ಮೂಡಲಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ಧ್ವನಿ ಸಂಘಟನೆಯ ಮೂಡಲಗಿ ತಾಲೂಕಾಧ್ಯಕ್ಷರಾಗಿ ಶಶಿಕುಮಾರ ದೊಡಮನಿ ಅವರನ್ನು ಆಯ್ಕೆ ಮಾಡಿ ರಾಜ್ಯಾಧ್ಯಕ್ಷರಾದ ಚಂದ್ರಕಾoತ ಕಾದ್ರೋಳ್ಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಸಂಘಟನೆಯಲ್ಲಿ ಬಾಬಾಸಾಹೇಬರ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿರಬೇಕು,ಸಂಘಟನೆಯ ವಿರೂಧ ಚಟುವಟಿಕೆ ಕಂಡು ಬಂದರೆ ತಕ್ಷಣದಿಂದ ತೆಗೆಯಲಾಗುವದು. ಸಮಾಜದಲ್ಲಿ ನಡೆಯುವ ದೌರ್ಜನ್ಯ ದಬ್ಬಾಳಿಕೆ ಬ್ರಷ್ಟಾಚಾರಕ್ಕೆ ಕಡಿವಾನ ಹಾಕಬೇಕು. ಸಾರ್ವಜನಿಕರಿಗೆ ಉಪಯುಕ್ತ ಕಾರ್ಯಗಳನ್ನು ಮಾಡುವ ಮೂಲಕ ಸಂಘಟನೆಗೆ ಬಲ ತುಂಬಬೇಕು ಎಂದು ತಿಳಿಸಿದ್ದಾರೆ.
Read More »
Sarvavani Latest Kannada News