ಶುಕ್ರವಾರ , ಮಾರ್ಚ್ 29 2024
kn
Breaking News

ಬಡ್ತಿ ಮೀಸಲಾತಿ ಆದೇಶ ಶೀಘ್ರ ಜಾರಿಯಾಗದಿದ್ದರೆ ಹೋರಾಟ:ಬೀರಪ್ಪ ಅಂಡಗಿ ಚಿಲವಾಡಗಿ

Spread the love

ಶಿವಮೊಗ್ಗ: ಸುಪ್ರೀಂಕೋರ್ಟ ಆದೇಶದಂತೆ ವಿಕಲಚೇತನ ನೌಕರರಿಗೆ ಅವರ ಸೇವಾ ಜೇಷ್ಠತೆಯನ್ನು ಅನುಸರಿಸಿ ಶೇಕಡಾ ೩ ರಷ್ಟು ಬಡ್ತಿಯಲ್ಲಿ ಮೀಸಲಾತಿ ನೀಡುವ ಆದೇಶವನ್ನು ರಾಜ್ಯ ಸರಕಾರವು ಶೀಘ್ರವೇ ಜಾರಿಗೆ ಮಾಡದಿದ್ದರೆ ಆದೇಶ ಜಾರಿಗಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದು ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದರು.
ಅವರು ನಗರದ ಸರಕಾರಿ ನೌಕರರ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಕಲಚೇತನ ನೌಕರರ ಜಿಲ್ಲಾ ಮಟ್ಟದ ಸಭೆಯನ್ನು ಉದ್ದೇಶಿಸಿ ಮಾತನಾಡಿ,ವಿಕಲಚೇತನ ನೌಕರರಿಗೆ ಅವರ ಸೇವಾಜೇಷ್ಠತೆಯನ್ನು ಅನುಸರಿಸಿ ಶೇಕಡಾ ೩ ರಷ್ಟು ಬಡ್ತಿಯಲ್ಲಿ ಮೀಸಲಾತಿ ನೀಡುವಂತೆ ದೇಶದ ಎಲ್ಲಾ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿ ೩ ವರ್ಷ ಕಳೆದರೂ ಕೂಡಾ ರಾಜ್ಯ ಸರಕಾರವು ಜಾರಿಗೆ ಮಾಡದಿರುವುದು ಖಂಡನೀಯ ಸಂಗತಿಯಾಗಿದೆ.ಈಗಾಗಲೇ ಅನೇಕ ಇಲಾಖೆಯಲ್ಲಿ ಬಡ್ತಿ ನೀಡಿದ್ದಾರೆ ಹಾಗೂ ಬಡ್ತಿ ನೀಡುವ ಎಲ್ಲಾ ಸಿದ್ದತೆಯನ್ನು ಮಾಡಿಕೊಂಡಿರುವುದರಿAದ ಬಡ್ತಿ ಮೀಸಲಾತಿ ಆದೇಶ ಜಾರಿಗೆಯಾಗದ ಹಿನ್ನಲೆಯಲ್ಲಿ ಬಡ್ತಿ ಎಂಬ ಸೌಲಭ್ಯದಿಂದ ವಿಕಲಚೇತನ ನೌಕರರು ವಂಚಿತರಾಗುತ್ತಿದ್ದಾರೆ.ಕೂಡಲೇ ಬಡ್ತಿ ಮೀಸಲಾತಿ ಆದೇಶವನ್ನು ರಾಜ್ಯ ಸರಕಾರವು ಜಾರಿಗೆ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಡ್ತಿ ಮೀಸಲಾತಿ ಆದೇಶ ಜಾರಿಗೊಳಿಸುವಂತೆ ಸಂಘದ ವತಿಯಿಂದ ಹೋರಾಟ ನಡೆಸಲಾಗುತ್ತದೆ.ಕರೋನಾ ಎಂಬ ಮಹಾಮಾರಿಯ ಹಿನ್ನಲೆಯಲ್ಲಿ ವಿಕಲಚೇತನರ ನೌಕರರ ಸಮಸ್ಯೆಗಳ ಬಗ್ಗೆ ಗಮನ ಹರಿಸಿದ ಸರಕಾರವು ವಿಕಲಚೇತನ ನೌಕರರಿಗೆ ಕಚೇರಿಗೆ ಆಗಮಿಸಲು ವಿನಾಯತಿ ನೀಡುವ ಕುರಿತಂತೆ ಸರಕಾರದ ಮುಖ್ಯ ಕಾರ್ಯದರ್ಶಿಗಳು ಎಲ್ಲಾ ವಿಕಲಚೇತನ ನೌಕರರಿಗೆ ಅನ್ವಯವಾಗುವಂತೆ ಆದೇಶ ಮಾಡಿದರೂ ಕೂಡಾ ಅನೇಕ ಅಧಿಕಾರಿಗಳು ಆ ಸೌಲಭ್ಯ ನೀಡದೆ ವಿನಾ ಕಾರಣ ನೀಡಿ ಸೌಲಭ್ಯದಿಂದ ವಂಚಿತರಾಗಿಸಿದ್ದಾರೆ.ಅAಥ ಅಧಿಕಾರಿಗಳ ಬಗ್ಗೆ ಈಗಾಗಲೇ ಮಾಹಿತಿ ಪಡೆದಿದ್ದು ಕೂಡಲೇ ಅಂಥವರ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗುತ್ತದೆ.
ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆಯ ವತಿಯಿಂದ ಯಾವ ರೀತಿಯಲ್ಲಿ ಸರಕಾರಿ ನೌಕರರಿಗೆ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗುತ್ತದೆ ಅದೇ ರೀತಿಯಲ್ಲಿ ವಿಕಲಚೇತನ ನೌಕರರಿಗೂ ಕೂಡಾ ಕ್ರೀಡಾಕೂಟವನ್ನು ಆಯೋಜನೆ ಮಾಡುವ ನಿಟ್ಟಿನಲ್ಲಿ ಸರಕಾರವು ಗಮನ ಹರಿಸಬೇಕಿದೆ.೨೦೧೬ರ ವಿಕಚೇತನರ ಕಾಯ್ದೆಯು ಜಾರಿಗೆ ಬಂದು ಅನೇಕ ವರ್ಷ ಕಳೆದರೂ ಕೂಡಾ ಸರಿಯಾದ ರೀತಿಯಲ್ಲಿ ಅನುಷ್ಟಾನ ಆಗದಿರುವುದು ಬೇಸರದ ಸಂಗತಿಯಾಗಿದೆ.ವಿಕಲಚೇತನರ ಕಾಯ್ದೆಯ ಸರಿಯಾದ ಅನುಷ್ಟಾನದ ಬಗ್ಗೆ ಅಧಿಕಾರಿಗಳು ಹೆಚ್ಚು ಕಾಳಜಿವಹಿಸಬೇಕಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾಧ್ಯಕ್ಷರಾದ ವಿವೇಕಾನಂದ ಮಾನೆ ಅವರು ಮಾತನಾಡುತ್ತಾ,ಯಾವುದೇ ಒಂದು ಸೌಲಭ್ಯವನ್ನು ಪಡೆಯಬೇಕಾದರೆ ಸಂಘಟನೆಯಿಂದ ಮಾತ್ರ ಸಾಧ್ಯವಾಗುತ್ತದೆ.ಜಿಲ್ಲೆಯ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುವ ವಿಕಲಚೇತನ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಒಂದು ಕಡೆಯಲ್ಲಿ ಸೇರಿದಾಗ ಮಾತ್ರ ಸರಕಾರವು ವಿಕಲಚೇತನ ನೌಕರರ ಬಗ್ಗೆ ಗಮನ ಹರಿಸುತ್ತದೆ.ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ವಿಕಲಚೇತನ ನೌಕರರ ಸಮ್ಮೇಳನವನ್ನು ಮಾಡುವ ಉದ್ದೇಶವನ್ನು ಹೊಂದಲಾಗಿದೆ.ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ವಿಕಲಚೇತನ ನೌಕರರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಲಾಗುತ್ತದೆ.ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಈಗಾಗಲೇ ಸರಕಾರಕ್ಕೆ ಮನವಿ ನೀಡಲಾಗಿದೆ ಹಂತ ಹಂತವಾಗಿ ಈಡೇರಿಕೆಯಾಗುವ ನೀರಿಕ್ಷೆ ಇದೇ ಎಂದು ಹೇಳಿದರು.
ಸಭೆಯಲ್ಲಿ ವಿಕಲಚೇತನ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜಪ್ಪ,ಉಪಾಧ್ಯಕ್ಷರಾದ ಗೋಪಾಲ.ಡಿ.ಕೆ.,ರವೀಶ, ಸಂಘಟನಾ ಕಾರ್ಯದರ್ಶಿ ಶಂಕ್ರಪ್ಪ.ಜಿ.ಕೆ,ತಾಲೂಕ ಅಧ್ಯಕ್ಷರಾದ ಸತೀಶ,ಕಾರ್ಯದರ್ಶಿ ಉಮೇಶ.ಎ.ವಿ.,ಭದ್ರವತಿ ತಾಲೂಕ ಅಧ್ಯಕ್ಷರಾದ ಹನುಮಂತಪ್ಪ,ಕಾರ್ಯದರ್ಶಿ ರಂಗಪ್ಪ,ಸಂಘದ ನಿರ್ದೇಶಕರಾದ ಪ್ರೇಮಮ್ಮ.ಎಸ್.ಸಿ.,ಶಾಂತೇಶಪ್ಪ.ಎನ್.ಟಿ.,ಸುಜಾತ.ಕೆ.ಸಿ ,ರರ್ಮಾಂಭ,ಮಹೇಶ.ಕೆ.ಟಿ.,ಲತಾಬೇಬಿ,ವೀರಪಬೀರಪ್ಪ ಅಂಡಗಿ ಚಿಲವಾಡಗಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.


Spread the love

About gcsteam

Check Also

ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನ-ಸಂಸದ ಕಡಾಡಿ ಸಂತಾಪ

Spread the loveಮೂಡಲಗಿ: ಏಳು ದಶಕಗಳ ಕಾಲ ತಮ್ಮ ಗಾನಸುಧೆಯಿಂದ ಸಂಗೀತ ಜಗತ್ತನ್ನು ಶ್ರೀಮಂತಗೊಳಿಸಿದ ಗಾನ ಕೋಗಿಲೆ, ಭಾರತರತ್ನ, ಪದ್ಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page