ಶುಕ್ರವಾರ , ಮಾರ್ಚ್ 29 2024
kn
Breaking News

ಸಂಪಾದಕೀಯ

Spread the love

ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ

ಕೊಟ್ಟಿದ್ದು ತಾ ಕೆಟ್ಟಿತೆನಬೇಡ…

ಮುಂದೆ ಕಟ್ಟಿಹುದು ಬುತ್ತಿ.. ಸರ್ವಜ್ಞ…! 

          ಇದು ತ್ರಿಕಾಲ ಜ್ಞಾನಿ ಸರ್ವಜ್ಞನ ನುಡಿ ಎನ್ನುವದು ಸರ್ವವಿಧಿತ! ಎಂದೋ ಯಾವ ಸಂದರ್ಭ- ಸನ್ನಿವೇಶದಲ್ಲಿ ಯಾವುದರ ಸ್ಪೂರ್ತಿಯಿಂದಲೋ ಸರ್ವಜ್ಞ ಕಟ್ಟಿದ ಈ ಪುಟ್ಟ ತ್ರಿಪದಿ ಇಂದು ನನ್ನ ಬದುಕಿನಲ್ಲಿ ಸತ್ಯವಾಗಿ ನಿಂತಿದೆ ಎಂದರೆ ನಿಜಕ್ಕೂ ಎಂತಹ ಅಚ್ಚರಿ! ಅದೆಂತಹ ಸಂಭ್ರಮ!! ನಿಜಕ್ಕೂ ನನ್ನಿಂದ ವರ್ಣಿಸಲು ಅಸಾಧ್ಯ. ಇಂತಹ ಘಟನೆಗಳಿಂದಲೇ “ ರವಿ ಕಾಣದ್ದನ್ನ, ಕವಿ ಕಾಣುತ್ತಾನೆ ಎನ್ನುವ ಮಾತು ಪ್ರಚಲಿತದಲ್ಲಿ ಬಂದಿರಬಹುದು.

            ಮೂಲತಃ ನಾನು ಕವಿ, ಕಥೆಗಾರ, ಕಲಾವಿದ, ಬರಹಗಾರನಲ್ಲ. ಆದರೆ ಮೊದಲಿನಿಂದಲು ನಾನು ಅವರ ನಿಕಟ ಸಂಪರ್ಕದಲ್ಲಿದ್ದವನು. ನಾನೊಬ್ಬ ಪ್ರಯತ್ನಶಿಲ ಕಾಯಕಜೀವಿ ಮತ್ತು ಅಣ್ಣ ಬಸವನ್ನನವರ ನುಡಿದಂತೆ “ಕಾಯಕವೇ ಕೈಲಾಸ” ಎನ್ನುವ ವಚನದಲ್ಲಿ ಸಂಪೂರ್ಣ ನಂಬಿಕೆ ಇಟ್ಟು ಆ ಕರ್ತವ್ಯದಲ್ಲಿಯೇ ದೇವರನ್ನ ಅರಸಿ ಆತ್ಮ ಸಂತೋಷಪಟ್ಟವನು ಎಂದು ಹೇಳುವುದರಲ್ಲಿ ನನಗೆ ಅತೀವ ಸಂತೋಷವೆನಿಸುತ್ತದೆ.

            ದೇವನೊಬ್ಬ ನಾಮ ಹಲವು ಎನ್ನುವಂತೆ ಎಲ್ಲ ದೇವರುಗಳಲ್ಲೂ ನಾನು ಭಕ್ತಿಪೂರ್ವಕವಾಗಿ ಬೇಡುವುದೊಂದೆ ನನಗೆ ಬಂದಿರುವ, ಬರಲಿರುವ ಎಲ್ಲ ನೋವುಗಳನ್ನು ನಿವಾರಿಸಿ, ನನಗೆ ನೀನು ನೀಡುವ ನಲಿವುಗಳಲ್ಲಿ ನನ್ನೊಂದಿಗಿರುವ ಎಲ್ಲ ಜನರಿಗೂ ಆ ನಲಿವನ್ನು ಸಮನಾಗಿ ಹಂಚು ದೇವರೆ ಎಂದು. ಏಕೆಂದರೆ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಮನಸ್ಸು ನನ್ನದು.

            ಮೊದಲೇ ಆಧ್ಯಾತ್ಮ ಜೀವಿಯಾದ ನಾನು ಓ ದೇವರೆ ಈ ಮನುಷ್ಯನ ಹುಟ್ಟು ಆಕಸ್ಮಿಕ! ಸಾವು ಮಾತ್ರ ಖಚಿತ!! ಆದರೆ ಈ ಹುಟ್ಟು ಸಾವುಗಳ ನಡುವಿನ ದಿನಗಳಲ್ಲಿ ನನ್ನಿಂದ ಈ ಸಮಾಜಕ್ಕೆ ಏನಾದರೂ ಸೇವೆ ಸಲ್ಲಿಸುವ ಮುಖಾಂತರ  ಮಾನವ ಬದುಕನ್ನ ಸಾರ್ಥಕಪಡಿಸು ತಂದೆ ಎಂದು ನನ್ನ ಒಳ ಮನಸ್ಸು ಚಟಪಡಿಸುತ್ತಿದ್ದಾಗ, ನನಗೆ ತಿಳಿದಿದ್ದು, ಕಣ್ಣು  ಮುಂದೆ ಕಟ್ಟಿದಂತೆ ನಿಂತಿದ್ದು ಪತ್ರಿಕಾ ವೃತ್ತಿ. ಆಗಸದಷ್ಟೇ ವಿಶಾಲವಾದ ಪತ್ರಿಕಾ ವೃತ್ತಿಯಿಂದ ಸಕಲ ಜನಾಂಗಕ್ಕೆ ನಾನು ಏನನ್ನಾದರೂ ಕೊಡಬಲ್ಲೆ ಎನ್ನುವ ಕನಸ್ಸು ಕಂಡೆ. ನಾನು ಕಾಣುತ್ತಿರುವ ಕನಸ್ಸು ಮತ್ತು ನನ್ನ ಮನಸ್ಸನ್ನ ನನ್ನ ಆತ್ಮಿಯ ಗೆಳೆಯರ ಮುಂದಿಟ್ಟೆ. ಆವಾಗ ಆ ಎಲ್ಲ ಸ್ಹೇಹಿತರ ಬೆಂಬಲ ಮತ್ತು ಹಸಿರು ನಿಶಾನೆ ಸಿಕ್ಕಾಗ ನಾನು ಮೂಕವಿಸ್ಮಿತನಾದೆ. ಥಟ್ಟನೆ ಆಗ ನೆನಪಾದದ್ದೆ ನಾನು ಮೇಲೆ ಮೆಲಕು ಹಾಕಿದ ತ್ರಿಕಾಲ ಜ್ಞಾನಿ ಸರ್ವಜ್ಞನ ವಚನ.

            ಮೂರಗೋಡ ಕೆಂಗೆರಿ ಮಠದ ಶ್ರಿ ಶಿವಚಿದಂಬರೇಶ್ವರನನ್ನು ಹಾಗೂ ಗುರು-ಹಿರಿಯರನ್ನು ಮನದಲ್ಲಿ ನೆನೆಸಿಕೊಂಡು ದಿ. 21-06-2010 ರಲ್ಲಿ ನನ್ನ ಆತ್ಮಿಯರೊಂದಿಗೆ “ಸರ್ವವಾಣಿ” ಕನ್ನಡ ವಾರ ಪತ್ರಿಕೆಯ ಮೊದಲ ಸಂಚಿಕೆಯನ್ನ ಬಿಡುಗಡೆ ಮಾಡಿದೆ.

            ಸುಮಾರು 10 ವರ್ಷಗಳ ಕಾಲ ನಮ್ಮ ಪತ್ರಿಕೆಯನ್ನ ಪ್ರೋತ್ಸಾಹಿಸಿ ಬೆಳೆಸಿದ ತಾವುಗಳು, ಇನ್ನು ಮುಂದೆಯು ನನ್ನ ಕನಸುಗಳಿಗೆ ಮೂರ್ತಿರೂಪ ಕೊಡುವವರು ನೀವಲ್ಲದೆ ಇನ್ನಾರು? ಎಂಬ ಪ್ರಶ್ನಾರ್ಥಕ ಚಿನ್ಹೆಯೊಂದಿಗೆ ಈ ನಿಮ್ಮ ಪತ್ರಿಕೆಯ ಮುಂದಿನ ನೋಟವನ್ನ ಈಗ “ಸರ್ವವಾಣಿ ನ್ಯೂಸ್” ಎಂದು ಆದುನಿಕರಣಗೊಳಿಸಿ, ರಾಜ್ಯಾದ್ಯಂತ ರಾಜಕೀಯ, ಆರ್ಥಿಕ, ಸಾಮಾಜಿಕ ಸುದ್ದಿಗಳನ್ನ ತತಕ್ಷಣದಲ್ಲಿ ಅಂತರ್ಜಾಲದ ಮುಖಾಂತರ ತಮ್ಮ ಕೈ ಸೇರುವಂತೆ ಮಾಡುವ ಉದ್ದೆಶದಿಂದ ನೂತನವಾಗಿ “ಸರ್ವವಾಣಿ ನ್ಯೂಸ್” ಎಂದು ಬಿಡುಗಡೆ ಮಾಡುತ್ತಿದ್ದೆವೆ.

 

                                                                                                                        ಸಂಪಾದಕ

                                                                                                            ಮಾರುತಿ ನಾ. ಸವಳೇಕರ 


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page