಕಿನ ತಳಕಟನಾಳ ಸರಕಾರಿ ಶಾಲೆಯಲ್ಲಿ ಪ್ರಧಾನ ಗುರುಗಳಾಗಿದ್ದ ರವೀಂದ್ರ ಕನಕಿಕೋಡಿ ಅವರು ಕಳೆದ ತಿಂಗಳು ನಿವೃತ್ತರಾಗಿದ್ದರು ಅದರ ಪ್ರಯುಕ್ತ ಅವರನ್ನು ಶಾಲಾ ಮತ್ತು ಎಸ್‍ಡಿಎಮ್‍ಸಿ ಸಿಬ್ಬಂದಿ, ಗಣ್ಯರು ಸತ್ಕರಿಸಿ ಬಿಳ್ಕೊಟ್ಟು ನಿವೃತ್ತಿ ಜೀವನ ಸುಖಮಯವಾಗಲಿ ಎಂದು ಶುಭ ಕೋರಿದರು.
ನಿವೃತ್ತಿ ಹೊಂದಿರುವ ಇವರು ಅಕ್ಕತಂಗೇರಹಾಳ ಗ್ರಾಮದ ಉರ್ದು ಶಾಲೆಯಲ್ಲಿ ಕನ್ನಡ ಶಿಕ್ಷರಾಗಿ 16 ವರ್ಷ ಸೇವೆ, ಲಕ್ಷ್ಮೇಶ್ವರದಲ್ಲಿ 7ವರ್ಷ, ಮೂಡಲಗಿಯ ಮುಗಳಖೋಡ (ಸೋನವಾಲ್ಕರ) ತೋಟದ ಶಾಲೆಯಲ್ಲಿ 2ವರ್ಷ, ನಾಗನೂರ ನಾಯ್ಕರ ತೋಟ ಶಾಲೆಯಲ್ಲಿ 8 ವರ್ಷ ಹೀಗೆ ಹಲವಾರು ಕಡೆ ಉತ್ತಮವಾಗಿ ಸೇವೆ ಸಲ್ಲಿಸಿದ ಇವರು ಅಪಾರ ಶಿಷ್ಯವರ್ಗವನ್ನೆ ಹೊಂದಿದ್ದಾರೆ.
ಇವರ ಶಿಷ್ಯವರ್ಗ ಇಂದು ಸರಕಾರದ ಅನೇಕ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ವಿದ್ಯಾರ್ಥಿಯ ಪ್ರತಿಭೆ ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದು, ರಸ್ತೆಯಲ್ಲಿ ಸಂಚರಿಸುವ ಮಕ್ಕಳನ್ನು ಕರೆದು ವಿಚಾರಿಸಿ ಚನ್ನಾಗಿ ಓದುವಂತೆ ಬುದ್ಧಿವಾದ ಹೇಳುತ್ತಾ, ತಂದೆ ತಾಯಿ, ಕಲಿಸಿದ ಗುರುಗಳ ಹೆಸರು ತರುವಂತೆ ಹಾಗೂ ಹಿರಿಯರನ್ನು ಗೌರವಿಸುವಂತೆ ಸಲಹೆ ನೀಡುವುದರ ಜೊತೆಗೆ ಅನೇಕ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ನೆರವು, ಶಾಲೆಯಿಂದ ಹೊರಗೂಳಿದ ಮಕ್ಕಳ ಪಾಲಕರಿಗೆ ತಿಳಿ ಹೇಳಿ ಮರಳಿ ಶಾಲೆಗೆ ಕರೆ ತರುವ ಇಂತಹ ಕಾರ್ಯಗಳಿಂದ ಚಿಕ್ಕವರಿಂದ ಹಿಡಿದು ದೊಡ್ಡವರೆಲ್ಲರ ಅಚ್ಚುಮೆಚ್ಚಿನ ಪ್ರೀತಿಯ ಗುರುಗಳಾಗಿ ಮಹಾನುಭಾವರೆನಿಸಿಕೊಂಡಿದ್ದಾರೆ.
ಇಂತಹ ಸಾಮಾಜಿಕ ಕಳಕಳಿ ಹೊಂದಿದ ಇವರು ತಳಕಟನಾಳ ಗ್ರಾಮದ ಶಾಲೆಯೊಂದರಲ್ಲಿ ಕಾರ್ಯ ನಿರ್ವಹಿಸುವ ಸಮಯದಲ್ಲಿ ತೋಟಪಟ್ಟಿ ರೈತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದದೆಂದು ಮಕ್ಕಳ, ಪಾಲಕರ, ಮನ ಒಲಿಸಿ ಅವರನ್ನು ಶಾಲೆಯತ್ತ ಮುಖ ಮಾಡುವಂತೆ ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.
ಅತೀ ಕಡಿಮೆ ಮಕ್ಕಳು ಕಲೆಯುವ ಶಾಲೆಯಲ್ಲಿ 500 ಸಂಖ್ಯೆಗೆ ಏರಿಕೆ ಕಂಡ ಮಕ್ಕಳ ಪಟಸಂಖ್ಯೆ ನೋಡಿದ ಬಿಇಒ ಅಜೀತ ಮನ್ನಿಕೇರಿ ಅವರು ಇವರನ್ನು ಶ್ಲಾಘಿಸಿ,ಸತ್ಕರಿಸಿ ಗೌರವಿಸಿದ್ದಾರೆ. ಇವರ ಧರ್ಮ ಪತ್ನಿಯವರು ಕೂಡ ಸಧ್ಯ ಕನ್ನಡ ಶಿಕ್ಷಕಿಯಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ.
Check Also
ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ
Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …