ಶನಿವಾರ , ಡಿಸೆಂಬರ್ 21 2024
kn
Breaking News

ಕೊಳಕು ಹುಡುಕುವ ಕೊಳಕು ಮನವೇ. ಕೊಳಕಿನ ಹಿಂದಿರುವ ಬೆಳಕು ನೋಡಿ ಕಲಿ!

Spread the love

ಒಂದೆ ತರಾ ಇರೋಕೆ ಮನುಷ್ಯ ಮಸೀನ ಅಲ್ಲಾ,ಬದುಕಲ್ಲಿ ಬಂದ ಸಂಕಷ್ಟಗಳು, ಪರಿಸ್ಥಿತಿ ಸಮಯ ಸಂದರ್ಭಕ್ಕನುಸಾರವಾಗಿ ಮನುಷ್ಯ ಬದಲಾಗತಾಯಿರತ್ತಾನೆ.ಖಂಡಿತ ಬದಲಾವಣೆ ಇದ್ರೆನೆ ಬದುಕಿಗೆ ಬೆಲೆ, ಬದಲಾವಣೆ ಎನ್ನುವುದು ಬೆಳಕಿನತ್ತ ಸಾಗಬೇಕೆ! ವಿನಹ ಇನ್ನೊಬ್ಬರ ಭಾವನೆಗಳ ಜೊತೆಗೆ ಆಟವಾಡುವಂತಾಗಬಾರದು. ನಾನು ಹಿಂಗೆ ಬದುಕಬೇಕು, ಇದೆ ರೀತಿನೆ ಇರಬೇಕು, ಹಿಂಗೆ ಇದ್ರೆನೆ ನಾನು ನಾನಗಲು ಸಾಧ್ಯ ಎನ್ನುವ ಸಣ್ಣ ಯೋಚನೆಯು ನಮ್ಮನಾ ಸಧಾ ನೆನಪಿಸುತ್ತಿರಬೇಕು,ಅಂದಾಗಲೆ ಬದುಕಿಗೆ, ಭಾವನೆಗಳಿಗೆ ಒಂದೊಳ್ಳೆಯ ಅರ್ಥ ಸಿಗುತ್ತದೆ.

ಮೊದಲು ನಾವು ಸರಿ ಇರಬೇಕು ನಂತರ ಇನ್ನೊಬ್ಬರ ಸರಿ ತಪ್ಪುಗಳ ಬಗ್ಗೆ ಮಾತಾಡಬೇಕು,
ಆತ ನಮಗಿಂತ ಮುಂದೆ ಹೊರಟಿದ್ದಾನೆ, ಸಮಾಜದಲ್ಲಿ ಆತನ ಘನತೆ ಗೌರವ ಹೆಚ್ಚಾಗತ್ತಿದೆ ಆತನ ಹೆಂಗೆ ಮನಿಸೋದು,ಅವನ ಹೆಸರನ ಹೆಂಗೆ ಕೆಡಿಸೋದು ಅಂತಾ ಯೋಚಿಸುವ ಅದೆಷ್ಟು ಗುಳ್ಳೆ ನರಿಗಳು ಹೊಂಚು ಹಾಕಿ ಕಾಯುತ್ತಲೆ ಇರುತ್ತವೆ,ಒಬ್ಬ ವ್ಯಕ್ತಿ ಅಂತವರ ಮುಂದೆ ಬಂದು ಆತ ಹೆಂಗೆ? ಅಂತ ಕೇಳಿದ್ರೆ ಸಾಕು! ಆತ ಒಳ್ಳೆಯವನೆ ಇರ್ತಾನೆ ಆದರೆ ಇವನಿಗೆ ಆತನ ಯಶಸ್ಸು ನೋಡೊಕ ಆಗದೆ,ಇವನ ಇಮೇಜ್ ಗೊಸ್ಕರ ಆತನ ಇಮೇಜ್ ಡ್ಯಾಮೇಜ್ ಮಾಡಿ ಆತನ ಸಾವಿರಾರು ರಾತ್ರಿಗಳು ಸವಿಸಿ ಗಳಿಸಿದ ಘನತೆಯನಾ ಬರಿ ಎರಡು ನಿಮಿಷದಲ್ಲಿ ಹಾಳು ಮಾಡಿ ಬಿಡ್ತಾರಲ್ಲವ್ವ
ಇದೆಂತಾ ಯಶಸ್ಸು,ಇದೆಂತಾ ಪರಿವರ್ತನೆ,
ಎಲ್ಲರ ಮನಸ್ಸಲ್ಲು ಕೊಳಕು ಇದ್ದೆ ಇರುತ್ತೆ ಆದರೆ ಅದನಾ ಮೀರಿ ಒಳ್ಳೆಯದನ್ನು ಮಾಡುವ ಮನಸ್ಥಿತಿ ಇರುತ್ತಲ್ಲವ್ವ ಅದನಾ ನಾವೆಲ್ಲ ರೋಡಿಸಿಕೊಳ್ಳುವ ಅನಿವಾರ್ಯತೆ ನಮಗಿದೆ. ಸಿದ್ಧಯ್ಯ ಪುರಾಣಿಕರು ಹೇಳುವಂತೆ
” ಕೊಳಕು ಹುಡುಕುವ ಕೊಳಕು ಮನವೇ.
ಕೊಳಕಿನ ಹಿಂದಿರುವ ಬೆಳಕು ನೋಡಿ ಕಲಿ ಎಂದ.
ಹೌದು ಜೇನುಗೊಡು ಕಟ್ಟಬೇಕಾದರೆ ದುಂಭಿಯು ಇಡಿ ಹೂವನೆಲ್ಲಾ ತರೋದಿಲ್ಲಾ ಅದಕೆ ಬೇಕಾದ ಮಕರಂಧ ಮಾತ್ರ ತಂದು ಹೆಂಗೆ ಗೊಡು ಕಟ್ಟಿಕೊಳ್ಳುತ್ತವೆವೂ ಹಾಗೆ ನಾವು ಕೋಡಾ ಒಳ್ಳೆಯದನಾ ಪಡೆದು ಕೆಟ್ಟದ್ದಾನ ಕೊಟ್ಟಿಗೆಗೆ‌ ಸರಿಸಿ ಬದುಕಬೇಕು.
ನಂಟು ಅನ್ನೊದು ಜಾತಿ ಮತ ಪಂಥಗಳ ಆಧಾರದ ಮೇಲೆ ಬೆಳಿದಿರೊದಿಲ್ಲಾ,ಅದು ಬೆಳಿಯೋದು ನಾವು ಇರುವ ರೀತಿ,ನಡತೆ ನಾವಾಡುವ ಒಳ್ಳೆಯ ಮಾತುಗಳಿಂದಲೆ ಸಂಬಂಧ,ಗೆಳೆತನ ನಮಗಂಟ್ಟಿಕೊಂಡು ನಮಗೆ ಗೊತ್ತಿಲ್ಲದೆ ಲೈಪ ಲೀಡ್ ಮಾಡುತ್ತವೆ. ಯಾವುದಾದರು ಒಂದು ಸಮಾರಂಭದಲ್ಲಿ ನಿಮ್ಮನಾ ನಿಮ್ಮ ಸ್ನೇಹಿತ ಅವನ ಇನ್ನೊಬ್ಬ ಸ್ನೇಹಿತನಿಗೆ ನಿಮನಾ ಪರಿಚಯ ಮಾಡ್ತಾನೆ, ಇವನು ನನ್ನ ಸ್ನೇಹಿತ ಮುಕೇಶ್, ಅನ್ನುವಷ್ಟರಲ್ಲಿ ಇವರ ಬಗ್ಗೆ ಹಿಂದೊಂದ ಸಾರಿ ರಮೇಶ್ ನನಗೆ ಇವರ ಬಗ್ಗೆ ಹೇಳಿದ್ದಾ ತುಂಬಾ ಒಳ್ಳೆಯ ಮನುಷ್ಯ. ಅಂದಾಗ ಎದೆ ಹಿರಿ ಹಿರಿ ಹಿಗ್ಗಿ ಬೀಡುತ್ತೆ ಅಲ್ವಾ, ಅದೆ ನಮ್ಮ ಒಂದು ಜನ್ಮಕಾಗುವಷ್ಟು ಆನಂದ ತಂದು ಕೊಡುತ್ತೆ, ಅದೆ ನಾವು ಕೊಳಕು ಹುಡುಕುತ್ತಾ ಇನ್ನೊಬ್ಬರ ಹೆಸರು ಕೆಡಿಸುತ್ತಾ ಹೋದ್ರೆ ಇಂತಾ ಕ್ರಿಡೇಟ್ ಸಿಗೊದು ಮರಿಚಿಕೆ ಅಷ್ಟೇ. ಮರಿಚಿಕೆ ಎನ್ನವದಕ್ಕಿಂತ ನಮ್ಮ ಮನಿಸ್ಸಿಗೆ ನಾವು ಮಾಡಿಕೊಳ್ಳುವ ದ್ರೋಹ ,ಅಸುಹೆ
ನಮ್ಮ ಪರಿಸ್ಥಿತಿ ಸರಿ ಇಲ್ಲಾ ಅಂತಾ ಇನ್ನೊಬ್ಬರ
ಮನಸ್ಥಿತಿ ಹಾಳು ಮಾಡುವುದು ಸೂಕ್ತವಲ್ಲ.
ನಮ್ಮವರೆಂದು ಒಪ್ಪಿಕೊಳ್ಳುವರನಾ ಮುಲಾಜಿಲ್ಲದೆ ಅಪ್ಪಿಕೊಳ್ಳಿ. ನಿಮ್ಮನಾ ಪ್ರೀತಿಸುವರನಾ ನೀವು ಪ್ರೀತಿಸಿ
ಯಾರ ಸಹವಾಸವು ಬೇಡ ಅಂತಾ ದೂರ ಇದ್ದಾವರನಾ ಸಾಧ್ಯವಾದರೆ ನೀವು ದೊರದಿಂದಲೆ ಹಾರೈಸಿ.ಮಾನವೀಯತೆಯಿಂಲೆ ಮನುಷ್ಯ ದೊಡ್ಡವನಾಗಿದ್ದು. ಭಾವಗಳು ಬಣ್ಣವಾಗಿ ಬದುಕಿಗೆ ಬೆಳಕಾಗಬೇಕೆ ವಿನಹ! ನೋಡುವರ ಕಣ್ಣಿಗೆ ಬೆದರು ಗೊಂಬೆಯಾಗಬಾರದು.

– ಶಿವಲಿಂಗ ದಾನನ್ನವರ ಖಾನಟ್ಟಿ.


Spread the love

About gcsteam

Check Also

ಅಂಜುಮನ್ ಕಮಿಟಿಯಿಂದ ಕಡು ಬಡವರಿಗೆ ರಮಜಾನ ಕಿಟ್ ವಿತರಣೆ

Spread the loveಮೂಡಲಗಿ: ಪರಸ್ಪರರು ಸಂಭ್ರಮದಿಂದ ರಮಜಾನ ಹಬ್ಬ ಆಚರಿಸುವುದರ ಜೊತೆಗೆ ಕಡು ಬಡವರನ್ನು ಗುರುತಿಸಿ ಅವರಿಗೆ ನೆರವು ಒದಗಿಸುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page